23 ವರ್ಷಗಳ ಡೇಟಿಂಗ್​ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ! ದಂಪತಿಗೆ ಶುಭಕೋರಿದ ಸ್ಮೃತಿ ಇರಾನಿ..Smriti Irani

Some Love Stories Take Interesting Turns
Some Love Stories Take Interesting Turns
Published on
ನವದೆಹಲಿ: 23 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಆಶ್ಲೇಷಾ ಸಾವಂತ್ ಮತ್ತು ಸಂದೀಪ್ ಬಸ್ವಾನಾ ಅವರಿಗೆ, ಸಹ ನಟಿ ಸ್ಮೃತಿ ಇರಾನಿ ನವ ಜೋಡಿಯ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಶುಭ ಕೋರಿದ್ದಾರೆ.
ಸ್ಮೃತಿ ಇನ್ಸ್ಟಾಗ್ರಾಮ್ ನಲ್ಲಿ ಆಶ್ಲೇಷಾ ಮತ್ತು ಸಂದೀಪ್ ಅವರ ಅದ್ಭುತ ಚಿತ್ರವನ್ನು ಹಂಚಿಕೊಂಡಿದ್ದು, ಇವರ ಪ್ರಯಾಣವು ಆಚರಣೆಗಳಿಂದಲ್ಲ. ಬದಲಾಗಿ ವಾಸ್ತವಿಕತೆಯಿಂದ ಹೇಗೆ ಪ್ರಾರಂಭವಾಗಿದೆ. ಹಾಗೂ ಅವರ ಒಡನಾಟವು ಸತ್ಯದ ಮೇಲೆ ಹೇಗೆ ನಿಂತಿದೆ ಎಂಬುದನ್ನು ಅವರು ವಿವರಿಸಿದ್ದಾರೆ.

ಪೋಸ್ಟ್​ನಲ್ಲೇನಿದೆ?

ಕೆಲವು ಪ್ರೇಮಕಥೆಗಳು ಅತ್ಯಂತ ಆಸಕ್ತಿದಾಯಕ ತಿರುವುಗಳನ್ನು ಪಡೆಯುತ್ತವೆ. ಅವು ಆಚರಣೆಗಳೊಂದಿಗೆ ಅಲ್ಲ, ಬದಲಾಗಿ ವಾಸ್ತವಿಕತೆಯೊಂದಿಗೆ ಪ್ರಾರಂಭವಾಗುತ್ತದೆ. ಅವು ಒಡನಾಟವನ್ನು ಹೊರತುಪಡಿಸಿ ಯಾವುದಕ್ಕೂ ಭರವಸೆ ನೀಡುವುದಿಲ್ಲ. ಕಾಲಾನಂತರದಲ್ಲಿ ಪ್ರೀತಿ ಕಡಿಮೆಯಾಗಬಹುದು. ಆದರೆ, ಸ್ನೇಹ ಕಡಿಮೆಯಾಗುವುದಿಲ್ಲ. ಈ ಪ್ರಾಮಾಣಿಕ ಸತ್ಯವನ್ನು ಹೊರತುಪಡಿಸಿ ಏನು ಇರುವುದಿಲ್ಲ. ಈ ಸತ್ಯದಿಂಸಲೇ ಸುಂದರವಾದ ಪ್ರಯಾಣ ಪ್ರಾರಂಭವಾಗುತ್ತದೆ.
ಆಶ್ಲೇಷಾ ಮತ್ತು ಸಂದೀಪ್ 23 ವರ್ಷಗಳ ಕಾಲ ಡೇಟಿಂಗ್​ ಮಾಡಿದ ನಂತರ ನವೆಂಬರ್​ 16 ರಂದು ಇಬ್ಬರು ವಿವಾಹವಾದರು.
ಹಿನ್ನಲೆ
ಸಂದೀಪ್ ಕುಛ್ ಝುಕಿ ಪಲ್ಕೇನ್ ಕಾರ್ಯಕ್ರಮದ ಮೂಲಕ ದೂರದರ್ಶನಕ್ಕೆ ಪಾದಾರ್ಪಣೆ ಮಾಡಿದರು ಹಾಗೆಯೇ ಕ್ಕೋಯ್ ದಿಲ್ ಮೇ ಹೈ ಕಾರ್ಯಕ್ರಮದಲ್ಲಿ ಕೆಲಸ ಮಾಡಿದರು . ಕ್ಯುಂಕಿ ಸಾಸ್ ಭಿ ಕಭಿ ಬಹು ಥಿಯಲ್ಲಿನ ಸಾಹಿಲ್ ವಿರಾನಿ ಪಾತ್ರದ ಅವರ ಚಿತ್ರಣವೇ ಅವರಿಗೆ ಕೀರ್ತಿ ತಂದುಕೊಟ್ಟಿತು.
ಆಶ್ಲೇಷಾ ಅವರು ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ ಚಿತ್ರದ ಮೂಲಕ ತೀಶಾ ಮೆಹ್ತಾ ವಿರಾನಿ ಪಾತ್ರದಲ್ಲಿ ತಮ್ಮ ಮೊದಲ ನಟನೆಯನ್ನು ಮಾಡಿದರು . ಅವರು ಸಾತ್ ಫೇರೆ - ಸಲೋನಿ ಕಾ ಸಫರ್, ಪ್ಯಾರ್ ಕಾ ದರ್ದ್ ಹೈ ಮೀಥಾ ಪ್ಯಾರಾ ಪ್ಯಾರಾ, ಕುಂಕುಮ್ ಭಾಗ್ಯ ಮತ್ತು ಅನುಪಮಾ ಧಾರವಾಹಿಯಲ್ಲಿ ನಟಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net