ಹಾಲಿವುಡ್‌ನತ್ತ ವರುಣ್ ಧವನ್ : ಬಾಲಿವುಡ್ ನಟನನ್ನು ಇಂಗ್ಲಿಷ್ ಚಿತ್ರರಂಗಕ್ಕೆ ಪರಿಚಯಿಸಲಿರುವ ಸ್ಟೀವನ್ ಸ್ಟಿಲ್‌ಬರ್ಗ್

ವರುಣ್ ಧವನ್​
ವರುಣ್ ಧವನ್​
Published on

ಪ್ರಮುಖ ಮುಖ್ಯಾಂಶಗಳು

  • ಹಾಲಿವುಡ್ ನತ್ತ ಚಿತ್ತ ಹರಿಸಿದ ವರುಣ್ ಧವನ್​
  • ಇಂಗ್ಲಿಷ್ ಚಿತ್ರಕ್ಕಾಗಿ ಕಠಿಣ ತರಬೇತಿ ನಡೆಸಿದ್ದಾರಂತೆ ಬಾಲಿವುಡ್ ನಟ
  • ಸ್ಟೀವನ್ ಸ್ಟಿಲ್‌ಬರ್ಗ್ ಅಥವಾ ಅನುರಾಗ್ ಕಶ್ಯಪ್ ಇಬ್ಬರಲ್ಲಿ ಒಬ್ಬರ ನಟನ ಪರಿಚಯಿಸಲಿದ್ದಾರೆ
ಬಾಲಿವುಡ್‌ನ ಹಲವು ನಟ-ನಟಿಯರು ಈಗಾಗಲೇ ಹಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಮಿತಾಭ್ ಬಚ್ಚನ್, ಅನಿಲ್ ಕಪೂರ್, ನಾಸಿರುದ್ದೀನ್ ಷಾ, ಪ್ರಿಯಾಂಕಾ ಚೋಪ್ರಾ, ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಹೀಗೆ ಪಟ್ಟಿ ಸಾಗುತ್ತಿದೆ. ಅಷ್ಟೇ ಅಲ್ಲದೇ, ನಟರಾದ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ಇಬ್ಬರು ಒಂದೇ ಇಂಗ್ಲಿಷ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿಯಿದೆ. ಈ ನಡುವೆಯೇ, ಮತ್ತೊಬ್ಬ ಬಾಲಿವುಡ್ ನಟ ಹಾಲಿವುಡ್‌ನತ್ತ ಮುಖಮಾಡಲು ಸಿದ್ಧರಾಗುತ್ತಿದ್ದಾರೆ. ಅವರೇ ವರುಣ್ ಧವನ್. ನಿರ್ದೇಶಕ ಡೇವಿಡ್ ಧವನ್ ಪುತ್ರ ವರುಣ್, 2012ರಲ್ಲಿ ತೆರೆಕಂಡ ‘ಸ್ಟುಡೆಂಟ್ ಆ್ ದ ಇಯರ್’ ಮೂಲಕ ಹಿಂದಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ‘ಎಬಿಸಿಡಿ 2’, ‘ದಿಲ್‌ವಾಲೆ’, ‘ಕಳಂಕ್’, ‘ಬಾರ್ಡರ್ 2’ ಸೇರಿ ಹಲವು ಚಿತ್ರಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ ಹಿಂದಿ ಸಿನಿಮಾಗಳಲ್ಲಿ ಬಿಜಿಯಾಗಿರುವಾಗಲೇ ವರುಣ್, ಹಾಲಿವುಡ್‌ಗೆ ಜಂಪ್ ಆಗಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ವತಃ ಅವರೇ ಮಾಹಿತಿ ನೀಡಿದ್ದು, ‘ನಟನೆಯಲ್ಲಿ ಪಳಗಲು ಮತ್ತಷ್ಟು ತರಬೇತಿ ಪಡೆಯುತ್ತಿದ್ದೇನೆ. ತಂದೆ (ಡೇವಿಡ್ ಧವನ್) ಮೂಲಕವೇ ಹಾಲಿವುಡ್ ಪ್ರವೇಶಿಸಬೇಕು ಎಂದುಕೊಂಡಿದ್ದೆ. ಆದರೆ, ಅಮೆರಿಕನ್ ನಿರ್ದೇಶಕ ಸ್ಟೀವನ್ ಸ್ಟಿಲ್‌ಬರ್ಗ್ ಅಥವಾ ಅನುರಾಗ್ ಕಶ್ಯಪ್ ಇಬ್ಬರಲ್ಲಿ ಒಬ್ಬರು ನನ್ನನ್ನು ಹಾಲಿವುಡ್‌ಗೆ ಪರಿಚಯಿಸಲಿದ್ದಾರೆ. ಈ ವಿಚಾರವನ್ನು ತಂದೆಗೆ ಹೇಳಿದಾಗ ಅಚ್ಚರಿಯಾಗಿದ್ದರು’ ಎಂದು ವರುಣ್ ಹೇಳಿಕೊಂಡಿದ್ದಾರೆ. ಅಮೆರಿಕನ್ ನಿರ್ದೇಶಕ ಸ್ಟೀವನ್ ಸ್ಟಿಲ್‌ಬರ್ಗ್ ಹಾಲಿವುಡ್‌ನ ‘ಫೈರ್‌ಲೈಟ್’, ‘ಡ್ಯುಯೆಲ್’, ‘ಇಂಡಿಯಾನಾ ಜೋನಸ್ ಆ್ಯಂಡ್ ದ ಟೆಂಪಲ್ ಧೂಮ್’ ಸೇರಿ ಹಲವು ಇಂಗ್ಲಿಷ್ ಚಿತ್ರಗಳಿಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net