ಸಾರಾ ಅಲಿ ಖಾನ್‌ಗೆ ಅಫಿಡವಿಟ್ ಬಿಸಿ! ಬದರಿ-ಕೇದಾರ ದರ್ಶನ ಪಡೆಯಲು ನಟಿಗೆ ಈಗ ಹೊಸ ರೂಲ್ಸ್ ಸಂಕಷ್ಟ... Sara Ali Khan

 ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan ಚಿತ್ರ X)
ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ನಟಿ ಸಾರಾ ಅಲಿ ಖಾನ್ ಕೇದಾರನಾಥ್ ದೇವಾಲಯಗಳಿಗೆ ಭೇಟಿ ನೀಡುವುದಾದರೆ ಅಫಿಡವಿಟ್​ ಸಲ್ಲಿಸಬೇಕಾಗಿತ್ತದೆ
  • ಇನ್ನು ಮುಂದೆ ಯಾವುದೇ ಹಿಂದೂಯೇತರ ವ್ಯಕ್ತಿ ದೇವಾಲಯದ ಒಳಗೆ ಆಶೀರ್ವಾದ ಪಡೆಯಲು ಬಯಸಿದರೆ
  • ಅವರು ಅಫಿಡವಿಟ್ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದು ಹೇಮಂತ್ ದ್ವಿವೇದಿ ಹೇಳಿಕೆ ನೀಡಿದ್ದಾರೆ
ಮುಂಬೈ: ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಇನ್ನು ಮುಂದೆ ಬದರಿನಾಥ್​ ಮತ್ತು ಕೇದಾರನಾಥ್ ದೇವಾಲಯಗಳಿಗೆ ಭೇಟಿ ನೀಡುವುದಾದರೆ ಅಫಿಡವಿಟ್​ ಸಲ್ಲಿಸಬೇಕಾಗಿತ್ತದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಭುಗಿಲೆದ್ದಿದೆ.
ಮಂಗಳವಾರ (ಮಾ.17) ಬದ್ರಿ-ಕೇದಾರ ದೇವಾಲಯ ಸಮಿತಿಯ ಅಧ್ಯಕ್ಷ ಹೇಮಂತ್ ದ್ವಿವೇದಿ ಮಾಧ್ಯಮಗಳೊಂದಿಗೆ ಮಾತನಾಡಿ, ಇನ್ನು ಮುಂದೆ ಯಾವುದೇ ಹಿಂದೂಯೇತರ ವ್ಯಕ್ತಿ ದೇವಾಲಯದ ಒಳಗೆ ಆಶೀರ್ವಾದ ಪಡೆಯಲು ಬಯಸಿದರೆ, ಅವರು ಅಫಿಡವಿಟ್ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂಬ ಹೇಳಿಕೆ ನೀಡಿದ್ದಾರೆ.
ಆದಾಗ್ಯೂ, ಸಾರಾ ಅಲಿ ಖಾನ್ ಸನಾತನ ಧರ್ಮದ ಬಗ್ಗೆ ತನ್ನಲ್ಲಿರುವ ಭಕ್ತಿಯನ್ನು ವ್ಯಕ್ತಪಡಿಸಿ ಅಫಿಡವಿಟ್​ ಸಲ್ಲಿಸಿದರೆ, ನಾವು ಅವರಿಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುತ್ತೇವೆ ಎಂದು ದ್ವಿವೇದಿ ಸ್ಪಷ್ಟೀಕರಣ ನೀಡಿದರು.
ಸಾರಾ ಅಲಿ ಖಾನ್​ ಹಲವಾರು ವರ್ಷಗಳಿಂದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡುತ್ತಾ ಬಂದಿದ್ದಾರೆ. 2017 ರಲ್ಲಿ ಕೇದಾರನಾಥ ಚಿತ್ರೀಕರಣದ ಸಮಯದಲ್ಲಿ ಅವರ ಸಂಪರ್ಕ ಪ್ರಾರಂಭವಾಯಿತು. ಅಂದಿನಿಂದ ಇಂದಿನವರೆಗೂ ಏಪ್ರಿಲ್​ ಅಥವಾ ನವೆಂಬರ್​ಗಳಲ್ಲಿ ಭೇಟಿ ನೀಡುತ್ತಾರೆ.
ಸಾಮಾನ್ಯವಾಗಿ ಅವರು ಕೇದಾರನಾಥಕ್ಕೆ ಭೇಟಿ ನೀಡಲು ಬಯಸಿದರೆ, ನಟಿ ಹೆಲಿಕಾಪ್ಟರ್ ಪ್ರಯಾಣವನ್ನು ಒಳಗೊಂಡಿರುತ್ತಾರೆ. ನಟಿಯಾಗಿದ್ದರೂ ಸಹ ಯಾವುದೇ ವಿಶೇಷ ಸ್ಥಾನಮಾನ ಅಥವಾ ಅಧಿಕೃತ ಸವಲತ್ತುಗಳನ್ನು ನಿರೀಕ್ಷಿಸದೇ ಎಲ್ಲಾ ಭಕ್ತರಂತೆ ದೇವಾಲಯದ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಈ ಪ್ರವಾಸಗಳು ಅವರ ವೈಯಕ್ತಿಕ ಆಚರಣೆ ಮತ್ತು ಆಧ್ಯಾತ್ಮಿಕ ನಂಬಿಕೆಯಾಗಿರುತ್ತದೆ.
ಸಾರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತನ್ನ ಭೇಟಿಗಳ ಸುಂದರ ಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಹಿಮದಿಂದ ಆವೃತವಾದ ದೇವಾಲಗಳು, ಪ್ರಾರ್ಥನೆಗಳಲ್ಲಿ ಭಾಗವಹಿಸುವುದನ್ನು ಹಂಚಿಕೊಳ್ಳುತ್ತಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net