ತಾರಾ ಜೊತೆ ಬ್ರೇಕಪ್ ಬೆನ್ನಲ್ಲೇ ಹೊಸ ಗೆಳತಿಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕ ವೀರ್ Veer Pahariya
Veer Pahariya (ಚಿತ್ರ Instagram)
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಾಲಿವುಡ್‌ನಲ್ಲಿ ಸಂಬಂಧಗಳು ಬೆಳೆಯುವುದು ಮತ್ತು ಮುರಿಯುವುದು ಹೊಸದೇನಲ್ಲ
ತಾರಾ ಮತ್ತು ವೀರ್ ಪಹರಿಯಾ ಅವರ ಬ್ರೇಕಪ್ ಸುದ್ದಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು
ಮುಂಬೈನ ಜನನಿಬಿಡ ರಸ್ತೆಯೊಂದರಲ್ಲಿ ನಟ ಅಪರಿಚಿತ ಯುವತಿಯೊಂದಿಗೆ ಸುತ್ತಾಡುತ್ತಿದ್ದಾರೆ
ಜನವರಿ ಆರಂಭದಲ್ಲಿ ನಟಿ ತಾರಾ ಸುತಾರಿಯಾರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದ ನಟ
ಮುಂಬೈ: ಬಾಲಿವುಡ್‌ನಲ್ಲಿ ಸಂಬಂಧಗಳು ಬೆಳೆಯುವುದು ಮತ್ತು ಮುರಿಯುವುದು ಹೊಸದೇನಲ್ಲ. ಆದರೆ, ತಾರಾ ಸುತಾರಿಯಾ ಮತ್ತು ವೀರ್ ಪಹರಿಯಾ (Veer Pahariya) ಅವರ ಬ್ರೇಕಪ್ ಸುದ್ದಿ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಇದೀಗ ಬ್ರೇಕಪ್ ವದಂತಿಗಳು ಹಬ್ಬಿದ ಕೆಲವೇ ದಿನಗಳಲ್ಲಿ ವೀರ್ ಪಹರಿಯಾ ಹೊಸ ಸುದ್ದಿಯ ಮೂಲಕ ಮುನ್ನಲೆಗೆ ಬಂದಿದ್ದಾರೆ.
ಮುಂಬೈ ಬೀದಿಗಳಲ್ಲಿ ಕಂಡ ಆಕಸ್ಮಿಕ ಭೇಟಿ
ಇತ್ತೀಚೆಗೆ ಮುಂಬೈನ ಜನನಿಬಿಡ ರಸ್ತೆಯೊಂದರಲ್ಲಿ ನಟ ಅಪರಿಚಿತ ಯುವತಿಯೊಂದಿಗೆ ಸುತ್ತಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಈ ಯುವತಿ ಯಾರು? ವೀರ್ ಅವರ ಹೊಸ ಗೆಳತಿನಾ? ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.
2026 ರ ಜನವರಿ ಆರಂಭದಲ್ಲಿ ನಟಿ ತಾರಾ ಸುತಾರಿಯಾರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದ ನಟ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಅಪರಿಚಿತ ಯುವತಿಯೊಂದಿಗೆ ಕೈಹಿಡಿದು ಓಡಾಡುತ್ತಿರುವಂತಹ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಪ್ರತ್ಯಕ್ಷದರ್ಶಿಗಳು ಈ ಜೋಡಿಯನ್ನು ಕ್ಯೂಟ್ ಎಂದು ಬಣ್ಣಿಸಿದ್ದರು.
ಆದಾಗ್ಯೂ, ಆ ಯುವತಿಯು ಚಿಕ್ ಬಿಳಿ ಟಾಪ್ ಮತ್ತು ಜೀನ್ಸ್ ಧರಿಸಿದ್ದು, ಸನ್ಗ್ಲಾಸ್ ಮತ್ತು ಕ್ಯಾಪ್ನಿಂದ ಭಾಗಶಃ ಮುಖವನ್ನು ಮರೆಮಾಡಿಕೊಂಡಿದ್ದು, ಅವರಿಬ್ಬರ ಬಗ್ಗೆ ಊಹಾಪೋಹ ಹರಡಲು ಕಾರಣವಾಯಿತು.
ಈ ಹಿಂದೆ ಏನಾಗಿತ್ತು?
