ಇಂದಿನ ಸ್ಟಾರ್ ಕಲಾವಿದರು ಒಮ್ಮೆ ತೆರೆ ಮೇಲೆ ಕಾಣಿಸಿಕೊಂಡರೆ ಸಾಕು, ಅವರಿಗೆ ಹಣ ಗಳಿಸುವ ಹಲವಾರು ಆಫರ್‌ಗಳು ಕಣ್ಮುಂದೆ ಇರುತ್ತವೆ. ಮಾಲ್ ಓಪನಿಂಗ್, ಈವೆಂಟ್‌ಗಳು ಮತ್ತು ಜಾಹೀರಾತುಗಳಿಂದ ಸಾಕಷ್ಟು ಹಣವನ್ನು ಗಳಿಸುವ ಅವಕಾಶಗಳು ಲಭಿಸುತ್ತವೆ. ಅದರಲ್ಲೂ ನಟಿಮಣಿಯರಿಗೆ ಈ ಆಫರ್‌ಗಳು ಹೆಚ್ಚು. ಇಂತಹ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಹೆಚ್ಚು ಜನಪ್ರಿಯತೆ ಗಳಿಸಬೇಕು. ಆ ಖ್ಯಾತಿ ಬೇಕೆಂದರೆ ಅದಕ್ಕೆ ಒಂದಷ್ಟು ಸಿನಿಮಾ, ಧಾರವಾಹಿ ಅಥವಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿರಬೇಕು. ಆದರೆ, ಈ ಬಾಲಿವುಡ್ ನಟಿ ಮಾತ್ರ ಎಲ್ಲರಿಗಿಂತ ಭಿನ್ನ ಎಂದೇ ಹೇಳಬಹುದು.