ಮೌನವು ಮತ್ತೊಬ್ಬರಿಗೆ ನೀಡುವ ಶಿಕ್ಷೆಯಾಗಬಾರದು: ಸಂಜಯ್ ದತ್ ಪುತ್ರಿ ತ್ರಿಶಾಲಾ ದತ್ ನಿಗೂಢ ಪೋಸ್ಟ್ ವೈರಲ್​! Trishala Dutt

ಸಂಜಯ್ ದತ್ ಅವರ ಹಿರಿಯ ಪುತ್ರಿ ತ್ರಿಶಾಲಾ ದತ್ (ಚಿತ್ರ Instagram)
ಸಂಜಯ್ ದತ್ ಅವರ ಹಿರಿಯ ಪುತ್ರಿ ತ್ರಿಶಾಲಾ ದತ್ (ಚಿತ್ರ Instagram)
Published on
Trishala Dutt: ಬಾಲಿವುಡ್​ ನಟ ಸಂಜಯ್ ದತ್ ಅವರ ಹಿರಿಯ ಪುತ್ರಿ ತ್ರಿಶಾಲಾ ದತ್ ಅವರು ಇತ್ತೀಚೆಗೆ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ 'ಮೌನ' ಮತ್ತು ಅದರ ದುರುಪಯೋಗ ಎಂಬ ಪೋಸ್ಟ್​ಗಳನ್ನು ಹಂಚಿಕೊಂಡಿದ್ದು, ಸಧ್ಯ ಈ ಪೋಸ್ಟ್​ಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ತ್ರಿಶಾಲಾ ದತ್ ಅಮೆರಿಕದಲ್ಲಿ ಮನೋಚಿಕಿತ್ಸಕರಾಗಿದ್ದಾರೆ. ಇವರು ಸಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಪೋಸ್ಟ್ ಮಾಡುತ್ತಿರುತ್ತಾರೆ. ಈ ಬಾರಿ ಅವರು ಹಂಚಿಕೊಂಡಿರುವ ಮೌನ'ಕ್ಕೆ ಸಂಬಂಧಿಸಿದ ಪೋಸ್ಟ್‌ಗಳು ಯಾರನ್ನು ಉದ್ದೇಶಿಸಿವೆ. ಅಥವಾ ಜೀವನದಲ್ಲಿ ಏನಾದರೂ ಘಟನೆಗಳು ಸಂಭವಿಸಿವೇ ಎಂಬುದು ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ.
ತ್ರಿಶಾಲಾ ಅವರು ಮೌನ ಚಿಕಿತ್ಸೆಯ ನಡುವೆ ಎರಡು ವ್ಯತ್ಯಾಸವನ್ನು ತೋರಿಸಿದ್ದು, "ನಿಮ್ಮ ನರಮಂಡಲವನ್ನು ರಕ್ಷಿಸುವ ಮೌನವು 'ಆತ್ಮಗೌರವ'. ಆದರೆ, ಮತ್ತೊಬ್ಬರನ್ನು ಶಿಕ್ಷಿಸಲು ಬಳಸುವ ಮೌನವು 'ಅಧಿಕಾರದ ಆಟ' ಎಂದು ಒಂದು ಪೋಸ್ಟ್​ನಲ್ಲಿ ಬರೆದಿದ್ದಾರೆ.
ಮತ್ತೊಂದು ಪೋಸ್ಟ್​ನಲ್ಲಿ ಕಾಲಕ್ರಮೇಣ, ಈ 'ಮೌನದ ಶಿಕ್ಷೆ' ನಿಮ್ಮ ಸುರಕ್ಷತಾ ಪ್ರಜ್ಞೆ, ನಿಮ್ಮ ಮೇಲಿನ ಆತ್ಮವಿಶ್ವಾಸ ಮತ್ತು ಸಂಬಂಧಗಳ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುವಂತೆ ಮಾಡುತ್ತದೆ. ವಾಸ್ತವವಾಗಿ ಹೇಳುವುದಾದರೆ, ಸಂಬಂಧಗಳು ಸಮಸ್ಯೆಗಳನ್ನು ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳುವ ಜಾಗವಾಗಿರಬೇಕೆ ಹೊರತು, ನಿಮ್ಮ ಮೌನವನ್ನೇ ನಿಮ್ಮ ವಿರುದ್ಧ ಬಳಸುವ ದಾಳವಾಗಬಾರದು ಎಂದು ಬರೆದಿದ್ದಾರೆ.

ತ್ರಿಶಾಲ ಮತ್ತು ಸಂಜಯ್ ಅವರ ಸಂಬಂಧದ ಬಗ್ಗೆ

ಕಳೆದ ವರ್ಷ, ಸಂಜಯ್ ದತ್ 66 ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅವರ ಮಗಳು ಅವರೊಂದಿಗೆ ಒಂದು ಹಿಂದಿನ ಚಿತ್ರವನ್ನು ಹಂಚಿಕೊಂಡು ಪ್ರತಿದಿನ ನಿಮ್ಮನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇನೆ ಎಂದು ಬರೆದು ಶುಭಾಷಯಗಳನ್ನು ತಿಳಿಸಿದ್ದರು.
ಸಂಜಯ್ ದತ್ ತಮ್ಮ ಮೊದಲ ಪತ್ನಿ ರಿಚಾ ಶರ್ಮಾ ಅವರೊಂದಿಗೆ ತ್ರಿಶಾಲಾ ಫೋಟೋವನ್ನು ಆಕೆಯ ಹುಟ್ಟುಹಬ್ಬದಂದು ಹಂಚಿಕೊಂಡು ಶುಭಾಷಯ ತಿಳಿಸಿದ್ದರು. ರಿಚಾ ಶರ್ಮಾ 1996 ರಲ್ಲಿ ಮೆದುಳಿನ ಗೆಡ್ಡೆಯ ಸಮಸ್ಯೆಯಿಂದ ನಿಧನರಾದರು. ತ್ರಿಶಾಲಾ ಪ್ರಸ್ತುತ ಅಮೆರಿಕದಲ್ಲಿ ವಾಸಿಸುತ್ತಿದ್ದು, ಮನೋಚಿಕಿತ್ಸಕಿಯಾಗಿ ಕೆಲಸ ಮಾಡುತ್ತಿದ್ದಾರೆ.
ಸಂಜಯ್ ನಂತರ 2008 ರಲ್ಲಿ ಮನಯತಾ ದತ್ ಅವರನ್ನು ಎರಡನೇ ವಿವಾಹವಾದರು. 2010 ರಲ್ಲಿ, ದಂಪತಿ ಅವಳಿ ಮಕ್ಕಳನ್ನು ಸ್ವಾಗತಿಸಿದರು.

ಸಂಜಯ್ ದತ್ ಅವರ ಕೆಲಸ

ಸಂಜಯ್ ದತ್ ಕೊನೆಯ ಬಾರಿಗೆ ಆದಿತ್ಯ ಧಾರ್ ಅವರ ಧುರಂಧರ್ ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಯಶಸ್ವೀ ಪ್ರದಶ್ನವನ್ನು ಪಡೆದಿದ್ದು, ಜಾಗತಿಕವಾಗಿ 1,200 ಕೋಟಿಗೂ ಹೆಚ್ಚು ಗಳಿಸಿಕೊಂಡಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net