ಒಂಟಿತನಕ್ಕೆ ಬಲಿಯಾಗಿದ್ದ ಗಾಯಕಿ: 'ಶರಾರತ್' ಸುಂದರಿ ಜಾಸ್ಮಿನ್ ಕುಡಿತದ ದಾಸಿಯಾಗಿದ್ದು ಯಾಕೆ? ಇಲ್ಲಿದೆ ಕಂಪ್ಲೀಟ್​ ಡೀಟೆಲ್ಸ್​​| Jasmine Sandlas

ಕುಡಿತದ ಚಟಕ್ಕೆ ದಾಸಿಯಾಗಿದ್ದ ಗಾಯಕಿ ಜಾಸ್ಮಿನ್​ ಸ್ಲಾಂಡ್ಲಾಸ್​
ಕುಡಿತದ ಚಟಕ್ಕೆ ದಾಸಿಯಾಗಿದ್ದ ಗಾಯಕಿ ಜಾಸ್ಮಿನ್​ ಸ್ಲಾಂಡ್ಲಾಸ್​
Published on

ಪ್ರಮುಖ ಮುಖ್ಯಾಂಶಗಳು

  • ಕುಡಿತದ ಚಟಕ್ಕೆ ದಾಸಿಯಾಗಿದ್ದ ಗಾಯಕಿ ಜಾಸ್ಮಿನ್​ ಸ್ಲಾಂಡ್ಲಾಸ್​
  • ಮನೆಯವರ ಕಾಟದಿಂದಲೇ ಕುಡಿತ ಶುರು ಮಾಡಿದೆ ಎಂದ ಗಾಯಕಿ
  • ಈಗ ಎಲ್ಲಾ ರೀತಿಯ ಚಟಗಳಿಂದ ನಾನು ಮುಕ್ತಿ ಪಡೆದಿದ್ದೆನೆ
ಮುಂಬೈ: ರಣವೀರ್​ ಸಿಂಗ್​ ನಟನೆಯ ಆದಿತ್ಯ ಧರ್​ ನಿರ್ದೇಶನದ ಧುರಂಧರ್​ ಸಿನಿಮಾದ ಬಹುತೇಕ ಹಾಡುಗಳನ್ನು ಹಾಡಿರುವ ಜಾಸ್ಮಿನ್​ ಸ್ಯಾಂಡ್ಲಾಸ್ (Jasmine Sandlas), ಇತ್ತೀಚೆಗೆ ತಮ್ಮ ಮದ್ಯಪಾನ ಚಟ (Alcohol Addiction) ಬಗ್ಗೆ ಮುಕ್ತವಾಗಿ ಮಾತಾನಾಡಿದ್ದಾರೆ.

ತಂದೆ-ತಾಯಿಯಿಂದ ಬಹಳ ನೋವನ್ನು ಕಂಡೆ!

ಪಾಡ್​ಕಾಸ್ಟ್​ವೊಂದರಲ್ಲಿ ಮಾತನಾಡಿರುವ ಶರಾರತ್​ ಸುಂದರಿ ಜಾಸ್ಮಿನ್​, ನಾನು ಚಿಕ್ಕ ವಯಸ್ಸಿನಲ್ಲಿಯೇ ಕುಡಿತದ ಚಟಕ್ಕೆ ದಾಸಿಯಾಗಿದ್ದೆ. ಬಾಲ್ಯದಲ್ಲಿ ಮನೆಯವರಿಂದ ಬಹಳ ನೋವನ್ನು ಅನುಭವಿಸಿದ ಹಿನ್ನಲೆ ನಾನು ಖುಷಿ ಸಲುವಾಗಿ ಮದ್ಯಪಾನವನ್ನು ಆಯ್ಕೆ ಮಾಡಿಕೊಂಡೆ, ಆದರೆ ನನಗೆ ಅಲ್ಲಿ ಸಹ ಯಾವುದೇ ಸುಖ ಸಿಗಲಿಲ್ಲ ಎಂದಿದ್ದಾರೆ.
ನಾವು ಯೌವನದಲ್ಲಿದ್ದಾಗ, ತಂದೆ-ತಾಯಿಯಾದವರೂ ನಮ್ಮನ್ನು ತಿದ್ದಬೇಕು, ಆದರೆ ಅವರು ಅವರದೇ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದರೆ ನಮ್ಮನ್ನು ಸರಿ ದಾರಿಗೆ ತರುವುದು ಕಷ್ಟವಾಗುತ್ತದೆ. ನಾನು ಒಂದು ಕಡೆ ಫೇಮಸ್​ ಆಗಿದ್ದೆ, ಆದರೆ ನನಗೆ ಬೆಂಬಲಕ್ಕೆ ಯಾರು ಇರಲಿಲ್ಲ, ಈ ಸಂದರ್ಭದಲ್ಲಿ ನಾನು 2-3 ವರ್ಷ ಬಹಳ ಕಡಿದಿದ್ದೆನೆ, ಒಂದರ್ಥದಲ್ಲಿ ಎಷ್ಟು ಕುಡಿಬೇಕೋ ಅದಕ್ಕಿಂತ ಹೆಚ್ಚೆ ಕುಡಿದಿದ್ದೆನೆ. ಅದರ ಬಗ್ಗೆ ನನಗೆ ಇವತ್ತಿಗೂ ನೋವಿದೆ ಎಂದು ಜಾಸ್ಮಿನ್​ ಹೇಳಿದ್ದಾರೆ.

