ಜಿಮ್​ಗೂ ಮುನ್ನ ಈ ಆಹಾರ ತಿಂದ್ರೆ ಡೇಂಜರ್! ಮಿಲ್ಕಿ ಬ್ಯೂಟಿ ತಮನ್ನಾ ಟ್ರೈನರ್ ಬಿಚ್ಚಿಟ್ಟ ಫಿಟ್‌ನೆಸ್ ಗುಟ್ಟು.. Tamannaah Bhatia Fitness

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಜನರು ದೇಹವನ್ನು ಫಿಟ್​ ಆಗಿರಿಸಲು ವ್ಯಾಯಾಮ, ಯೋಗ ಮತ್ತು ಜಿಮ್​ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ
  • ವ್ಯಾಯಾಮದ ಮುಂಚೆ ಏನನ್ನು ಸೇವಿಸುತ್ತೀರೋ ಅದು ನಿಮ್ಮ ಶಕ್ತಿಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ
  • ವ್ಯಾಯಾಮ ದಿನಚರಿಯನ್ನು ಉತ್ತೇಜಿಸುವ ಸಲುವಾಗಿ ಉತ್ತಮ ಆಹಾರಗಳ ಮೇಲೆ ಅವಲಂಬಿತವಾಗಿರುತ್ತಾರೆ
  • ಈ ಆಯ್ಕೆಗಳು ನಿಮ್ಮನ್ನು ನಿಧಾನಗೊಳಿಸುವುದರ ಜೊತೆಗೆ ಆರೋಗ್ಯವನ್ನು ಹಾಳು ಮಾಡುತ್ತವೆ
Tamannaah Bhatia Fitness: ಇತ್ತೀಚಿನ ದಿನಗಳಲ್ಲಿ ಜನರು ದೇಹವನ್ನು ಫಿಟ್​ ಆಗಿರಿಸಲು ವ್ಯಾಯಾಮ, ಯೋಗ ಮತ್ತು ಜಿಮ್​ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಪ್ರಾರಂಭಿಸುತ್ತಾರೆ. ಆದಾಗ್ಯೂ, ನೀವು ವ್ಯಾಯಾಮದ ಮುಂಚೆ ಏನನ್ನು ಸೇವಿಸುತ್ತೀರೋ ಅದು ನಿಮ್ಮ ಶಕ್ತಿಯ ಮಟ್ಟಗಳು ಮತ್ತು ಒಟ್ಟಾರೆ ಕಾರ್ಯಕ್ಷಮತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ಅನೇಕ ಜನರು ತಮ್ಮ ವ್ಯಾಯಾಮ ದಿನಚರಿಯನ್ನು ಉತ್ತೇಜಿಸುವ ಸಲುವಾಗಿ ಉತ್ತಮ ಆಹಾರಗಳ ಮೇಲೆ ಅವಲಂಬಿತವಾಗಿರುತ್ತಾರೆ. ಈ ಆಯ್ಕೆಗಳು ನಿಮ್ಮನ್ನು ನಿಧಾನಗೊಳಿಸುವುದರ ಜೊತೆಗೆ ಆರೋಗ್ಯವನ್ನು ಹಾಳು ಮಾಡುತ್ತವೆ.
ನಟಿ ತಮನ್ನಾ ಭಾಟಿಯಾ ಅವರ ಫಿಟ್​ನೆಸ್​ ತರಬೇತುದಾರ ಸಿದ್ದಾರ್ಥ ಸಿಂಗ್​ ಇತ್ತೀಚೆಗೆ ಜಿಮ್​ ಹೋಗುವ ಮೊದಲು ತಪ್ಪಿಸಬೇಕಾದ ಆಹಾರಗಳ ಬಗ್ಗೆ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಅವು ವ್ಯಾಯಾಮದ ಮೇಲೆ ಹೇಗೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿಸಿದ್ದಾರೆ.

ವ್ಯಾಯಾಮಕ್ಕೆ ಮುನ್ನ ತಿನ್ನಬಾರದ 3 ಕೆಟ್ಟ ಆಹಾರಗಳು

ಜಿಮ್‌ನಲ್ಲಿ ನಿಮಗೆ ವರ್ಕೌಟ್​ ಮಾಡಲು ಶಕ್ತಿ ಬೇಕಾಗಿದ್ದರೆ, ವ್ಯಾಯಾಮಕ್ಕೂ ಮುನ್ನ ನೀವು ಏನನ್ನು ತಿನ್ನುತ್ತೀರಿ ಎಂಬುದು ಮುಖ್ಯವಾಗಿರುತ್ತದೆ. ಅನೇಕ ಜನರು ತಿಳಿಯದೇ ಜೀರ್ಣಕ್ರಿಯೆಗೆ ಹಾನಿ ಮಾಡುವಂತಹ ಆಹಾರವನ್ನು ಸೇವಿಸಿರುತ್ತಾರೆ. ಇವು ಹೊಟ್ಟೆ ಉಬ್ಬರ ಮತ್ತು ವ್ಯಾಯಾಮದ ಮಧ್ಯದಲ್ಲಿ ಶಕ್ತಿ ಕುಂದುವಂತೆ ಮಾಡುತ್ತದೆ. ಹಾಗಾದ್ರೆ, ವ್ಯಾಯಾಮದ ಮುಂಚೆ ತಪ್ಪಿಸಬೇಕಾದ ಆಹಾರಗಳು ಯಾವುದು ಎಂದು ನೋಡೋಣ ಬನ್ನಿ...

