ಮೋದಿ ಅವರೇ ಸಹಾಯ ಮಾಡಿ: ಯುದ್ಧದ ಭೀತಿಯಿಂದ ದುಬೈನಲ್ಲಿ ಸಿಲುಕಿದ ನಟಿ ಸೋನಲ್ ಚೌಹಾಣ್ ಕಳವಳ! Iran Israel Conflict

 Iran Israel Conflict (ಚಿತ್ರ Instagram)
Iran Israel Conflict (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿ ಕೇವಲ ಕ್ರೀಡಾಪಟುಗಳ ಮೇಲೆ ಮಾತ್ರವಲ್ಲದೆ
  • ಜನ್ನತ್' ಧಾರಾವಾಹಿಯ ಮೂಲಕ ಹೆಸರುವಾಸಿಯಾದ ನಟಿ ಸೋನಲ್​ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ
  • ತಮ್ಮ ಸಹಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯರಿಗೆ ಮನವಿ ಮಾಡಿದ ಪೋಸ್ಟ್ ವೈರಲ್​
Iran Israel Conflict: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧದ ಭೀತಿ ಕೇವಲ ಕ್ರೀಡಾಪಟುಗಳ ಮೇಲೆ ಮಾತ್ರವಲ್ಲದೆ, ಚಲನಚಿತ್ರ ಮತ್ತು ಕಿರುತೆರೆಯ ಕಲಾವಿದರ ಮೇಲೆಯೂ ಪರಿಣಾಮ ಬೀರಿದೆ. 'ಜನ್ನತ್' ಧಾರಾವಾಹಿಯ ಮೂಲಕ ಹೆಸರುವಾಸಿಯಾದ ನಟಿ ಸೋನಲ್​ ಈಗ ದುಬೈನಲ್ಲಿ ಸಿಲುಕಿಕೊಂಡಿದ್ದು, ತಮ್ಮ ಸಹಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯರಿಗೆ ಮನವಿ ಮಾಡಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ನಾನು ಪ್ರಸ್ತುತ ದುಬೈನಲ್ಲಿ ಬಿಕ್ಕಟ್ಟಿಗೆ ಸಿಲುಕಿಕೊಂಡಿದ್ದೇನೆ. ವಿಮಾನಗಳನ್ನು ರದ್ದುಗೊಳಿಸಿದ ಕಾರಣ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಆದರಿಂದ ಸುರಕ್ಷಿತವಾಗಿ ಮನೆಗೆ ಮರಳಲು ಸರ್ಕಾರದ ಮಾರ್ಗದರ್ಶನ ಮತ್ತು ಬೆಂಬಲವನ್ನು ಬಯಸುತ್ತಿದ್ದೇನೆ.
ಸರ್ಕಾರದಿಂದ ಯಾವುದೇ ಸಹಾಯ ಮತ್ತು ಸುರಕ್ಷಿತವಾಗಿ ವಾಪಸಾತಿಗೆ ಮಾರ್ಗದರ್ಶನಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ ನಟಿ ಸೋನಲ್ ಚೌಹಾಣ್  
ಕೆಲವು ಗಂಟೆಗಳ ಹಿಂದೆ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಆಲ್​ ಇಂಗ್ಲೆಂಡ್​ ಓಪನ್​ ಚಾಂಪಿಯನ್​ಶಿಪ್​ನಲ್ಲಿ ಭಾಗವಹಿಸಲು ಪ್ರಯಾಣಿಸುವಾಗ ತಂಡದೊಂಡಿಗೆ ದುಬೈನಲ್ಲಿ ಸಿಲುಕಿಕೊಂಡಿದ್ದರು. ಅವರು ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ವಿಮಾನ ನಿಲ್ದಾಣದಲ್ಲಾಗುತ್ತಿರುವ ಸಮಸ್ಯೆಗಳನ್ನು ಹಂಚಿಕೊಳ್ಳುವ ಒಂದು ಪೋಸ್ಟ್​ನ್ನು ಮಾಡಿದ್ದರು.

ಪೋಸ್ಟ್​ನಲ್ಲೇನಿತ್ತು?

ಈಗ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟವಾಗಿದೆ. ತಲೆಯ ಮೇಲೆ ನಡೆಯುವ ಪ್ರತಿಬಂಧಗಳ  ಶಬ್ದವನ್ನು ಕೇಳುವುದು ಮತ್ತು ಪರಿಸ್ಥಿತಿ ಎಷ್ಟು ವೇಗವಾಗಿ ಉಲ್ಬಣಗೊಂಡಿದೆ ಎಂಬುದನ್ನು ನೋಡುವುದು ನಿಜಕ್ಕೂ ಭಯಾನಕವಾಗಿದೆ. ದುಬೈ ನಾನು ತುಂಬಾ ಪ್ರೀತಿಸುವ ನಗರ, ಯಾವಾಗಲೂ ಸುರಕ್ಷಿತ ಮತ್ತು ಜೀವನದಿಂದ ತುಂಬಿರುವ ಸ್ಥಳ. ಆದರೆ, ಇಂದಿನ ಸ್ಥಿತಿಯನ್ನು ಗ್ರಹಿಸುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net