ಸ್ಮೃತಿ ಗೆಳೆಯನಿಗೆ ಸಿನಿಮಾ ಹೆಸರಲ್ಲಿ ವಂಚನೆ ಆರೋಪ; ಕೊನೆಗೂ ಮೌನ ಮುರಿದ ಪಲಾಶ್ ಮುಚ್ಚಲ್! Palash Muchhal

 ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್
ಸ್ಮೃತಿ ಮಂಧಾನ, ಪಲಾಶ್ ಮುಚ್ಚಲ್
Published on

ಪ್ರಮುಖ ಮುಖ್ಯಾಂಶಗಳು

  • ಸ್ಮೃತಿ ಮಂಧಾನ ಗೆಳೆಯನಿಗೆ ಆರ್ಥಿಕ ವಂಚನೆ ಮಾಡಿರುವ ಪಲಾಶ್​ ಮುಚ್ಚಲ್​?
  • ಸಿನಿಮಾ ಹೂಡಿಕೆ ಹೆಸರಿನಲ್ಲಿ 40 ಲಕ್ಷ ರೂಪಾಯಿ ವಂಚಿಸಿರುವುದಾಗಿ ಆರೋಪ
  • ನನ್ನ ಖ್ಯಾತಿಯನ್ನು ಹಾಳು ಮಾಡಲು ನಡೆಯುತ್ತಿರುವ ಪಿತೂರಿ ಎಂದ ಪಲಾಶ್​
ಮುಂಬೈ: ಭಾರತೀಯ ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ ಅವರೊಂದಿಗಿನ ವಿವಾಹ ರದ್ದಾದ ನಂತರ ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ (Palash Muchhal) ಹೊಸ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯ ಉದ್ಯಮಿಯೊಬ್ಬರಿಗೆ ಸುಮಾರು 40 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಪಲಾಶ್​ ಮೇಲೆ ಪ್ರಕರಣ ದಾಖಲಾಗಿದೆ.
ಈ ಆರೋಪದ ಕುರಿತಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಅದ ಹಿನ್ನಲೆ ಕೊನೆಗೂ ಮೌನ ಮುರಿದಿರುವ ಪಲಾಶ್​ ನನ್ನ ಮೇಲೆ ಹೊರಿಸಲಾಗುತ್ತಿರುವ ಆರೋಗಳು ಆಧಾರರರಹಿತ ಎಂದು ಹೇಳಿದ್ದಾರೆ.

ಹೆಸರು ಹಾಳು ಮಾಡುವ ಉದ್ದೇಶ ಹೊಂದಿದ್ದಾರೆ

ತಮ್ಮ ಮೇಲೆ ಕೇಳಿ ಬರುತ್ತಿರುವ ಆರೋಪಗಳಿಗೆ ಇನ್‌ಸ್ಟಾಗ್ರಾಮ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಪಲಾಶ್​ ಸಾಂಗ್ಲಿ ಮೂಲದ ವಿಜ್ಞಾನ್ ಮಾನೆ ಸಾಮಾಜಿಕ ಮಾಧ್ಯಮದಲ್ಲಿ ಮಾಡಿರುವ ಆರೋಪಗಳು ಆಧಾರರಹಿತವಾಗಿದ್ದು, ತಮ್ಮ ಖ್ಯಾತಿಗೆ ಧಕ್ಕೆ ತರುವ ಉದ್ದೇಶ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ನನ್ನ ಮೇಲೆ ಅವರು ಹೊರಿಸಿರುವ ಆರೋಪಗಳಿಗೆ ನಾನು ಕಾನೂನಿನ ಮೂಲಕ ಉತ್ತರ ನೀಡುತ್ತೇನೆ ಎಂದು ಪಲಾಶ್​ ಹೇಳಿದ್ದಾರೆ.

