ಮದುವೆಯಾಗುವ ನಿರೀಕ್ಷೆಯಲ್ಲಿದ್ದರು... ಅಕ್ಷಯ್ ಕುಮಾರ್​​-ಶಿಲ್ಪಾ ಶೆಟ್ಟಿ ಲವ್​ಸ್ಟೋರಿ ಬಗ್ಗೆ ಅಚ್ಚರಿ ಮಾಹಿತಿ ಬಹಿರಂಗ!

Akshay Kumar-Shilpa Shetty
Akshay Kumar-Shilpa Shetty
Published on

ಪ್ರಮುಖ ಮುಖ್ಯಾಂಶಗಳು

  • ಅಕ್ಷಯ್​-ಶಿಲ್ಪಾ ಮದುವೆಯಾಗುವ ಅಂಚಿನಲ್ಲಿದ್ದರು.. ಆದರೆ, ಪಾಲಕರ ಷರತ್ತುಗಳಿಂದ ದೂರವಾದ್ರು
  • ಈ ಇಬ್ಬರ ಲವ್​ಸ್ಟೋರಿ ಬಗ್ಗೆ ಅಚ್ಚರಿ ಮಾಹಿತಿ ಬಹಿರಂಗಗೊಳಿಸಿದ ನಿರ್ದೇಶಕ
ಮುಂಬೈ: ಬಾಲಿವುಡ್​​ನಲ್ಲಿ ಸೆಲೆಬ್ರಿಟಿಗಳ ಖಾಸಗಿ ಜೀವನದ ಬಗ್ಗೆ ಸದಾ ಒಂದಲ್ಲೊಂದು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಆದಾಗ್ಯೂ, ನಟ ಅಕ್ಷಯ್​​ಕುಮಾರ್ ಮತ್ತು ಶಿಲ್ಪಾಶೆಟ್ಟಿ 90ರ ದಶಕದಲ್ಲಿ ಬಾಲಿವುಡ್​ನಲ್ಲಿ ಮೋಡಿ ಮಾಡಿದ ಅದ್ಭುತ ಜೋಡಿಗಳು. ಈ ಇಬ್ಬರ ನಡುವೆ ಲವ್​ಸ್ಟೋರಿಯೊಂದು ನಡೆದಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ದೂರವಾದರೂ ಎಂದು ಹಾಗಾಗೇ ಸುದ್ದಿಯಾಗುತ್ತಲೇ ಇತ್ತು. ಆದರೆ, ಇದೀಗ ಬಾಲಿವುಡ್​ ನಿರ್ದೇಶಕರೊಬ್ಬರು ಇಬ್ಬರ ನಡುವಿನ ಲವ್​ಸ್ಟೋರಿ ಬಗ್ಗೆ ಬಹಿರಂಗಗೊಳಿಸಿದ್ದಾರೆ.
ಹೌದು, ಅಕ್ಷಯ್ ಅವರ ದೀರ್ಘಕಾಲದ ಜೊತೆಗಾರ, ಚಲನಚಿತ್ರ ನಿರ್ಮಾಪಕ ಸುನೀಲ್ ದರ್ಶನ್, ಇಬ್ಬರ ಬಾಂಧವ್ಯದ ಬಗ್ಗೆ ಮಾತನಾಡುತ್ತಾ, ಅವರು ಮದುವೆಯಾಗುವ ಅಂಚಿನಲ್ಲಿದ್ದರು. ಆದರೆ, ಶಿಲ್ಪಾ ಅವರ ಪಾಲಕರು ಕೆಲವು ನಿಯಮಗಳು ಮತ್ತು ಷರತ್ತುಗಳು ಅವರ ಸಂಬಂಧವನ್ನು ಕೊನೆಗೊಳಿಸಲು ಕಾರಣವಾಯಿತು ಎಂದು ಬಹಿರಂಗಪಡಿಸಿದ್ದಾರೆ.

