ದಂಗಲ್ ಸುಂದರಿಯ ಲವ್ ಸ್ಟೋರಿ ಅಂತ್ಯ? ಪರಸ್ಪರ ಅನ್​ಫಾಲೋ ಮಾಡಿಕೊಂಡ ಜೋಡಿ; ಸಿತಾರ್ ವಾದಕ ರಿಷಬ್​ ಜೊತೆ ಸಾನ್ಯಾ ಬ್ರೇಕಪ್​! Sanya Malhotra Rishab Sharma

ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರಾ ಮತ್ತು ಸಿತಾರ್ ವಾದಕ ರಿಷಬ್ ಶರ್ಮಾ ನಡುವೆ ಬಿರುಕು
ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರಾ ಮತ್ತು ಸಿತಾರ್ ವಾದಕ ರಿಷಬ್ ಶರ್ಮಾ ನಡುವೆ ಬಿರುಕು
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​ ನ್ಯೂಸ್​
  • ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರಾ ಮತ್ತು ಸಿತಾರ್ ವಾದಕ ರಿಷಬ್ ಶರ್ಮಾ ನಡುವೆ ಬಿರುಕು
  • ಪರಸ್ಪರ ಅನ್​ಫಾಲೋ ಮಾಡಿಕೊಂಡ ಜೋಡಿ
ಮುಂಬೈ: ಬಾಲಿವುಡ್ ಅಂದ ಮೇಲೆ ಅಲ್ಲಿ ಪ್ರೀತಿ, ಪ್ರೇಮ, ಬ್ರೇಕಪ್‌ಗಳ ಸುದ್ದಿಗೆ ಎಂದೂ ಬರಗಾಲವಿಲ್ಲ. ಈಗ ಅಂತಹದ್ದೇ ಒಂದು ಸುದ್ದಿ ಬಿ-ಟೌನ್ ಅಂಗಳದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ದಂಗಲ್​ ಸುಂದರಿ ನಟಿ ಸಾನ್ಯಾ ಮಲ್ಹೋತ್ರಾ ಮತ್ತು ಪ್ರಸಿದ್ಧ ಸಿತಾರ್ ವಾದಕ ರಿಷಬ್ ರಿಖಿರಾಮ್ ಶರ್ಮಾ (Sanya Malhotra Rishab Sharma) ನಡುವೆ ಇಷ್ಟು ದಿನ ಗುಟ್ಟಾಗಿ ನಡೆದಿದ್ದ ಇವರ ಪ್ರೇಮ ಪುರಾಣ, ಈಗ ಅಷ್ಟೇ ಸೈಲೆಂಟಾಗಿ ಅಂತ್ಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪರಸ್ಪರ ಅನ್‌ಫಾಲೋ ಮಾಡಿದ ಜೋಡಿ!

ಸಾನ್ಯಾ ಮತ್ತು ರಿಷಬ್ ಕಳೆದ ಒಂದು ವರ್ಷದಿಂದ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿ ಇತ್ತು. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಂದೂ ಅಧಿಕೃತವಾಗಿ ಬಾಯಿ ಬಿಟ್ಟಿರಲಿಲ್ಲ. ಆದರೆ, ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅನ್‌ಫಾಲೋ ಮಾಡುವ ಮೂಲಕ ತಮ್ಮ ಸಂಬಂಧ ಮುರಿದುಬಿದ್ದಿದೆ ಎಂಬ ಮುನ್ಸೂಚನೆ ನೀಡಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳ ಲೋಕದಲ್ಲಿ ಅನ್‌ಫಾಲೋ ಮಾಡುವುದೆಂದರೆ ಸಂಬಂಧಕ್ಕೆ ವಿದಾಯ ಹೇಳುವುದು ಎಂದೇ ಅರ್ಥ ಎನ್ನುತ್ತಾರೆ ಅಭಿಮಾನಿಗಳು.
ದೀಪಿಕಾ ಜೊತೆ ಕಂಡಿದ್ದ ಸಿತಾರ್ ವಾದಕನಿಗೆ ಈಗ ಹೊಸ ಲವ್?
ಇನ್ನೊಂದು ಶಾಕಿಂಗ್ ಸುದ್ದಿ ಏನೆಂದರೆ, ರಿಷಬ್ ಈಗ ಸಾನ್ಯಾಳನ್ನು ಮರೆತು ಬೇರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರಂತೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ದೀಪಿಕಾ ಪಡುಕೋಣೆ ಅವರೊಂದಿಗೆ ಕಾಣಿಸಿಕೊಂಡಿದ್ದ ಈ ಸಿತಾರ್ ವಾದಕ, ಈಗ ಗುಟ್ಟಾಗಿ ಹೊಸ ಪ್ರೇಮಿಯನ್ನು ಹುಡುಕಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಿಷಬ್ ಈಗ ಬೇರೊಬ್ಬರ ಜೊತೆಗಿದ್ದಾರೆ, ಆದರೆ ಅದನ್ನೂ ಅವರು ಗುಟ್ಟಾಗಿಟ್ಟಿದ್ದಾರೆ ಎಂಬ ಸುದ್ದಿಯಿದೆ.

