ಲಂಡನ್ ಪ್ರವಾಸದ ನಡುವೆ ಬ್ಯೂಟಿ ಸೀಕ್ರೆಟ್ ಹಂಚಿಕೊಂಡ ಶ್ರೇಯಾ ಘೋಷಾಲ್: ಏನಿದು ಭಾರತೀಯ ನುಸ್ಕಾ? Shreya Ghoshal
Shreya Ghoshal (ಚಿತ್ರ Instagram)
Published on:
Copied
Follow Us
Shreya Ghoshal: ಭಾರತೀಯ ಚಿತ್ರರಂಗದ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಮಧುರ ಕಂಠದಿಂದ ಭಾರತೀಯರನ್ನಷ್ಟೇ ಅಲ್ಲದೇ ಜಾಗತಿಕ ಮಟ್ಟದಲ್ಲೂ ಅಭಿಮಾನಿಗಳನ್ನು ಸೆಳೆದಿದ್ದಾರೆ. ಇತ್ತೀಚೆಗೆ ಅವರು ಲಂಡನ್‌ನ ಪ್ರತಿಷ್ಠಿತ O2 ಅರೆನಾದಲ್ಲಿ ನಡೆಸಿದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸಧ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.
ಈ ಯಶಸ್ವಿ ಕಾರ್ಯಕ್ರಮದ ಬೆನ್ನಲ್ಲೇ, ಬ್ರಿಟೀಷ್ ವೋಗ್ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಶ್ರೇಯಾ ಅವರು ತಮ್ಮ ಸಂಗೀತ ಪಯಣದ ಜೊತೆಗೆ, ತಮ್ಮ ಸೌಂದರ್ಯ ಮತ್ತು ವಿಶೇಷವಾಗಿ ಕೂದಲ ರಕ್ಷಣೆಯ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.
ತೆರೆಮರೆಯ ಸಂದರ್ಶನದ ವೇಳೆ ನಿಮ್ಮ ಕೂದಲನ್ನು ಹೇಗೆ ಇಷ್ಟೊಂದು ಸೊಗಸಾಗಿ ನಿರ್ವಹಿಸುತ್ತೀರಿ? ಎಂಬ ಪ್ರಶ್ನೆಗೆ ಮಂದಹಾಸದೊಂದಿಗೆ ಉತ್ತರಿಸಿದ ಶ್ರೇಯಾ, ದುಬಾರಿ ಉತ್ಪನ್ನಗಳ ಬದಲಿಗೆ ಮನೆಯಲ್ಲೇ ಸಿಗುವಂತಹ ತೆಂಗಿನ ಎಣ್ಣೆಯನ್ನು ಬಳಸುತ್ತೇನೆ ಇದು ನನ್ನ ಕೂದಲಿನ ಬಲದ ರಹಸ್ಯ ಎಂದು ಹೇಳಿಕೊಂಡಿದ್ದಾರೆ.
ಅವರ ಕೇಶ ವಿನ್ಯಾಸ ಹೇಗಿತ್ತು?
ವಿಡಿಯೋದಲ್ಲಿ ಅವರ ದಟ್ಟವಾದ, ಸೊಂಟದವರೆಗಿನ ಕೂದಲು ಅಲೆ ಅಲೆಯಾಗಿ ಹರಿಯುವ ರೀತಿ ಅದ್ಭುತವಾಗಿ ಕಾಣುತ್ತಿದೆ. ಕೂದಲನ್ನು ಮಧ್ಯಕ್ಕೆ ಭಾಗಿಸಿ ಅರ್ಧ-ಕಟ್ಟಿದ ಶೈಲಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಮುಖದ ಮುಂಭಾಗಕ್ಕೆ ಬಿಟ್ಟಿರುವ ಕೂದಲುಗಳು ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.
ತೆಂಗಿನ ಎಣ್ಣೆ ನಿಜವಾಗಿಯೂ ಕೆಲಸ ಮಾಡುತ್ತದೆಯೇ?
