ಸಕ್ಸಸ್​ ಸಿಕ್ಕರೂ ಹೊಸ ಚಿತ್ರಕ್ಕೆ 'ನೋ' ಎಂದ 'ಧುರಂಧರ್'​ ಬ್ಯೂಟಿ! ಅವಕಾಶಗಳೇ ಬೆನ್ನತ್ತಿದರೂ ಒಪ್ಪದ ಸಾರಾ ಅರ್ಜುನ್ | Sara Arjun

ನಟಿ ಸಾರಾ ಅರ್ಜುನ್​
ನಟಿ ಸಾರಾ ಅರ್ಜುನ್​
Published on

ಪ್ರಮುಖ ಮುಖ್ಯಾಂಶಗಳು

  • ಧುರಂಧರ್ ಯಶಸ್ಸು ಸಿಕ್ಕರೂ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ
  • ಧುರಂಧರ್​ 2 ಚಿತ್ರದ ರಿಲೀಸ್​ಗಾಗಿ ಕಾಯುತ್ತಿದ್ದಾರೆ ಯುವ ನಟಿ
  • ವದಂತಿಗಳ ಕುರಿತು ಸ್ವತಃ ಸಾರಾ ಮ್ಯಾನೇಜರ್​ ಸ್ಪಷ್ಟನೆ
Sara Arjun: ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟು, ಅಭಿಮಾನಿಗಳ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿರುವ ನಟಿ ಸಾರಾ ಅರ್ಜುನ್, ಇತ್ತೀಚೆಗಷ್ಟೇ ರಣವೀರ್ ಸಿಂಗ್ ಅಭಿನಯದ ಬ್ಲಾಕ್​ಬಸ್ಟರ್​ ಹಿಟ್​ 'ಧುರಂಧರ್'​ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದರು. ಈ ಸಿನಿಮಾದಲ್ಲಿ ಸಿಕ್ಕ ಅಭೂತಪೂರ್ವ ಯಶಸ್ಸಿನಿಂದ ಸದ್ಯ ಸಾರಾ ಅದೃಷ್ಟವೇ ಬದಲಾಗಿದೆ. ಒಂದಷ್ಟು ಬಿಗ್ ಬಜೆಟ್​ನ ಚಿತ್ರಗಳಲ್ಲಿ ನಟಿಸುವ ಅವಕಾಶಗಳು ಯುವ ನಟಿಯನ್ನು ಹುಡುಕಿಕೊಂಡು ಬರುತ್ತಿವೆ. ಆದರೆ, ಇದನ್ನು ನಟಿಯೇ ಒಪ್ಪಿಕೊಳ್ಳದಿರುವುದು ಸದ್ಯ ಸಿನಿಪ್ರಿಯರಲ್ಲಿ ಆಶ್ಚರ್ಯ ತಂದಿದೆ.
ರಣವೀರ್ ಸಿಂಗ್​ ಜೊತೆ ಧುರಂಧರ್​ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ ಸಾರಾ, ತಮ್ಮ ಪಾತ್ರದ ಮೂಲಕ ನೋಡುಗರನ್ನು ಸೆಳೆದಿದ್ದು ವಿಶೇಷ. ಇದೊಂದು ಸಿನಿಮಾದಿಂದಲೇ ಅಪಾರ ಯಶಸ್ಸು ಗಳಿಸಿರುವ ಯುವ ನಟಿಯನ್ನು ಸಾಕಷ್ಟು ಹೊಸ ಹೊಸ ಆಫರ್​ಗಳು ಹುಡುಕಿಕೊಂಡು ಬಂದಿವೆ. ವರದಿಗಳ ಪ್ರಕಾರ, ಆಕೆಯ ಯಾವುದೇ ನೂತನ ಪ್ರಾಜೆಕ್ಟ್​ಗೆ ಸಹಿ ಹಾಕಿಲ್ಲ ಎನ್ನಲಾಗಿದೆ. ಈ ಕುರಿತಂತೆ ಆಕೆಯ ಮ್ಯಾನೇಜರ್​ಗೆ ಸ್ಪಷ್ಟಪಡಿಸಿದ್ದಾರೆ.
ಧುರಂಧರ್​ ರಿಲೀಸ್​ಗೂ ಮೊದಲೇ ಸಾರಾ ಎರಡು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರು. ಒಂದು 'ಯುಫೋರಿಯಾ' ಮತ್ತೊಂದು 'ಮ್ಯಾಜಿಕ್'​. ಇದರಲ್ಲಿ ಯುಫೋರಿಯಾ ತೆರೆಕಂಡು, ಬಾಕ್ಸ್ ಆಫೀಸ್​ನಲ್ಲಿ ಮುಗ್ಗರಿಸಿತು. ಇನ್ನು ಮ್ಯಾಜಿಕ್​ ತೆರೆಗೆ ಬರಲು ಸಿದ್ಧವಾಗಿದೆ. ಮತ್ತೊಂದೆಡೆ, ಕಳೆದ ಕೆಲವು ದಿನಗಳಿಂದ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಕುರಿತು ಸ್ವತಃ ಸಾರಾ ಅರ್ಜುನ್​ ಅವರ ಮ್ಯಾನೇಜರ್​ ಮಾಹಿತಿ ನೀಡಿದ್ದಾರೆ.
ಮ್ಯಾನೇಜರ್ ಮುಖೇಶ್ ಛಾಬ್ರಾ ಎಕ್ಸ್​ (ಹಿಂದಿನ ಟ್ವಿಟರ್​) ಖಾತೆಯಲ್ಲಿ ಟ್ವೀಟ್​ ಮಾಡಿ, ಪ್ರಸ್ತುತ ಸಾರಾ ಯಾವುದೇ ಹೊಸ ಹಿಂದಿ ಚಿತ್ರಕ್ಕೆ ಸಹಿ ಹಾಕಿಲ್ಲ ಮತ್ತು 'ಧುರಂಧರ್ 2' ಬಿಡುಗಡೆಗಾಗಿ ಕಾಯುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಸಾರಾ ಅರ್ಜುನ್​ ಎರಡು ಬಿಗ್ ಬಜೆಟ್​ನ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬ ವದಂತಿಗಳನ್ನು ತಳ್ಳಿಹಾಕಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net