ಸುಶಾಂತ್ ಸಿಂಗ್ ಸಾವಿಗೆ ಆರು ವರ್ಷ: ಅಣ್ಣನನ್ನು 'ಶ್ರೀರಾಮ'ನ ರೂಪದಲ್ಲಿ ತೋರಿಸಿ ಕಣ್ಣೀರಿಟ್ಟ ಸಹೋದರಿ ಶ್ವೇತಾ! Sushant Singh Rajput

ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ನಿಧನರಾಗಿ ಆರು ವರ್ಷ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ನಿಧನರಾಗಿ ಆರು ವರ್ಷ
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ನಿಧನರಾಗಿ ಆರು ವರ್ಷ ಪೂರ್ಣ
  • ಅಣ್ಣನನ್ನು ಕೃತಕ ಬುದ್ಧಿಮತ್ತೆ (AI) ಬಳಸಿ 'ಶ್ರೀರಾಮ'ನ ರೂಪದಲ್ಲಿ ಚಿತ್ರಿಸಿದ ಸಹೋದರಿ ಶ್ವೇತಾ ಸಿಂಗ್
  • ನೀನು ನಮ್ಮೊಂದಿಗೆ ಜೀವಂತವಾಗಿರುವೆ! ಸಹೋದರಿ ಭಾವುಕ ನುಡಿ
ಮುಂಬೈ: 2020 ಜೂನ್​ 14 ರಂದು ಬಾಲಿವುಡ್​ನ ಉದಯೋನ್ಮುಖ ನಟ ಸುಶಾಂತ್​ ಸಿಂಗ್​ ರಾಜ್​ಪೂತ್ (Sushant Singh Rajput)​ ತಮ್ಮ ಬಾಂದ್ರಾದ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇಂದು ಸುಶಾಂತ್​ ಸಿಂಗ್​ ಸಾವನ್ನಪ್ಪಿ ಆರು ವರ್ಷ ಕಳೆದ ಹಿನ್ನಲೆಯಲ್ಲಿ ಸುಶಾಂತ್​ ಸಹೋದರಿ ಶ್ವೇತಾ ಸಿಂಗ್​ ಕ್ರಿತಿ, ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಭಾವನಾತ್ಮಕ ಫೋಟೊಗಳನ್ನು ಮತ್ತು ನಡಿಗಳನ್ನು ಹಂಚಿಕೊಂಡಿದ್ದಾರೆ.

ರಾಮನವತಾರದಲ್ಲಿ ಸುಶಾಂತ್​!

ತಮ್ಮ ಅಣ್ಣನ ಸಾವನ್ನು ನೆನೆಪಿಸಿಕೊಂಡಿರುವ ಶ್ವೇತಾ, ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು, ಭಗವಾನ್​ ರಾಮನ ರೂಪದಲ್ಲಿ ಸುಶಾಂತ್​ ಸಿಂಗ್​ರನ್ನು ಚಿತ್ರಿಸಿದ್ದಾರೆ. ಹಾಗೆಯೇ ಆ ಫೋಟೊದ ಕೆಳಗಡೆ ಜೀವನ, ನಕ್ಷತ್ರ, ಬ್ರಹ್ಮಾಂಡ ಮತ್ತು ಮಾನವನ ಮನಸ್ಸಿನ ರಹಸ್ಯಗಳ ಮೇಲಿನ ನಿನ್ನ ಮಗುವಿನಂತಹ ಕುತೂಹಲ ಮತ್ತು ಅಂತ್ಯವಿಲ್ಲದ ಆಕರ್ಷಣೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ.
ಯಾರೇ ಆಗಿದ್ದರೂ ಜನರನ್ನು ಘನತೆಯಿಂದ ನಡೆಸಿಕೊಂಡ ನಿನ್ನ ಹೃದಯವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಕರುಣೆ ಇಲ್ಲದಿದ್ದರೆ ಯಶಸ್ಸು ಬಹಳ ಕಡಿಮೆ ಎಂದು ನಮಗೆ ಕಲಿಸಿದ ವ್ಯಕ್ತಿಯ ಬಗ್ಗೆ ನಾನು ಯೋಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನೀನು ನಮ್ಮೊಂದಿಗೆ ಜೀವಂತವಾಗಿರುವೆ!

ನಾನು ನಿನ್ನ ಅಗಲಿಕೆಯಿಂದ ದುಃಖಿತರಾಗಿ ನಿನಗೆ ಗೌರವ ಸಲ್ಲಿಸುವ ಬದಲು ನಿನ್ನ ಆದರ್ಶ, ಮೌಲ್ಯಗಳೊಟ್ಟಿಗೆ ಬದುಕಿದರೆ ನಿನಗೆ ಗೌರವ ನೀಡಿದಂತಾಗುತ್ತದೆ. ಜೀವನದಲ್ಲಿ ನಾವು ಎಷ್ಟು ವರ್ಷ ಬದುಕಿದೆವು ಎನ್ನುವುದಕ್ಕಿಂತ ಎಷ್ಟು ಹೃದಯಗಳನ್ನು ಗೆದ್ದೆವು ಎನ್ನುವುದರಲ್ಲಿ ಸಾರ್ಥಕತೆಯಿದೆ. ನೀವು ಇಂದಿಗೂ ನಮ್ಮ ಜೊತೆ, ನಿಮ್ಮನ್ನು ಪ್ರೀತಿಸುವ ಲಕ್ಷಾಂತರ ಅಭಿಮಾನಿಗಳ ಜೊತೆ ಜೀವಂತವಾಗಿದ್ದಿರಿ ಎಂದು ಶ್ವೇತಾ ಭಾವತಾನ್ಮಕವಾಗಿ ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net