ಸಂಜಯ್ ಕಪೂರ್ ಆಸ್ತಿ ವಿವಾದ: ನಟಿ ಕರಿಷ್ಮಾ ಕಪೂರ್‌ಗೆ ಸುಪ್ರೀಂ ಕೋರ್ಟ್ ನೋಟಿಸ್! Karisma Kapoor

ಕರಿಷ್ಮಾ ಕಪೂರ್,ಸಂಜಯ್ ಕಪೂರ್,ಪ್ರಿಯಾ ಕಪೂರ್
ಕರಿಷ್ಮಾ ಕಪೂರ್,ಸಂಜಯ್ ಕಪೂರ್,ಪ್ರಿಯಾ ಕಪೂರ್
Published on

ಪ್ರಮುಖ ಮುಖ್ಯಾಂಶಗಳು

  • ದಿವಂಗತ ಉದ್ಯಮಿ ಸಂಜಯ್ ಕಪೂರ್ ಆಸ್ತಿ ವಿವಾದಕ್ಕೆ ಹೊಸ ತಿರುವು
  • ಬಾಲಿವುಡ್ ನಟಿ ಕರಿಷ್ಮಾ ಕಪೂರ್​ಗೆ ಸುಪ್ರೀಂ ಕೋರ್ಟ್​ ನೋಟಿಸ್
  • ಸುಮಾರು 30 ಸಾವಿರ ಕೋಟಿ ಆಸ್ತಿ ಪ್ರಕರಣ
ನವದೆಹಲಿ: ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಹಿನ್ನಲೆಯಲ್ಲಿ ಬಾಲಿವುಡ್ ನಟಿ ಕರಿಷ್ಮಾ ಕಪೂರ್​(Karisma Kapoor)ಗೆ ಸುಪ್ರೀಂ ಕೋರ್ಟ್​ ನೋಟಿಸ್​ ಜಾರಿ ಮಾಡಿದೆ.
ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್ ಕರಿಷ್ಮಾ ಮತ್ತು ಸಂಜಯ್ ಅವರ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳ ಪ್ರತಿಗಳನ್ನು ನೀಡುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ಈ ನೋಟಿಸ್​ ಬಂದಿದೆ. ನಕಲಿ ವಿಲ್‌ಗಳು, ಆನ್‌ಲೈನ್ ಟ್ರ್ಯಾಕಿಂಗ್ ಮತ್ತು ವಾಟ್ಸಾಪ್ ಚಾಟ್ ಆರೋಪಗಳನ್ನು ಒಳಗೊಂಡಿರುವ ಈ ಪ್ರಕರಣದಲ್ಲಿ ಈಗ ಹೊಸದೊಂದು ಬೆಳವಣಿಗೆ ನಡೆದಿದೆ.

ವಿಲ್‌ಗಳ ದಾಖಲೆಗಾಗಿ ಸುಪ್ರೀಂ ಮೊರೆ ಹೋದ ಪ್ರಿಯಾ

ವರದಿಗಳ ಪ್ರಕಾರ, ದಿವಂಗತ ಉದ್ಯಮಿ ಸಂಜಯ್ ಕಪೂರ್ ಅವರ ಮೂರನೇ ಪತ್ನಿ ಪ್ರಿಯಾ ಕಪೂರ್, 2016 ರ ನಟಿ ಕರಿಷ್ಮಾ ಕಪೂರ್ ಮತ್ತು ಉದ್ಯಮಿ ಸಂಜಯ್ ಕಪೂರ್ ನಡುವಿನ ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳ ಪ್ರತಿಗಳನ್ನು ಪಡೆಯಲು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ.
ದಂಪತಿಗಳ ನಡುವೆ ಮಾಡಿಕೊಂಡ ಆರ್ಥಿಕ ಇತ್ಯರ್ಥಗಳು ಮತ್ತು ಮಕ್ಕಳ ಆರೈಕೆ ಒಪ್ಪಂದಗಳ ಕುರಿತು ಮಾಹಿತಿಯನ್ನು ದೃಢೀಕರಿಸಲು ಪ್ರಿಯಾ ಫೈಲ್‌ಗಳ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗುತ್ತದೆ.

