ರಣವೀರ್ ಸಿಂಗ್ ಜೊತೆ ಧುರಂಧರ್ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ ಸಾರಾ, ತಮ್ಮ ಪಾತ್ರದ ಮೂಲಕ ನೋಡುಗರ ಗಮನ ಸೆಳೆದಿದ್ದು ವಿಶೇಷ. ಇದೊಂದು ಸಿನಿಮಾದಿಂದಲೇ ಅಪಾರ ಯಶಸ್ಸು ಗಳಿಸಿರುವ ಬ್ಯೂಟಿಯನ್ನು ಸಾಕಷ್ಟು ಹೊಸ ಹೊಸ ಆಫರ್ಗಳು ಹುಡುಕಿಕೊಂಡು ಬರುತ್ತಿವೆ. ಬಾಲನಟಿಯಾಗಿ ಮಿಂಚಿದ್ದರೂ, ಸಾರಾಗೆ ಈ ಮಟ್ಟಿಗಿನ ಪ್ರಶಂಸೆ, ಮೆಚ್ಚುಗೆಗಳು ಸಿಕ್ಕಿರಲಿಲ್ಲ. ಆದರೆ, ಒಂದೇ ಒಂದು 'ಧುರಂಧರ್' ಯಶಸ್ಸು ನಟಿಗೆ ಅಪಾರ ಯಶಸ್ಸು ಮತ್ತು ಜನಪ್ರಿಯತೆಯನ್ನು ತಂದುಕೊಟ್ಟಿದೆ.