ಇದೊಂದು ಬಕ್ವಾಸ್​​ ಸಿನಿಮಾ; ಮುಸ್ಲಿಂಮರನ್ನು ದ್ವೇಷಿಸುವಂತೆ ಮಾಡುತ್ತಿದೆ; ಧುರಂಧರ್​ 2 ಬಗ್ಗೆ ಓವೈಸಿ ಕಿಡಿನುಡಿ! Asaduddin Owaisi on Dhurandhar 2

ಇದೊಂದು ಬಕ್ವಾಸ್​ ಸಿನಿಮಾ ಎಂದ ಓವೈಸಿ
ಇದೊಂದು ಬಕ್ವಾಸ್​ ಸಿನಿಮಾ ಎಂದ ಓವೈಸಿ
Published on

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್ 2
  • ಇದೊಂದು ಬಕ್ವಾಸ್​ ಸಿನಿಮಾ ಎಂದ ಓವೈಸಿ
  • ಇದರಲ್ಲಿ ಮುಸ್ಲಿಮರ ಮೇಲೆ ದ್ವೇಷದ ಹೊರತು ಮತ್ತೇನಿಲ್ಲ ಎಂದ ಹೈದರಾಬಾದ್​ ಸಂಸದ
ಹೈದರಾಬಾದ್​: ಮಾರ್ಚ್​ 19 ರಂದು ತೆರೆಕಂಡು ಭಾರತೀಯ ಸಿನಿಮಾ ರಂಗದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತಿರುವ ಸಿನಿಮಾ ಯಾವುದೆಂದರೆ ಅದು ಧರಂಧರ್​ 2: ದಿ ರಿವೆಂಜ್​ ಸಿನಿಮಾ. ಬಿಡುಗಡೆಯಾದ ಒಂದೇ ವಾರದಲ್ಲಿ ಸಾವಿರ ಕೋಟಿಗೂ ಹೆಚ್ಚಿನ ಕಲೆಕ್ಷನ್​ ಮಾಡಿರುವ ಈ ಸಿನಿಮಾ ತನ್ನ ಗಳಿಕೆಯನ್ನು ದಿನ ಕಳೆದಂತೆ ಹೆಚ್ಚಿಸಿಕೊಳ್ಳತ್ತಲೆ ಇದೆ.
ಆದರೆ ಈ ಸಿನಿಮಾವನ್ನು ಎಷ್ಟು ಜನ ಹೊಗಳುತ್ತಿದ್ದಾರೋ ಅಷ್ಟೇ ಜನ ತೆಗಳುತ್ತಲೂ ಕೆಲವರು ಬೊಗಳುತ್ತಲೂ ಇದ್ದಾರೆ. ಈದೀಗ ಈ ಸಿನಿಮಾ ಬಗ್ಗೆ ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್​ ಓವೈಸಿ (Asaduddin Owaisi on Dhurandhar 2) ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಛೀ..ಇದೊಂದು ಸಿನಿಮವೇ?

ಧುರಂಧರ್​ 2 ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿರುವ ಓವೈಸಿ, ಇದೊಂದು ಸಿನಿಮವೇ? ಮೂರು ಗಂಟೆಯ ಬಕ್ವಾಸ್​ ಎಂದು ಕಿಡಿಕಾರಿದ್ದಾರೆ.
ಜನ ನನ್ನ ಮಾತನ್ನೇ ಒಂದು ಗಂಟೆಗೆ ಮೀರಿ ಕೇಳುವುದಿಲ್ಲ, ಇನ್ನೂ ಈ ಮೂರು ಗಂಟೆಯ ಸಿನಿಮಾವನ್ನು ನೋಡುತ್ತಾರಾ?. ನಾನು ಕೇಳಿದಂತೆ ಈ ಸಿನಿಮಾದಲಿ ಅತೀಯಾದ ಹಿಂಸೆ, ಅವಾಚ್ಯ ಪದ ಮತ್ತು ಮುಸ್ಲಿಂಮರ ಮೇಲೆ ದ್ವೇಷದ ಹೊರತಾಗಿ ಬೇರೇನೂ ಇಲ್ಲ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಸಿನಿಮಾದಲ್ಲಿ ಏನನ್ನು ತೋರಿಸಿದ್ದಾರೆ?

ಈ ಧುರಂಧರ್​ ಸಿನಿಮಾದಲ್ಲಿ ಪಾಕಿಸ್ತಾನ ಒಂದು ಭಯೋತ್ಪಾದಕ ದೇಶ ಮತ್ತು ಹೇಗೆ ಈ ದೇಶ ಭಾರತವನ್ನು ನಾಶ ಪಡಿಸಲು ಪ್ರಯತ್ನಿಸುತ್ತದೆ ಎನ್ನುವುದನ್ನು ತೋರಿಸಿದೆ. ಈ ಸಿನಿಮಾದ ಕತೆ ಕಾಲ್ಪನಿಕ ಎಂದು ಸಿನಿಮಾದ ನಿರ್ದೇಶಕರು ಸ್ಪಷ್ಟ ಪಡಿಸಿದ್ದಾರೆ.
ಅದರೆ ಈ ಸಿನಿಮಾದಲ್ಲಿ ಭಾರತದ ಮೇಲೆ ಪಾಕಿಸ್ತಾನದಿಂದ ನಡೆದ ಕೆಲ ನೈಲ ದಾಳಿಗಳನ್ನು ಮತ್ತು ನಿಜ ಜೀವನದಲ್ಲಿ ಬದುಕಿದ್ದ ಮತ್ತು ಬದುಕಿರುವ ಹಲವರು ಪಾತ್ರಗಳನ್ನು ತೋರಿಸಿರುವ ಕಾರಣ ಪ್ರೇಕ್ಷಕರಿಗೆ ಈ ಸಿನಿಮಾ ಒಂದು ರೀತಿಯ ಡಾಕ್ಯುಮೆಂಟರಿ ರೀತಿ ಭಾಸವಾಗಿದೆ.

ಧುರಂಧರ್​ 2 ಬಗ್ಗೆ

ಧುರಂಧರ್​ 2 ಇದು ಧುರಂಧರ್​ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್​, ರಾಕೇಶ್​ ಬೇಡಿ, ಆರ್​.ಮಾಧವನ್​, ಅರ್ಜುನ್​ ರಾಂಪಾಲ್​, ಡ್ಯಾನಿಶ್​ ಇಕ್ಬಾಲ್​, ಸಾರಾ ಅರ್ಜುನ್​ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್​ ಸ್ಟ್ರೈಕ್​ ಸಿನಿಮಾದ ನಿರ್ದೇಶಕ ಆದಿತ್ಯ ಧರ್​ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net