ಕಿಂಗ್ ಖಾನ್ ಸರಳತೆಗೆ ಫ್ಯಾನ್ಸ್ ಫಿದಾ; ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಗೆ ಸಹಕರಿಸಿದ ಶಾರುಖ್! Shah Rukh Khan

 Shah Rukh Khan
Shah Rukh Khan
Published on
ಮುಂಬೈ: ಬಾಲಿವುಡ್‌ನ ಸೂಪರ್​ ಸ್ಟಾರ್​ ಶಾರುಖ್​ ಖಾನ್​ (Shah Rukh Khan) ಸಿನಿಮಾಗಳಿಂದಲ್ಲದೇ, ತಮ್ಮ ನಡವಳಿಕೆಯಿಂದಲೂ ಸದಾ ಸುದ್ಧಿಯಲ್ಲಿರುತ್ತಾರೆ. ಗುರುವಾರ ಬೆಳಿಗ್ಗೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಾರುಖ್​ ಕಾಣಿಸಿಕೊಂಡಿದ್ದು, ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಘಟನೆ ಏನು?
ಗುರುವಾರ (ಜ.29) ಶಾರುಖ್ ಖಾನ್ ಬೇರೊಂದು ಸ್ಥಳಕ್ಕೆ ಪ್ರಯಾಣ ನಡೆಸಲು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಅವರು ಕಪ್ಪು ಬಣ್ಣದ ಕ್ಯಾಶುಯಲ್ ಟೀ-ಶರ್ಟ್, ಜಾಕೆಟ್ ಮತ್ತು ಸನ್‌ಗ್ಲಾಸ್ ಧರಿಸಿದ್ದ ಅವರು ಎಂದಿನಂತೆ ಸ್ಟೈಲಿಶ್ ಆಗಿ ಕಂಡರು. ವಿಮಾನ ನಿಲ್ದಾಣದ ಪ್ರವೇಶ ದ್ವಾರಕ್ಕೆ ಬಂದಾಗ, ಅಲ್ಲಿನ ಭದ್ರತಾ ಸಿಬ್ಬಂದಿ ಅವರ ಸನ್​ ಗ್ಲಾಸ್​ ತೆಗೆಯುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ನಟ ಯಾವುದೇ ವಿರೋಧವಿಲ್ಲದೇ, ತಮ್ಮ ಸನ್​​ಗ್ಲಾಸ್​ಗಳನ್ನು ತೆಗೆದು ಕಾರ್ಯವಿಧಾನವನ್ನು ಪೂರ್ಣಗೊಳಿಸಲು ಸಹಾಯ ಮಾಡಿದರು.
ಸಾಮಾನ್ಯವಾಗಿ ಇಷ್ಟು ದೊಡ್ಡ ಮಟ್ಟದ ಸೆಲೆಬ್ರಿಟಿಗಳು ಬಂದಾಗ ಭದ್ರತಾ ಸಿಬ್ಬಂದಿ ಕೂಡ ತುಸು ಸಂಕೋಚ ಪಡುವುದುಂಟು. ಆದರೆ, ಅಲ್ಲಿನ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದರು. ಶಾರುಖ್ ಖಾನ್ ಕೂಡ ಯಾವುದೇ ಅಸಮಾಧಾನ ವ್ಯಕ್ತಪಡಿಸದೆ, ಸಾಲಿನಲ್ಲಿ ನಿಂತು ದಾಖಲೆಗಳನ್ನು ತೋರಿಸಿ ಭದ್ರತಾ ತಪಾಸಣೆ ಮುಗಿಯುವವರೆಗೂ ಸಹಕರಿಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಶಾರುಖ್​ ಖಾನ್​ ಅವರ ಬಗ್ಗೆ ಒಳ್ಳೆಯ ಸಂದೇಶವನ್ನು ಹೊರಹಾಕಿದ್ದಾರೆ. ಒಬ್ಬ ಬಳಕೆದಾರರು ಸ್ಟಾರ್‌ಡಮ್ ತಲೆಗೆ ಏರಗೊಡದೆ ಶಾರುಖ್ ಅವರು ಸಾಮಾನ್ಯರಂತೆ ವರ್ತಿಸಿದ್ದು ಎಲ್ಲರ ಗಮನ ಸೆಳೆದಿದೆ. ಇದು ಎಲ್ಲರಿಗೂ ಒಂದೇ ನಿಯಮಗಳು ಎಂಬ ಸಂದೇಶವನ್ನು ಸಾರುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಸೆಲೆಬ್ರಿಟಿ ಎಂಬ ಹಮ್ಮಿಲ್ಲದೆ ತಪಾಸಣೆ ನಡೆಸಿದ ಭದ್ರತಾ ಸಿಬ್ಬಂದಿಯ ಕಾರ್ಯವೈಖರಿಯನ್ನು ಕೂಡ ಜನರು ಶ್ಲಾಘಿಸಿದ್ದಾರೆ.
ವೃತ್ತಿಪರ ರಂಗದಲ್ಲಿ ನಟ 'ಪಠಾಣ್', 'ಜವಾನ್' ಮತ್ತು 'ಡಂಕಿ' ಅಂತಹ ಸತತ ಹಿಟ್ ಸಿನಿಮಾಗಳನ್ನು ನೀಡಿದ ನಂತರ ಶಾರುಖ್ ಖಾನ್ ಸದ್ಯ ಬಿಡುವಿನಲ್ಲಿದ್ದಾರೆ. ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ಕಿಂಗ್' ಬಗ್ಗೆ ಈಗಾಗಲೇ ಬಾಲಿವುಡ್‌ನಲ್ಲಿ ದೊಡ್ಡ ಮಟ್ಟದ ನಿರೀಕ್ಷೆಗಳಿವೆ. ಈ ಚಿತ್ರದಲ್ಲಿ ಅವರ ಮಗಳು ಸುಹಾನಾ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳಿವೆ. ಇದು ಡಿಸೆಂಬರ್ 24, 2026 ರಂದು ಬಿಡುಗಡೆಯಾಗಲಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net