ನಾನು ಕಾನೂನು ಹೋರಾಟ ಮಾಡುತ್ತೇನೆ

ಈ ವಿಷಯವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ಕಾನೂನು ತಂಡವು ಈ ವಿಷಯವನ್ನು ಸಕ್ರಿಯವಾಗಿ ಪರಿಶೀಲಿಸುತ್ತಿದೆ ಎಂದು ಹೇಳಿದರು, ನನ್ನ ವಕೀಲ ಶ್ರೇಯಂಶ್ ಮಿಠಾರೆ ಈ ಪ್ರಕರಣವನ್ನು ನಿಭಾಯಿಸಲಿದ್ದು, ಕಾನೂನು ಹೋರಾಟದ ಮೂಲಕ ನ್ಯಾಯ ಪಡೆಯುವುದಾಗಿ ಪಲಾಶ್​ ಹೇಳಿದ್ದಾರೆ.
ಪಲಾಶ್​ ಮೇಲಿರುವ ಆರೋಪವೇನು?
ವರದಿಗಳ ಪ್ರಕಾರ, ಸಾಂಗ್ಲಿ ಮೂಲದ ವಿಜ್ಞಾನ್ ಮಾನೆ ಎಂಬ ವ್ಯಕ್ತಿಯಿಂದ ಸಿನಿಮಾ ನಿರ್ಮಾಣಕ್ಕಾಗಿ 40 ಲಕ್ಷ ಪಡೆದಿದ್ದ ಪಲಾಶ್​ ಆ ಹಣವನ್ನು ಹಿಂದಿರುಗಿಸದ ಕಾರಣ ಸಾಂಗ್ಲಿ ಪೊಲೀಸ್ ವರಿಷ್ಠಾಧಿಕಾರಿಗೆ ಔಪಚಾರಿಕ ದೂರು ದಾಖಲಾಗಿದೆ. ದೂರಿನ ಪ್ರಕಾರ, ಸ್ಮೃತಿ ಮಂಧಾನ ಅವರ ತಂದೆಯ ಮೂಲಕ ಪಲಾಶ್ ಅವರಿಗೆ ಮೊದಲು ಪರಿಚಯವಾಯಿತು ಎಂದು ವಿಜ್ಞಾನ್ ಹೇಳಿಕೊಂಡಿದ್ದಾರೆ. ಅವರ ಮೊದಲ ಭೇಟಿಯ ಸಮಯದಲ್ಲಿ, ಪಲಾಶ್  ತಮ್ಮ ಮುಂಬರುವ ಚಿತ್ರ ನಜರಿಯಾದಲ್ಲಿ ಹೂಡಿಕೆ ಮಾಡಲು ವಿಜ್ಞಾನ್ ಅವರನ್ನು ಕೇಳಿಕೊಂಡರು ಎಂದು ಆರೋಪಿಸಲಾಗಿದೆ.

ಹೂಡಿಕೆ ಮತ್ತು ಪಾತ್ರದ ಭರವಸೆ

ಚಿತ್ರವು OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾದ ನಂತರ ಪಲಾಶ್ ವಿಗ್ಯಾನ್‌ಗೆ 25 ಲಕ್ಷ ಹೂಡಿಕೆಯಲ್ಲಿ 12 ಲಕ್ಷ ಲಾಭವನ್ನು ಭರವಸೆ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಒಪ್ಪಂದದ ಭಾಗವಾಗಿ ವಿಜ್ಞಾನ್​ಗೆ ಚಿತ್ರದಲ್ಲಿ ಒಂದು ಪಾತ್ರವನ್ನು ಸಹ ನೀಡಲಾಗಿತ್ತು ಎಂದು ಹೇಳಲಾಗಿದೆ. ಅನೇಕ ಸಭೆಗಳ ನಂತರ, ಮಾರ್ಚ್ 2025 ರ ಹೊತ್ತಿಗೆ, ಯೋಜನೆಯಲ್ಲಿ ಒಟ್ಟು 40 ಲಕ್ಷ ಹೂಡಿಕೆ ಮಾಡಿದ್ದೇನೆ ಎಂದು ವಿಜ್ಞಾನ್ ಹೇಳಿಕೊಂಡಿದ್ದಾರೆ.

ಶೂಟಿಂಗ್​ ನಡೆದಿಲ್ಲ , ಹಣ ಹಿಂತಿರುಗಿಸಿಲ್ಲ

ಸುಮಾರು ಕಾಲದವರೆಗೆ ಕಾದರೂ ಸಹ ಸಿನಿಮಾದ ಚಿತ್ರಿಕರಣವೇ ಪೂರ್ಣಗೊಂಡಿಲ್ಲ ಎಂದು ವರದಿಯಾಗಿದೆ. ಪಲಾಶ್ ಬಳಿ ತನ್ನ ಹಣವನ್ನು ಮರಳಿ ಕೇಳಿದಾಗ ಮೊದಲು ಹಣ ಮರುಪಾವತಿಸಲು ಒಪ್ಪಿದ ಪಲಾಶ್​, ನಂತರದ ದಿನಗಳಲ್ಲಿ ತನ್ನ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವಿಜ್ಞಾನ್ ಆರೋಪಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net