ಪಾಕಿಸ್ತಾನವನ್ನು ಕೆಟ್ಟದಾಗಿ ತೋರಿಸಿದ್ದಕ್ಕೆ ಆರು ಗಲ್ಫ್​ ದೇಶಗಳಲ್ಲಿ ಧುರಂಧರ್ ಬ್ಯಾನ್ ! Dhurandhar

 Dhurandhar
Dhurandhar
Published on

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನ ವಿರೋಧಿ ಸಂದೇಶವಿರುವ ಕಾರಣ ಗಲ್ಫ್​ ದೇಶಗಳಲ್ಲಿ ಧುರಂಧರ್ ಬ್ಯಾನ್
  • ಫೈಟರ್, ಸ್ಕೈ ಫೋರ್ಸ್, ದಿ ಡಿಪ್ಲೊಮ್ಯಾಟ್, ಆರ್ಟಿಕಲ್ 370, ಟೈಗರ್ ತ್ರೀ ಮತ್ತು ದಿ ಕಾಶ್ಮೀರ್ ಫೈಲ್ಸ್ ನಂತರ ಈಗ ಧುರಂಧರ್ ನಿಷೇಧ
  • 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಖ್ಯಾತಿಯ ಆದತ್ಯ ಧರ್ ನಿದೇಶಿಸಿರುವ ಸಿನಿಮಾ ಧುರಂಧರ್
  • ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ
Dhurandhar : ರಣವೀರ್ ಸಿಂಗ್ ಅಭಿನಯದ ಸ್ಪೈ ಥ್ರಿಲ್ಲರ್ ಧುರಂಧರ್ (Dhurandhar) ಭಾರತದಲ್ಲಿ ಭಾರಿ ಸದ್ದನ್ನು ಮಾಡುತಿದ್ದು, ಚಿತ್ರ ಮಂದಿರಗಳು ಹೌಸ್​ಫುಲಾಗುತ್ತಿವೆ. ಆದರೆ ಮಧ್ಯಪ್ರಾಚ್ಯ ದೇಶಗಳು ಧುರಂಧರ್ ಸಿನಿಮಾವನ್ನು ತಮ್ಮ ದೇಶದಲ್ಲಿ ಪ್ರಸಾರಮಾಡಲು ನಿಷೇಧವನ್ನು ಹೇರಿವೆ. ಸಿನಿಮಾದಲ್ಲಿ ಪಾಕಿಸ್ತಾನ ವಿರೋಧಿ ಸಂದೇಶವಿರುವ ಕಾರಣವನ್ನು ಆಕ್ಷೇಪಿಸಿ ಆರು ಗಲ್ಫ್ ರಾಷ್ಟ್ರಗಳಾದ ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿ ಚಿತ್ರವನ್ನು ನಿರ್ಬಂಧಿಸಲಾಗಿದೆ.
ಇದಕ್ಕೂ ಮೊದಲು, ಫೈಟರ್, ಸ್ಕೈ ಫೋರ್ಸ್, ದಿ ಡಿಪ್ಲೊಮ್ಯಾಟ್, ಆರ್ಟಿಕಲ್ 370, ಟೈಗರ್ ತ್ರೀ ಮತ್ತು ದಿ ಕಾಶ್ಮೀರ್ ಫೈಲ್ಸ್ ನಂತಹ ಚಲನಚಿತ್ರಗಳು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಇದೇ ರೀತಿಯ ನಿರ್ಬಂಧಗಳನ್ನು ಎದುರಿಸಿದ್ದವು. ಆರಂಭದಲ್ಲಿ ಯುಎಇಯಲ್ಲಿ ಬಿಡುಗಡೆಯಾದ ಫೈಟರ್​ ಸಿನಿಮಾವನ್ನು  ಸಹ ಒಂದು ದಿನದೊಳಗೆ ಹಿಂತೆಗೆದುಕೊಳ್ಳಲಾಗಿತ್ತು.ಗಲ್ಫ್ ಹಿನ್ನಡೆಯ ಹೊರತಾಗಿಯೂ, ಧುರಂಧರ್ ಸ್ವದೇಶದಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಇದೆ. ಈ ಚಿತ್ರವು ಒಂದು ವಾರದೊಳಗೆ ಭಾರತದಲ್ಲಿ 200 ಕೋಟಿ ಗಡಿಯನ್ನು ದಾಟಿದೆ ಮತ್ತು ಗಲ್ಫ್ ಮಾರುಕಟ್ಟೆಯನ್ನು ಹೊರತುಪಡಿಸಿ ವಿದೇಶಗಳಲ್ಲಿ 44.5 ಕೋಟಿ ರೂ. ಗಳಿಸಿದೆ.
ನಿರ್ದೇಶನದಿಂದ ಆರು ವರ್ಷಗಳ ಕಾಲ ದೂರ ಉಳಿದಿದ್ದ ನಿರ್ದೇಶಕ ಆದಿತ್ಯ ಧರ್, 2019 ರ ಯಶಸ್ವಿ ಚಿತ್ರ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನಂತರ 'ಧುರಂಧರ್' ನೊಂದಿಗೆ ನಿರ್ದೇಶನಕ್ಕೆ ಮತ್ತೆ ಮರಳಿದರು. ಈ ಸಿನಿಮಾವು ಮೇಜರ್ ಮೋಹಿತ್ ಶರ್ಮಾ ಅವರನ್ನು ಆಧರಿಸಿದೆ ಎಂಬ ವದಂತಿಗಳನ್ನು ಹುಟ್ಟುಹಾಕಿತು, ಆದರೆ ಧರ್ ಈ ಕಥೆಯನ್ನು ನೈಜ ಭೌಗೋಳಿಕ, ರಾಜಕೀಯ ಮತ್ತು ರಹಸ್ಯ ರಾ ಕಾರ್ಯಾಚರಣೆಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟನೆ ನೀಡಿದ್ದರು. ಪಾಕಿಸ್ತಾನದಲ್ಲಿ ನಡೆದ ಆಪರೇಷನ್ ಲಿಯಾರಿಯ ಸುತ್ತಲಿನ ಘಟನೆಗಳು ಮತ್ತು ಭಾರತೀಯ ಗುಪ್ತಚರ ಇಲಾಖೆಯ ಕಾರ್ಯತಂತ್ರಗಳಿಂದ ಈ ಚಿತ್ರ ಪ್ರೇರಿತವಾಗಿದೆ. ರಣವೀರ್ ಸಿಂಗ್ ಜತೆಗೆ, ಈ ಚಿತ್ರದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್ ಮತ್ತು ಅರ್ಜುನ್ ರಾಂಪಾಲ್ ನಟಿಸಿದ್ದಾರೆ. ಬಲವಾದ ಕಥಾನಕ ಮತ್ತು ನೈಜ ಘಟನೆಗಳಿಂದ ಉತ್ತೇಜಿಸಲ್ಪಟ್ಟ ಧುರಂಧರ್, ವರ್ಷದ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್‌ಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net