ಕರಿಷ್ಮಾ ಮಕ್ಕಳಿಂದ ಸಂಜಯ್ ಕಪೂರ್ ವಿಲ್‌ಗೆ ಆಕ್ಷೇಪ

ದಿವಂಗತ ಉದ್ಯಮಿಯ ಆಸ್ತಿಗಾಗಿ ಹೋರಾಟ ಹೆಚ್ಚುತ್ತಲೇ ಇದ್ದು, ಸಂಜಯ್ ಕಪೂರ್ ಮತ್ತು ಕರಿಷ್ಮಾ ಕಪೂರ್ ಅವರ ಮಕ್ಕಳಾದ ಸಮೈರಾ ಮತ್ತು ಕಿಯಾನ್ ತಮ್ಮ ತಂದೆಯ ವಿಲ್‌ನ ಅನುಷ್ಠಾನಕ್ಕೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಪುರಾವೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಪ್ರಿಯಾ ಕಪೂರ್ ದೆಹಲಿ ಹೈಕೋರ್ಟ್‌ಗೆ ನೀಡಿದ ದಾಖಲೆಗಳಲ್ಲಿನ ವ್ಯತ್ಯಾಸಗಳ ಬಗ್ಗೆ ಕರಿಷ್ಮಾಳ ಮಕ್ಕಳು ನ್ಯಾಯಾಲಯಕ್ಕೆ ಮನವರಿಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಸಂಜಯ್ ಕಪೂರ್ ಅವರ ವಿವಾದಿತ ಉಯಿಲಿಗೆ ಸಹಿ ಹಾಕಲಾದ ದಿನ ತಾನು ಗುರುಗ್ರಾಮ್‌ನಲ್ಲಿದ್ದೆ ಎಂದು ಪ್ರಿಯಾ ಹೇಳಿಕೊಂಡಿದ್ದರೂ, ಆದರೆ ಪ್ರಿಯಾ ಅವರ ಮೊಬೈಲ್ ಫೋನ್ ನವದೆಹಲಿಯಲ್ಲಿದೆ ಎಂದು ದಾಖಲೆಗಳು ತೋರಿಸಿದ್ದವು.
ಅವರ ಅರ್ಜಿಯಲ್ಲಿ, ಸಂಜಯ್ ಮತ್ತು ಪ್ರಿಯಾ ಕಪೂರ್ ಅದೇ ದಿನ ಗುರುಗ್ರಾಮ್‌ನಲ್ಲಿ ಅಲ್ಲ, ದೆಹಲಿಯಲ್ಲಿದ್ದರು ಎಂದು ಆರೋಪಿಸಲಾಗಿದೆ. ಮಕ್ಕಳ ಪೋರ್ಚುಗೀಸ್ ನಾಗರಿಕತ್ವಕ್ಕೆ ಸಂಬಂಧಿಸಿದಂತೆ ಕರಿಷ್ಮಾ ಕಪೂರ್ ಅದೇ ದಿನ ವಾಟ್ಸಾಪ್‌ನಲ್ಲಿ ಸಂಜಯ್ ಜತೆ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ.

ಸಂಜಯ್ ಕಪೂರ್ ಆಸ್ತಿ ವಿವಾದ ಪ್ರಕರಣದ ಬಗ್ಗೆ

ದಿವಂಗತ ಉದ್ಯಮಿ ಮತ್ತು ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ ಸಂಜಯ್ ಜೂನ್ 12, 2025 ರಂದು ನಿಧನರಾದರು, ಇಂಗ್ಲೆಂಡ್‌ನಲ್ಲಿ ಪೋಲೋ ಪಂದ್ಯದ ಸಮಯದಲ್ಲಿ ಅವರು ಅನುಭವಿಸಿದ ಹೃದಯಾಘಾತದಿಂದ ಅವರು ನಿಧನರಾದರು. ಅವರ ಸೋನಾ ಕಾಮ್‌ಸ್ಟಾರ್‌ನಂತಹ ಕಂಪನಿಗಳಲ್ಲಿನ ಶೇರುಗಳನ್ನು ಒಳಗೊಂಡಂತೆ ಸುಮಾರು 30,000 ಕೋಟಿ ರೂ. ಆಸ್ತಿಯನ್ನು ಬಿಟ್ಟು ಹೋಗಿದ್ದಾರೆ.
ಅವರ ಮರಣದ ನಂತರ, ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ಕಪೂರ್, ಕರಿಷ್ಮಾ ಕಪೂರ್ ಅವರ ಮಕ್ಕಳು, ಅವರ ತಾಯಿ ರಾಣಿ ಕಪೂರ್ ಮತ್ತು ಅವರ ಸಹೋದರಿ ಸೇರಿದಂತೆ ಅವರ ಕುಟುಂಬದ ಹಲವಾರು ಸದಸ್ಯರ ನಡುವೆ ಅವರ ಪಿತ್ರಾರ್ಜಿತ ಆಸ್ತಿಯ ಬಗ್ಗೆ ದೊಡ್ಡ ವಿವಾದ ಉಂಟಾಗಿತು.
ಮಾರ್ಚ್ 21, 2025 ರಂದು ಸಂಜಯ್ ಕಪೂರ್ ಸಹಿ ಮಾಡಿರುವ ವಿವಾಧಿತ ವಿಲ್​ ಪ್ರಕಾರ ಅದರಲ್ಲಿ ಪ್ರಿಯಾ ಕಪೂರ್ ಸಂಜಯ್ ಅವರ ಸಂಪೂರ್ಣ ವೈಯಕ್ತಿಕ ಆಸ್ತಿಯನ್ನು ಪಡೆಯಲಿದ್ದಾರೆ. ಆದರೆ ಸಂಜಯ್​ ಅವರ ಮಕ್ಕಳು ಇದೊಂದು ನಕಲಿ ವಿಲ್​ ಎಂದು ಹೇಳಿ ಕಾನೂನು ಹೋರಾಟ ನಡೆಸುತ್ತಿದ್ದಾರೆ,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net