Sonam Kapoor: ಕಳೆದ ತಿಂಗಳು, ಬಾಲಿವುಡ್ ನಟಿ ಸೋನಮ್ ಕಪೂರ್ ಮತ್ತು ಅವರ ಪತಿ ಆನಂದ್ ಅಹುಜಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದು, ಗರ್ಭಧಾರಣೆಯ ಫೋಟೋವನ್ನು ಹಂಚಿಕೊಳ್ಳುವುದರ ಮೂಲಕ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ನಟಿ ಸೋನಮ್ ವಾಯು ಎಂಬ ಮಗನಿಗೆ ಜನ್ಮ ನೀಡಿದ ನಟಿ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಚಿಕ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಅಧೀಕೃತವಾಗಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
ಸೋನಮ್ ವಿಂಟೇಜ್ ಹಾಟ್-ಪಿಂಕ್ ಸೂಟ್ ಧರಿಸಿ ಕಾಣಿಸಿಕೊಂಡರು. ಈ ವಿನ್ಯಾಸವನ್ನು ಪ್ರಿನ್ಸೆಸ್ ಡಯಾನಾ ಅವರು ಅನೇಕ ಸಂದರ್ಭಗಳಲ್ಲಿ ಧರಿಸುತ್ತಿದ್ದರು.
ಸೋನಮ್ ಕಪೂರ್ಗೆ ಅಭಿನಂದನೆ ಸಲ್ಲಿಸಿದ ಬಾಲಿವುಡ್ ಸೆಲೆಬ್ರಿಟಿಗಳು
ಸೋನಮ್ ಅವರ ಪೋಸ್ಟ್‌ಗೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಕಾಮೆಂಟ್ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ನಟಿ ಪ್ರಿಯಾಂಕ ಚೋಪ್ರಾ ಅಭಿನಂದನೆಗಳು ಮಾಮಸಿತಾ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ನಟಿ ಸೋನಮ್ ಮತ್ತು ಆನಂದ್ ಮೇ 2018 ರಲ್ಲಿ ವಿವಾಹವಾದರು. ಆಗಸ್ಟ್ 2022 ರಲ್ಲಿ, ದಂಪತಿಗೆ ಗಂಡು ಮಗು ಜನಿಸಿದ್ದು, ಅದಕ್ಕೆ ವಾಯು ಎಂದು ಹೆಸರಿಟ್ಟಿದ್ದಾರೆ. ಈವರೆಗೂ ಸೋನಮ್ ತಮ್ಮ ಮಗನ ಮುಖವನ್ನು ಬಹಿರಂಗಪಡಿಸಿಲ್ಲ.
ಸೋನಮ್ ಕಪೂರ್ ಚಲನಚಿತ್ರಗಳು
ಸೋನಮ್ ಪ್ರಸ್ತುತ ಯಾವುದೇ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಅವರು ಕೊನೆಯ ಬಾರಿಗೆ OTT ನಲ್ಲಿ ಬಿಡುಗಡೆಯಾದ ಬ್ಲೈಂಡ್ ಚಿತ್ರದಲ್ಲಿ ಕಾಣಿಸಿಕೊಂಡರು. ಇದು ಹೆಚ್ಚಿನ ನಕರಾತ್ಮಕ ವಿಮರ್ಶೆಗಳನ್ನು ಪಡೆಯಿತು.
ಸೋನಮ್ ಬ್ಯಾಟಲ್ ಫಾರ್ ಬಿಟ್ಟೋರಾ ಚಿತ್ರದಲ್ಲಿ ನಟಿಸಬೇಕಿತ್ತು, ಆದರೆ ಪಾಕಿಸ್ತಾನಿ ಕಲಾವಿದರು ಭಾರತದಲ್ಲಿ ಕೆಲಸ ಮಾಡುವುದನ್ನು ನಿಷೇಧಿಸಿದ್ದರಿಂದ ಮತ್ತು ಪಾಕಿಸ್ತಾನಿ ನಾಯಕ ಫವಾದ್ ಖಾನ್ ನಾಯಕನಾಗಿ ನಟಿಸುತ್ತಿರುವುದರಿಂದ ಚಿತ್ರೀಕರಣವನ್ನು ಅರ್ಧಕ್ಕೆ ಕೈಬಿಡಲಾಯಿತು ಎಂದು ವರದಿಗಳು ಬಂದಿವೆ.
ಸೋನಮ್ ತನ್ನ ಎರಡನೇ ಗರ್ಭಧಾರಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರಿಂದ ನಟಿಯ ಅಭಿಮಾನಿಗಳು ದೊಡ್ಡ ಪರದೆಯ ಮೇಲೆ ಅವಳನ್ನು ನೋಡಲು ಒಂದೆರಡು ವರ್ಷಗಳ ಕಾಲ ಕಾಯಬೇಕಾಗಿದೆ (ಏಜೆನ್ಸೀಸ್).