ಅದೊಂದು ಘಟನೆ ನನ್ನ ಉಸಿರು ಇರೋವರೆಗೂ ಕಾಡುತ್ತೆ! ಮನದಾಳದ ನೋವು ನೆನೆದು ಹಾಟ್​ಬ್ಯೂಟಿ ಕಣ್ಣೀರು | Sunny Leone

ಬಾಲಿವುಡ್​ ನಟಿ ಸನ್ನಿ ಲಿಯೋನ್
ಬಾಲಿವುಡ್​ ನಟಿ ಸನ್ನಿ ಲಿಯೋನ್
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್ ಚಿತ್ರಗಳಲ್ಲಿ ಬಿಜಿಯಿರುವ ನಟಿ ಸನ್ನಿ ಲಿಯೋನ್​
  • ಸಂದರ್ಶನದಲ್ಲಿ ತಮ್ಮ ಮನದಾಳದ ನೋವನ್ನು ಹಂಚಿಕೊಂಡ​ ಹಾಟ್​ಬ್ಯೂಟಿ
  • ಹಳೆಯ ಘಟನೆ ನೆನೆದು ಸಂದರ್ಶನದಲ್ಲೇ ಕಣ್ಣೀರಾಕಿದ ಸನ್ನಿ
ಮುಂಬೈ: ಒಂದು ಕಾಲದಲ್ಲಿ ನೀಲಿ ತಾರೆಯಾಗಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಮಾದಕ ಬ್ಯೂಟಿ ಸನ್ನಿ ಲಿಯೋನ್, ಇಂದು ಹಲವರಿಗೆ ಮಾದರಿಯ ನಟಿಯಾಗಿ ಜೀವನ ಸಾಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ತಮ್ಮ ಹೆಜ್ಜೆ ತಪಾಗಿತ್ತು ಎಂದು ಅರಿತ ಈ ನಟಿ, ಪೋರ್ನ್​ ಇಂಡಸ್ಟ್ರಿ ತೊರೆದು, ಹಿಂದಿ ಚಿತ್ರೋದ್ಯಮಕ್ಕೆ ಕಾಲಿಟ್ಟಿದ್ದಲ್ಲದೇ, ಒಂದು ಮಗುವನ್ನು ದತ್ತು ಪಡೆದು ತಮ್ಮ ಪತಿಯೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ. 
ಸದ್ಯ ಬಾಲಿವುಡ್​ನ ರಿಯಾಲಿಟಿ ಶೋ, ಸಿನಿಮಾ ಸೇರಿ ಒಂದಷ್ಟು ವಿಶೇಷ ಹಾಡುಗಳಲ್ಲಿ ಹೆಜ್ಜೆ ಹಾಕುವ ಸನ್ನಿ, ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು ಮಾತನಾಡುವಾಗ, ತಮ್ಮ ಬಾಳಿನಲ್ಲಿ ನಡೆದ ಕಹಿ ಘಟನೆಯೊಂದನ್ನು ನೆನೆದು ತೀರ ಭಾವುಕಾದರು. ತಮ್ಮ ತಾಯಿಯ ಅಗಲಿಕೆ ಕುರಿತಾಗಿ ಮೌನ ಮುರಿದ ಚೆಲುವೆ, "ಆ ದಿನ, ನಾನು ಸ್ವಲ್ಪ ಬೇಗನೇ ಶೂಟಿಂಗ್​ ಮುಗಿಸಿ, ಮನೆಗೆ ಹೋಗಿದಿದ್ದರೆ ಇಂದು ನನ್ನ ಅಮ್ಮನನ್ನು ಉಳಿಸಿಕೊಳ್ಳಬಹುದಿತ್ತು ಎಂದು ಕಣ್ಣೀರಾಕಿದರು.
"ನಾನು ಮನೆಗೆ ಹೋಗುವ ಹೊತ್ತಿಗೆ ಅಮ್ಮ ಕೊನೆಯುಸಿರೆಳೆದಿದ್ದರು. ಅದೇನೋ ಗೊತ್ತಿಲ್ಲ, ಎಲ್ಲ ಭಾರತೀಯ ಪೋಷಕರು ಹೀಗೆನಾ ಅಂತ? ತಾವು ಯಾವ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೀವಿ ಎಂದು ಅನೇಕ ತಂದೆ-ತಾಯಿ ತಮ್ಮ ಮಕ್ಕಳೊಂದಿಗೆ ಹಂಚಿಕೊಳ್ಳುವುದೇ ಇಲ್ಲ. ಬಹುಶಃ ಮಕ್ಕಳು ಎಲ್ಲಿ ಗಾಬರಿ ಅಥವಾ ಆತಂಕಕ್ಕೆ ಒಳಗಾಗುತ್ತಾರೋ ಎಂಬ ಕಾರಣಕ್ಕಾಗಿ ಅವರು ಈ ರೀತಿ ಮುಚ್ಚಿಡುತ್ತಾರೆ ಅನಿಸುತ್ತೆ. ನನ್ನ ತಾಯಿಯೂ ಹಾಗೆಯೇ ಮಾಡಿದರು ಎಂದರು.
ನಮ್ಮ ಅಪ್ಪನಿಗೆ ಸದಾ ಮಕ್ಕಳ ಖುಷಿ ಮಾತ್ರ ಬೇಕಿತ್ತು. ಹೀಗಾಗಿಯೇ, ಏನೇ ಆದರೂ ನಮಗೆ ಹೇಳುತ್ತಿರಲಿಲ್ಲ. ನಮ್ಮನ್ನು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿದ್ದರು. ನನಗೆ ಈಗಲೂ ಕಾಡುತ್ತಿರುವ ನೋವು, ಕೊನೆಯ ಕ್ಷಣಗಳಲ್ಲಿ ನನ್ನ ತಾಯಿ ಜೊತೆಯಲ್ಲಿರಲು ಆಗಲಿಲ್ಲ ಅನ್ನೋದು. ಇದು ಯಾವಾಗಲೂ ಕಾಡುತ್ತಲೇ ಇರುತ್ತದೆ" ಎಂದು ಕಣ್ಣೀರಾಕುತ್ತಲೇ ಸನ್ನಿ ಈ ಭಾವುಕ ಮಾತುಗಳನ್ನಾಡಿದರು,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net