ಸುನೀಲ್ ದರ್ಶನ್ ಹೇಳಿದ್ದೇನು..?

ಬಾಲಿವುಡ್ ಥಿಕಾನಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸುನೀಲ್ ದರ್ಶನ್, ಶಿಲ್ಪಾ ಅವರ ಪಾಲಕರು ಆ ಷರತ್ತುಗಳನ್ನು ವಿಧಿಸದಿದ್ದರೆ, ಅಕ್ಷಯ್​ ಜೀವನವು ಬೇರೆಯೇ ತಿರುವು ಪಡೆಯುತ್ತಿತ್ತು. ಆದರೆ, ಅವರ ಷರತ್ತುಗಳಿಂದಾಗಿ ಮದುವೆಯಾಗಲು ಬಯಸಿದ್ದ ಅಕ್ಷಯ್ ಮತ್ತು ಶಿಲ್ಪಾ ದೂರವಾದರು ಎಂದು ಹೇಳಿದರು.
ಯಾವ ರೀತಿಯ ಷರತ್ತುಗಳ ಎಂದು ಪ್ರಶ್ನಿಸಿದಾಗ, ಪಾಲಕರು ತಮ್ಮ ಮಗಳ ಸುರಕ್ಷತೆಗಾಗಿ ಏನು ಬೇಕಾದರೂ ಮಾಡುತ್ತಾರೆ, ಅದು ತಪ್ಪಲ್ಲ. ಎಲ್ಲಾ ರೀತಿಯ ಭದ್ರತೆ ಸಾಮಾನ್ಯವಾಗಿ ಕೇಳುತ್ತಾರೆ. ಗೆಲುವಿನ ಹಾದಿಯಲ್ಲಿದ್ದ ಅಕ್ಷಯ್​ಗೂ ಇಂತಹ ಬೇಡಿಕೆ ಇಟ್ಟಿದ್ದರು. ಶಿಲ್ಪಾ ಅವರ ಪಾಲಕರ ಬೇಡಿಕೆಗಳು ಅನುಚಿತವಾಗಿವೆ. ಅದು ಅವರ ತಪ್ಪು ಎಂದು ನಾನು ಭಾವಿಸಿದೆ ಎಂದು ಹೇಳಿದ್ದಾರೆ.

ಭವಿಷ್ಯವೇ ನಿಜವಾಯ್ತು!

ಟ್ವಿಂಕಲ್ ಖನ್ನಾ(ಅಕ್ಷಯ್​​ಕುಮಾರ್​ ಪತ್ನಿ) ಅವರ ತಂದೆ ರಾಜೇಶ್ ಖನ್ನಾ ಅವರ ಆಪ್ತ ಜ್ಯೋತಿಷಿಯೊಬ್ಬರು ಅಕ್ಷಯ್ ಮತ್ತು ಟ್ವಿಂಕಲ್ ವಿವಾಹವಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಇವರು ದೂರ ಆದ ಮೇಲೆ ಭವಿಷ್ಯವೇ ನಿಜವಾಯ್ತು ಎಂದು ಬಹಿರಂಗಪಡಿಸಿದ್ದಾರೆ.
ಇನ್ನು ಅಕ್ಷಯ್​ ಕುಮಾರ್ ಸಿನಿಮಾ ವಿಚಾರಗಳಿಗೆ ಬರುವುದಾದರೆ, ಭೂತ್ ಬಾಂಗ್ಲಾ, ಹೈವಾನ್ ಮತ್ತು ಹೇರಾ ಫೇರಿ 3 ಎಂಬ ಮೂರು ಮುಂಬರುವ(2026-2027) ಯೋಜನೆಗಳಿಗಾಗಿ ನಟ ಅಕ್ಷಯ್​ ಸಿದ್ಧರಾಗುತ್ತಿದ್ದಾರೆ. ಮೊದಲ ಎರಡು ಸಿನಿಮಾಗಳು ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net