ಅವಳು ನನ್ನ ಗಂಡನನ್ನಲ್ಲ ಅವನ ದುಡ್ಡನ್ನು ಪ್ರೀತಿಸುತ್ತಾಳೆ ; ಕಣ್ಣೀರಿಟ್ಟ ಗೋವಿಂದಾ ಪತ್ನಿ | Govinda

Govinda
Govinda
Published on
ಬಾಲಿವುಡ್​: ಸುನೀತಾ ಅಹುಜಾ ಮತ್ತು ಗೋವಿಂದ (Govinda) ಅವರ ದಾಂಪತ್ಯದಲ್ಲಿ ಸಮಸ್ಯೆಗಳಿವೆ ಎಂಬ ವರದಿಗಳು ನಿರಂತರವಾಗಿ ಕೇಳಿಬರುತ್ತಿದ್ದವು. ಇವರ ದಾಂಪತ್ಯ ಜೀವನ ವಿಚ್ಛೇದನದತ್ತ ಸಾಗುತ್ತಿದ್ದಾರೆ ಎಂಬ ಗುಮಾನಿಗಳಿಗೆ ಸುನೀತಾ ಎವೆಲ್ಲಾ ಸುಳ್ಳು ವದಂತಿಗಳೆಂದು ಹೇಳುತ್ತಾ ಬಂದಿದ್ದರು, ಆದರೆ ಇತ್ತಿಚೇಗೆ ನೀಡಿದ ಸಂದರ್ಶನವೊಂದರಲ್ಲಿ ಗೋವಿಂದಾ ಪತ್ನಿ ನೀಡಿದ ಹೇಳಿಕೆಗಳು ಎಲ್ಲಾ ಕಡೆ ವೈರಲ್​ ಆಗುತ್ತಿದೆ.
ಸಂದರ್ಶಕ ಕೇಳಿದ 2025 ನೇ ವರ್ಷ ನಿಮ್ಮ ಪಾಲಿಗೆ ಹೇಗಿತ್ತು ಎಂಬ ಪ್ರಶ್ನೆಗೆ ಸುನೀತಾ, 2025 ನನಗೆ ಒಳ್ಳೆಯ ವರ್ಷವಾಗಿರಲಿಲ್ಲ ಗೋವಿಂದ ಯಾವುದೋ ಹುಡುಗಿಯ ಜತೆ ಸಂಬಂಧ ಹೊಂದಿದ್ದಾರೆ ಎಂಬ ಸಂಗತಿ ನನಗೆ ಗೊತ್ತಾದ ವರ್ಷ ಹೇಗೆ ತಾನೇ ಒಳ್ಳೆಯ ವರ್ಷವಾದಿತು ಎಂದಿದ್ದಾರೆ. ಗೋವಿಂದಾ ಜತೆ ಸಂಬಂಧ ಹೊಂದಿರುವ ಹುಡುಗಿ ಸಿನಿಮಾ ಕ್ಷೇತ್ರದವಳಲ್ಲ ಎಂದು ನನಗೆ ತಿಳಿದಿದೆ. ಹಾಗೆಯೇ ಅವಳು ಗೋವಿಂದನನ್ನಲ್ಲಾ, ಅವನ ಬಳಿ ಇರುವ ಹಣವನ್ನಷ್ಟೇ ಪ್ರೀತಿಸುತ್ತಾಳೆ ಎಂದು ಹೇಳುವ ಮೂಲಕ ಗೋವಿಂದಾಗೆ ಬೇರೆ ಹುಡುಗಿಯೊಂದಿಗೆ ಸಂಬಂಧವಿರುವುದು ನಿಜವೆಂದು ರುಜುವಾತು ಪಡಿಸಿದ್ದಾರೆ.
2026 ರಲ್ಲಿ ನನ್ನ ಜೀವನವನ್ನು ಬದಲಾಯಿಸಲು ನಾನು ಬಯಸುತ್ತೇನೆ. ಗೋವಿಂದ ಈ ಎಲ್ಲಾ ವಿವಾದಗಳಿಗೆ ಅಂತ್ಯ ಹಾಡಬೇಕೆಂದು ನಾನು ಬಯಸುತ್ತೇನೆ ಮತ್ತು 2026 ರಲ್ಲಿ ನನಗೆ ಸಂತೋಷದ ಕುಟುಂಬ ಬೇಕು. ಗೋವಿಂದಾನ ಜೀವನದಲ್ಲಿ ಅತ್ಯಂತ ಮುಖ್ಯವಾದ ವಿಷಯವೆಂದರೆ ಮೂವರು ಮಹಿಳೆಯರು. ಅವರೆಂದರೆ ಅವನ ತಾಯಿ, ಅವನ ಹೆಂಡತಿ ಮತ್ತು ಅವನ ಮಗಳು ಎಂದು ಅರಿತುಕೊಳ್ಳುತ್ತಾನೆ ಎಂದು ನಾನು ಭಾವಿಸುತ್ತೇನೆ. ನಮ್ಮ ಮನೆಯಲ್ಲಿ ನಾಲ್ಕನೇ ಹೆಣ್ಣಿಗೆ ಖಂಡಿತವಾಗಿ ಪ್ರವೇಶವಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗೋವಿಂದ ಮತ್ತು ಸುನೀತಾ ಅವರ ಪ್ರೇಮ ಕತೆಯು ಬಾಲಿವುಡ್​ನ ನೆಚ್ಚಿನ ಪ್ರೇಮ ಕತೆಗಳಲ್ಲಿ ಒಂದಾಗಿದೆ. ಇವರಿಬ್ಬರು ದಶಕಗಳ ವರೆಗೆ ಲಿವ್​-ಇನ್​ ಸಂಬಂಧದಲ್ಲಿದ್ದ ಗೋವಿಂದ ಮತ್ತು ಸುನೀತಾ 1987 ರಲ್ಲಿ ವಿವಾಹವಾಗಿದ್ದರು. ಆದರೆ 1989 ರಲ್ಲಿ ಅವರ ಮಗಳು ಟೀನಾ ಜನಿಸುವವರೆಗೂ ತಮ್ಮ ಮದುವೆಯನ್ನು ರಹಸ್ಯವಾಗಿಟ್ಟಿದ್ದರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net