'ಧುರಂಧರ್' ಭರ್ಜರಿ ಯಶಸ್ಸು: ನ್ಯೂಯಾರ್ಕ್‌ನಲ್ಲಿ ಮೋದಕ ಸವಿದು ಸೆಲೆಬ್ರೇಟ್ ಮಾಡಿದ ರಣವೀರ್ ಸಿಂಗ್ ದಂಪತಿ! Ranveer Singh

ಭಾರತೀಯ ಸಾಂಪ್ರದಾಯಕ ಮೋದಕಗಳನ್ನು ರುಚಿನೋಡಿದ ಬಾಲಿವುಡ್​ ದಂಪತಿ ಚಿತ್ರ Instagram
ಭಾರತೀಯ ಸಾಂಪ್ರದಾಯಕ ಮೋದಕಗಳನ್ನು ರುಚಿನೋಡಿದ ಬಾಲಿವುಡ್​ ದಂಪತಿ ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ನ ಪವರ್ ಕಪಲ್ ಎಂದೇ ಪ್ರಸಿದ್ಧೀ ಪಡೆದ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ
  • ಧುರಂಧರ್​ ಯಶಸ್ಸನ್ನು ನ್ಯೂಯಾರ್ಕ್‌ನಲ್ಲಿ ವಿಶೇಷವಾಗಿ ಆಚರಿಸಿ ಬಾಲಿವುಡ್‌ ಕಪಲ್​
  • ಭಾರತೀಯ ಸಾಂಪ್ರದಾಯಕ ಮೋದಕಗಳನ್ನು ತಯಾರಿಸಿ, ರುಚಿ ಸವಿದ ದಂಪತಿ
New York: ಬಾಲಿವುಡ್‌ನ ಪವರ್ ಕಪಲ್ ಎಂದೇ ಪ್ರಸಿದ್ಧೀ ಪಡೆದ ರಣವೀರ್ ಸಿಂಗ್ (Ranveer Singh) ಮತ್ತು ದೀಪಿಕಾ ಪಡುಕೋಣೆ ಅವರು ಧುರಂಧರ್​ ಯಶಸ್ಸನ್ನು ನ್ಯೂಯಾರ್ಕ್‌ನಲ್ಲಿ ವಿಶೇಷವಾಗಿ ಆಚರಿಸಿದ್ದಾರೆ. ಈ ಜೋಡಿ ಪ್ರಸಿದ್ಧ ಶೆಫ್ ವಿಕಾಸ್ ಖನ್ನಾ ಅವರ NYC ರೆಸ್ಟೋರೆಂಟ್ ಬಂಗ್ಲೋಕ್ಕೆ ಭೇಟಿ ನೀಡಿ ಭಾರತೀಯ ಸಾಂಪ್ರದಾಯಕ ಮೋದಕಗಳನ್ನು ತಯಾರಿಸಿ, ರುಚಿ ಸವಿದಿದ್ದಾರೆ.
ಇದಾದ ನಂತರ ವಿಕಾಸ್​ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ದೀಪಿಕಾ ಮೋದಕ ಆಕಾರಕ್ಕೆ ತರಲು ಪ್ರಯತ್ನಿಸುತ್ತಿರುವುದು, ರಣವೀರ್ ಅವರನ್ನು ಶೆಫ್ ಮೋದಕ ತಿನ್ನಿಸುವ ಸಿಹಿ ಕ್ಷಣಗಳ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
ಇದು 2025 ರ ಅತ್ಯಂತ ಆಶೀರ್ವಾದದ ಅಂತ್ಯದ ಜೊತೆಗೆ ಭಾರತದ ಗೌರವಾರ್ಥ ಹೊಸ ಆರಂಭ. ರಣವೀರ್​ ಹಾಗೂ ದೀಪಿಕಾ ಅವರ ಮೊದಲ ಮೋದಕವನ್ನು ಆಚರಿಸುವ ಸೌಭಾಗ್ಯವನ್ನು ಟೀಮ್ ಬಂಗ್ಲೋ ಪಡೆದುಕೊಂಡಿದೆ. ಆದಾಗ್ಯೂ, 2026ರಲ್ಲಿ ಈ ರೆಸ್ಟೋರೆಂಟ್​ಗೆ ಬರುವ ನಮ್ಮ ಎಲ್ಲಾ ಅತಿಥಿಗಳಿಗೆ ಆರಂಭದಲ್ಲಿ  ದಾಳಿಂಬೆ ಮತ್ತು ಏಲಕ್ಕಿ ಮೋದಕಗಳನ್ನು ನೀಡಲಾಗುತ್ತದೆ ಎಂದು ಶೆಫ್​ ವಿಕಾಸ್​ ಬರೆದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.
ದಂಪತಿ ತಯಾರಿಸಿದ ಮೋದಕಗಳ ಬಗ್ಗೆ ವಿವರಿಸುತ್ತಾ, ಮೋದಕಗಳು ಗಣೇಶನಿಗೆ ಅರ್ಪಿಸುವ ಸಿಹಿಯಾದ ಆಹಾರವಾಗಿದೆ. ದಾಳಿಂಬೆಯನ್ನು ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಪವಿತ್ರವೆಂದು ಪರಿಗಣಿಸಲಾಗುತ್ತದೆ. ನಾನು ಸಿದ್ಧಿವಿನಾಯಕ ದೇಗುಲದಿಂದ ತಂದ ಮೋಲ್ಡ್‌ಗಳನ್ನು ಬಳಸಿ ಮೋದಕ ಮಾಡುತ್ತೇನೆ ಎಂದು ವಿಕಾಸ್​ ಬಹಿರಂಗಪಡಿಸಿದ್ದಾರೆ.

ಮೋದಕ ಎಂದರೇನು?

ಮೋದಕವು ಸಾಂಪ್ರದಾಯಿಕ ಭಾರತೀಯ ಸಿಹಿ ತಿಂಡಿಯಾಗಿದೆ. ಇದು ಗಣೇಶನಿಗೆ ಪ್ರಿಯವಾದುದರಿಂದ ಗಣೇಶ ಚತುರ್ಥಿಯಂದು ಈ ಸಿಹಿಯನ್ನು ಮಾಡಿ ನೈವೇದ್ಯಕ್ಕೆ ಇಡಲಾಗುತ್ತದೆ. ಅಕ್ಕಿ ಅಥವಾ ಗೋಧಿ ಹಿಟ್ಟಿನ ಹಿಟ್ಟಿನಿಂದ ತಯಾರಿಸಲಾದ ಈ ಸಿಹಿ ತಿಂಡಿಯನ್ನು ತುರಿದ ತೆಂಗಿನಕಾಯಿ ಮತ್ತು ಬೆಲ್ಲದ ಮಿಶ್ರಣದಿಂದ ತುಂಬಿಸಲಾಗುತ್ತದೆ. ಮೋದಕಗಳು ಶುಭ ಆರಂಭಗಳು, ಸಮೃದ್ಧಿ, ಬುದ್ಧಿವಂತಿಕೆ, ಆಶೀರ್ವಾದಗಳನ್ನು ಸಂಕೇತಿಸುತ್ತದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net