ಧುರಂಧರ್​ನಲ್ಲಿ ಜಾಸ್ಮಿನ್​ ಹಾಡುಗಳದ್ದೇ ಅಬ್ಬರ!

ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದ ದಾಖಲೆ ಮಾಡಿರುವ ಸಿನಿಮಾ ಎಂದರೆ ಅದು ಧುರಂಧರ್​. ಈ ಸಿನಿಮಾ ಇಷ್ಟೊಂದು ಯಶಸ್ಸು ಕಾಣುವಲ್ಲಿ ಈ ಸಿನಿಮಾದಲ್ಲಿ ಬಳಕೆಯಾದ ಹಾಡುಗಳ ಪಾತ್ರ ಸಹ ಮಹತ್ವದಾಗಿದೆ. ಈ ಸಿನಿಮಾದ ಬಹುತೇಕ ಹಾಡುಗಳ ಹಿಂದಿರುವ ಧ್ವನಿ ಈ ಜಾಸ್ಮಿನ್​ ಅವರದ್ದೆ ಆಗಿದೆ.
'ಶರಾರತ್​' ಹಾಡು ಈಗ ಎಲ್ಲೆ ಪಾರ್ಟಿಯಾದರೂ ಮೊದಲು ಪ್ಲೇ ಆಗುವ ಹಾಡಾಗಿ ಮಾರ್ಪಟ್ಟಿದೆ. 'ಆರಿ-ಆರಿ', 'ಮೇ ಔರ್​ ತೂ' ಮತ್ತು 'ಜೈಯೇ ಸಜನಾ' ಈ ಹಾಡುಗಳು ಈಗಾಗಲೇ ಕೋಟಿ-ಕೋಟಿ ವೀಕ್ಷಣೆಯನ್ನು ಕಂಡುಕೊಂಡಿದೆ. ಇದಕ್ಕೂ ಮೊದಲು ಜಾಸ್ಮಿನ್​ ಅವರ 'ಯಾರ್ ನಾ ಮಿಲೆ'​ ಎಂಬ ಹಾಡು ಸಲ್ಮಾನ್​ ಖಾನ್​ ನಟನೆಯ ಕಿಕ್​ ಸಿನಿಮಾದಲ್ಲಿ ಬಳಕೆಯಾಗಿತ್ತು ಎನ್ನುವುದು ವಿಶೇಷ.

ಯಾರು ಈ ಜಾಸ್ಮಿನ್​ ಸ್ಯಾಂಡ್ಲಾಸ್?

ಸೆಪ್ಟೆಂಬರ್ 4, 1985 ರಂದು ಪಂಜಾಬ್‌ನ ಜಲಂಧರ್‌ನಲ್ಲಿ ಜನಿಸಿದ ಜಾಸ್ಮಿನ್​, ತಮ್ಮ 13 ನೇ ವಯಸ್ಸಿನಲ್ಲಿ ಕುಟುಂಬದೊಂದಿಗೆ ಅಮೆರಿಕದ ಕ್ಯಾಲಿಫೋರ್ನಿಯಾಗೆ ವಲಸೆ ಹೋದರು. ಜಾಸ್ಮಿನ್ ಅವರ ಸಂಗೀತದ ಹಾದಿ 2008 ರಲ್ಲಿ ಬಿಡುಗಡೆಯಾದ 'ಮುಸ್ಕಾನ್' (Muskan) ಎಂಬ ಹಾಡಿನೊಂದಿಗೆ ಪ್ರಾರಂಭವಾಯಿತು, ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಯಶಸ್ಸನ್ನು ತಂದುಕೊಟ್ಟಿತು.
ನಂತರ 2012 ರಲ್ಲಿ ರ್ಯಾಪರ್ ಬೋಹೀಮಿಯಾ ಅವರೊಂದಿಗೆ ಸೇರಿ ಹೊರತಂದ 'ಗುಲಾಬಿ' (Gulabi) ಆಲ್ಬಮ್ ಇವರನ್ನು ಪಂಜಾಬಿ ಇಂಡಸ್ಟ್ರಿಯ ಮುಂಚೂಣಿ ಗಾಯಕಿಯರಲ್ಲಿ ಒಬ್ಬರನ್ನಾಗಿ ಮಾಡಿತು. ಇವರು ಕೇವಲ ಪಂಜಾಬಿ ಮಾತ್ರವಲ್ಲದೆ, ಬಾಲಿವುಡ್‌ನ 'ಕಿಕ್' ಚಿತ್ರದ "ಯಾರ್ ನಾ ಮಿಲೆ" (Yaar Na Miley) ಹಾಡಿನ ಮೂಲಕ ಭಾರತದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದರು. ಇವರ ವಿಶಿಷ್ಟ ಧ್ವನಿ ಮತ್ತು ಗಾಯನ ಶೈಲಿಗಾಗಿ ಇವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net