ಕಾಶಿ ವಿಶ್ವನಾಥನ ದರ್ಶನದಲ್ಲೂ ಜೊತೆಯಾಗಿದ್ದರು!

ಇವರಿಬ್ಬರ ಪ್ರೀತಿ ಎಷ್ಟು ಗಟ್ಟಿಯಾಗಿತ್ತು ಎಂದರೆ, 2024ರ ಡಿಸೆಂಬರ್‌ನಲ್ಲಿ ಇಬ್ಬರೂ ಜೊತೆಯಾಗಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರೆಡ್ಡಿಟ್‌ನಲ್ಲಿ ಅಭಿಮಾನಿಯೊಬ್ಬರು ಹಂಚಿಕೊಂಡ ಮಾಹಿತಿಯ ಪ್ರಕಾರ, ಕಾಶಿ ವಿಶ್ವನಾಥನ ದೇವಸ್ಥಾನದಲ್ಲಿ ರಿಷಬ್ ಶರ್ಮಾ ಸಿತಾರ್ ಪಾಂಡಿತ್ಯದ ಕಾರಣ ಗುರುತಿಸಲ್ಪಡುತ್ತಿದ್ದರು. ಅದೇ ಸಮಯದಲ್ಲಿ ಅವರ ಪಕ್ಕದಲ್ಲೇ ಸಾನ್ಯಾ ಮಲ್ಹೋತ್ರಾ ತಲೆ ತಗ್ಗಿಸಿ ಧ್ಯಾನ ಮಾಡುತ್ತಿದ್ದರು ಎಂದು ವರದಿಯಾಗಿತ್ತು. ಆದರೆ ಅಲ್ಲಿಯೂ ಅವರು ಸಾರ್ವಜನಿಕವಾಗಿ ಒಟ್ಟಿಗೆ ಫೋಟೋ ತೆಗೆಸಿಕೊಳ್ಳುವುದನ್ನು ತಪ್ಪಿಸಿದ್ದರು.

ರೆಡ್ಡಿಟ್‌ನಲ್ಲಿ ವೈರಲ್ ಆದ ಗುಟ್ಟು

ಜನವರಿ 2025ರಲ್ಲಿ ರೆಡ್ಡಿಟ್ ಬಳಕೆದಾರರು ಇಬ್ಬರೂ ಒಂದೇ ಸ್ಥಳದಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದರು. ಅಲ್ಲಿಂದಲೇ ಇವರ ಡೇಟಿಂಗ್ ವದಂತಿ ಕಿಚ್ಚು ಹಚ್ಚಿತ್ತು. ಒಂದೇ ಕಾರ್ಯಕ್ರಮಕ್ಕೆ ಹೋದರೂ ಪ್ರತ್ಯೇಕವಾಗಿ ಎಂಟ್ರಿ ಕೊಡುವುದು, ಪ್ರತ್ಯೇಕವಾಗಿ ಫೋಟೋ ತೆಗೆಸಿಕೊಳ್ಳುವುದು ಇವರ ಹವ್ಯಾಸವಾಗಿತ್ತು. ಆದರೆ ನೆಟ್ಟಿಗರ ಕಣ್ಣಿಗೆ ಇಬ್ಬರೂ ಒಂದೇ ವ್ಯಕ್ತಿಯೊಂದಿಗೆ ಬೇರೆ ಬೇರೆ ಸಮಯದಲ್ಲಿ ಫೋಟೋ ತೆಗೆಸಿಕೊಂಡಿರುವುದು ಸಿಕ್ಕಿಬಿದ್ದಿತ್ತು.

ಅಷ್ಟಕ್ಕೂ ಬ್ರೇಕಪ್ ಯಾಕೆ?

ಯಾವುದೇ ವಿವಾದಗಳಿಲ್ಲದೆ, ಸರಳವಾಗಿ ತಮ್ಮ ಪ್ರೀತಿಯನ್ನು ಕಾಪಾಡಿಕೊಳ್ಳಲು ಬಯಸಿದ್ದ ಈ ಜೋಡಿ ಈಗ ಏಕೆ ದೂರವಾಯಿತು ಎಂಬುದು ಮಾತ್ರ ಇನ್ನೂ ನಿಗೂಢ. ಸದ್ಯಕ್ಕೆ ಸಾನ್ಯಾ ಮಲ್ಹೋತ್ರಾ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರೆ, ರಿಷಬ್ ತಮ್ಮ ಸಂಗೀತ ಲೋಕದಲ್ಲಿ ಮುಳುಗಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net