1. ಹುರಿದ ಆಹಾರಗಳು

ಹುರಿದ ಆಹಾರಗಳಲ್ಲಿ ಹೆಚ್ಚಿನ ಕೊಬ್ಬು ಶೇಖರಣೆಯಾಗಿರುತ್ತದೆ, ಇವುಗಳ ಸೇವನೆಯು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದರಿಂದ ಆಲಸ್ಯ, ಸೆಳೆತ ಮತ್ತು ಅಸ್ವಸ್ಥತೆಗೆ ಕಾರಣವಾಗುತ್ತದೆ. ಆದಾಗ್ಯೂ, ಹೆಚ್ಚಿನ ಕೊಬ್ಬು, ಜಿಡ್ಡಿನ ಆಹಾರಗಳನ್ನು ಸೇವಿಸಿದ ನಂತರ ವ್ಯಾಯಾಮ ಮಾಡುವಾಗ ಜೀರ್ಣಕಾರಿ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಸಿದ್ದಾರ್ಥ ಹೇಳಿದ್ದಾರೆ.

2. ಹೆಚ್ಚಿನ ಫೈಬರ್ ಆಹಾರಗಳು

ಹೆಚ್ಚಿನ ಫೈಬರ್ ಆಹಾರಗಳನ್ನು ವ್ಯಾಯಾಮದ ಮುಂಚೆ ಸೇವಿಸುವುದರಿಂದ ಅವು ಜೀರ್ಣಿಸಿಕೊಳ್ಳಲು ಕಠಿಣ ಮತ್ತು ನಿಧಾನವಾಗಿರುತ್ತವೆ. ನೀವೇನಾದರೂ ದೈಹಿಕ ಚಟುವಟಕೆಯ ಸಮಯದಲ್ಲಿ ಅವುಗಳನ್ನು ತಿನ್ನುವುದರಿಂದ ಹೊಟ್ಟೆನೋವು, ಅಜೀರ್ಣ, ಹೊಟ್ಟೆ ಸೆಳೆತ, ವಾಕರಿಕೆ ಮತ್ತು ಸಾಮಾನ್ಯ ಅಸ್ವಸ್ಥತೆಯಂತಹ ಜಠರಗರುಳಿನ ತೊಂದರೆಗೆ ಕಾರಣವಾಗಬಹುದು. ಇದರಿಂದ ನಿಮ್ಮ ವ್ಯಾಯಾಮವನ್ನು ನಿಲ್ಲಿಸಬೇಕಾಗುತ್ತದೆ.

3. ಹೆಚ್ಚಿನ ಸಕ್ಕರೆ ಆಹಾರಗಳು

ಕಾರ್ಬೋಹೈಡ್ರೇಟ್​ ಆಹಾರಗಳು ಮತ್ತು ಹೆಚ್ಚಿನ ಸಕ್ಕರೆ ಸೇರಿಸಿದ ಆಹಾರಗಳನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಳವಾದಂತೆ ಭಾಸವಾಗುತ್ತದೆ. ಆದರೆ, ನೀವೇನಾದರೂ ವ್ಯಾಯಾಮ ಮಾಡಲು ಪ್ರಾರಂಭಿಸಿದಾಗ ಶಕ್ತಿ ಕುಂದುವಂತೆ ಮಾಡುತ್ತದೆ. ಇದು ಹೆಚ್ಚಾದಂತೆ ತಲೆ ತಿರುಗುವಿಕೆ, ಆಯಾಸ, ವಾಕರಿಕೆ ಉಂಟಾಗುತ್ತದೆ.
ನೀವೇನಾದರೂ ಜಿಮ್​ಗೆ ಹೋಗುವ ಮೊದಲು ಆಹಾರವನ್ನು ಸೇವಿಸಲು ಬಯಸುತ್ತಿದ್ದರೆ, ಹೆಚ್ಚಿನ ಕಾರ್ಬೋಹೈಡ್ರೇಟ್, ಕಡಿಮೆ ಕೊಬ್ಬು, ಕಡಿಮೆ ಫೈಬರ್, ಮಧ್ಯಮ ಪ್ರೋಟೀನ್ ಭರಿತ ಆಹಾರವನ್ನು ಸೇವಿಸಿರಿ ಎಂದು ತಿಳಿಸಿದ್ದಾರೆ. ಆದಾಗ್ಯೂ, ದಿನದ ಕೊನೆಯಲ್ಲಿ ದೇಹಕ್ಕೆ ಶಕ್ತಿಯನ್ನು ಪಡೆಯಲು ಬಳಸಿದರೆ, ಉತ್ತಮ ಊಟವನ್ನು ಮಾಡಬೇಕು ಎಂದು ಸಿದ್ದಾರ್ಥ ತಿಳಿಸಿದ್ದಾರೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net