ಮುಂಬೈನಲ್ಲಿ ಶುಕ್ರವಾರ (ಡಿ.26) ರಾತ್ರಿ ನಡೆದ ಪಂಜಾಬಿ ಗಾಯಕ ಎಪಿ ಧಿಲ್ಲೋನ್ ಅವರ 'ಒನ್ ಆಫ್ ಒನ್' ಟೂರ್ ಸಂಗೀತ ಕಾರ್ಯಕ್ರಮಕ್ಕೆ ಈ ಜೋಡಿ ಅತಿಥಿಯಾಗಿ ಭಾಗವಹಿಸಿದ್ದರು. ಈ ಸಮಯದಲ್ಲಿ ಧಿಲ್ಲೋನ್, ತಾರಾರನ್ನು ವೇದಿಕೆಗೆ ಆಹ್ವಾನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿತ್ತು.
ಪೋಸ್ಟ್ನಲ್ಲೇನಿತ್ತು?
ತಾರಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಸಂಗೀತ ಕಚೇರಿಯ ವೀಡಿಯೊವನ್ನು ಹಂಚಿಕೊಂಡು ಜೋರಾಗಿ ಮತ್ತು ಹೆಮ್ಮೆಯಿಂದ ಮತ್ತು ಅದರಲ್ಲಿ ಒಟ್ಟಿಗೆ!!! ಎಂತಹ ರಾತ್ರಿ! ನಮ್ಮ ಹಾಡಿಗೆ ತುಂಬಾ ಪ್ರೀತಿ ನೀಡಿದ್ದಕ್ಕಾಗಿ ಮುಂಬೈಗೆ ಧನ್ಯವಾದಗಳು. ಇಲ್ಲಿನ ನೆನಪುಗಳು ಶಾಶ್ವತವಾಗಿ ನಮ್ಮೊಂದಿಗೆ ಇರುತ್ತವೆ.
ಆದಾಗ್ಯೂ, ಸುಳ್ಳು ನಿರೂಪಣೆಗಳು, ಬುದ್ಧಿವಂತ ಸಂಪಾದನೆ ಮತ್ತು ಜನರಿಂದ ಪಾವತಿಸಿದ ಪಿಆರ್ ಅಭಿಯಾನಗಳು ಯಾವುದೇ ಕಾರಣಕ್ಕೂ ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ನಮ್ಮ ಪ್ರೀತಿ ಮತ್ತು ಸತ್ಯ ಯಾವಾಗಲೂ ಗೆಲ್ಲುತ್ತದೆ ಎಂದು ಬರೆದು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್ಗೆ ವೀರ್ ಪ್ರತಿಕ್ರಿಯಿಸಿದ್ದು, "ನನ್ನ ಪ್ರತಿಕ್ರಿಯೆಯ ತುಣುಕನ್ನು ಮತ್ತೊಂದು ಹಾಡಿನ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ, ನಾನು ಜೋಕರ್ ಅಲ್ಲ ಎಂದು ಕಿಡಿಕಾರಿದ್ದರು.
ತಾರಾ ಮತ್ತು ವೀರ್ ಸಂಬಂಧ
ತಾರಾ ಸುತಾರಿಯಾ ಮತ್ತು ವೀರ್ ಪಹರಿಯಾ 2025 ರಲ್ಲಿ ಡೇಟಿಂಗ್ ಪ್ರಾರಂಭಿಸಿದರು. ಇವರಿಬ್ಬರು ಒಟ್ಟಿಗೆ ತಮ್ಮ ವೈಯಕ್ತಿಕ ಸಮಯವನ್ನು ಖಾಸಗಿ ವಿಹಾರಗಳಿಗೆ ಹೋಗುವುದರ ಮೂಲಕ ಗುರುತಿಸಿಕೊಂಡಾಗ, ಅವರ ಬಗ್ಗೆ ಅನೇಕ ಊಹಾಪೋಹಗಳು ಪ್ರಾರಂಭವಾದವು. ಇದಾದ ಬಳಿಕ ಆಗಸ್ಟ್‌ನಲ್ಲಿ ಈ ಜೋಡಿ ತಮ್ಮ ಸಂಬಂಧದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವುದರ ಮೂಲಕ ಸಂಬಂಧವನ್ನು ಬಹಿರಂಗಪಡಿಸಿದರು (ಏಜೆನ್ಸೀಸ್).