ತೆಂಗಿನ ಎಣ್ಣೆ ಕೂದಲಿನ ಆರೋಗ್ಯಕ್ಕೆ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಮದ್ದು ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಆದಾಗ್ಯೂ, ಈ ಎಣ್ಣೆ ಕೂದಲಿಗೆ ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.
* ಕೂದಲಿನ ಆಳಕ್ಕೆ ಇಳಿಯುವ ಸಾಮರ್ಥ್ಯ
ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ ಕೂದಲಿನ ಪ್ರೋಟೀನ್‌ನೊಂದಿಗೆ ಸುಲಭವಾಗಿ ಬೆರೆಯುತ್ತದೆ. ಇದು ಕೂದಲಿನ ಹೊರಪದರವನ್ನು ದಾಟಿ ಒಳಭಾಗಕ್ಕೆ ಆಳವಾಗಿ ಇಳಿಯುವ ಶಕ್ತಿಯನ್ನು ಹೊಂದಿದೆ. ಇದರಿಂದ ಕೂದಲು ಒಳಗಿನಿಂದಲೇ ಪೋಷಣೆ ಪಡೆಯುತ್ತದೆ.
* ಪ್ರೋಟೀನ್ ನಷ್ಟ ತಡೆಗಟ್ಟುವಿಕೆ
ನಮ್ಮ ಕೂದಲು ಪ್ರೋಟೀನ್‌ನಿಂದ ಮಾಡಲ್ಪಟ್ಟಿದೆ. ದಿನನಿತ್ಯದ ಮಾಲಿನ್ಯ, ಬಿಸಿಲು ಮತ್ತು ಕೆಮಿಕಲ್ ಉತ್ಪನ್ನಗಳಿಂದ ಕೂದಲು ಪ್ರೋಟೀನ್ ಕಳೆದುಕೊಳ್ಳುತ್ತದೆ. ಆದಾಗ್ಯೂ, ತೆಂಗಿನ ಎಣ್ಣೆಯು ಕೂದಲಿನಲ್ಲಿರುವ ಪ್ರೋಟೀನ್ ಹೊರಹೋಗದಂತೆ ತಡೆದು, ಕೂದಲು ತೆಳುವಾಗುವುದನ್ನು ಮತ್ತು ತುಂಡಾಗುವುದನ್ನು ತಪ್ಪಿಸುತ್ತದೆ.
* ತೇವಾಂಶ ಮತ್ತು ಹೊಳಪು
ಒಣ ಹಾಗೂ ನಿರ್ಜೀವ ಕೂದಲುಗಳಿಗೆ ತೆಂಗಿನ ಎಣ್ಣೆ ಅತ್ಯುತ್ತಮ ಮಾಯಿಶ್ಚರೈಸರ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದು ಕೂದಲಿನ ಸುತ್ತ ಒಂದು ರಕ್ಷಣಾತ್ಮಕ ಪದರವನ್ನು ನಿರ್ಮಿಸಿ, ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಕೂದಲು ಮೃದುವಾಗಿ ಮತ್ತು ಹೊಳೆಯುವಂತೆ ಕಾಣುತ್ತದೆ.
* ತಲೆಹೊಟ್ಟು ಮತ್ತು ಶಿಲೀಂಧ್ರ ವಿರೋಧಿ ಗುಣ
ತೆಂಗಿನ ಎಣ್ಣೆಯಲ್ಲಿ ಆಂಟಿ-ಮೈಕ್ರೋಬಿಯಲ್ ಮತ್ತು ಆಂಟಿ-ಫಂಗಲ್ ಗುಣಗಳಿವೆ. ಇದು ನೆತ್ತಿಯ ತುರಿಕೆ, ಶುಷ್ಕತೆ ಮತ್ತು ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೆತ್ತಿಯ ಆರೋಗ್ಯ ಸುಧಾರಿಸಿದಾಗ ಸಹಜವಾಗಿಯೇ ಕೂದಲು ವೇಗವಾಗಿ ಬೆಳೆಯುತ್ತದೆ (ಏಜೆನ್ಸೀಸ್).