Aakhri Sawal - ಕುತೂಹಲ ಮೂಡಿಸಿದೆ "ಆಖ್ರಿ ಸವಾಲ್​'ನಲ್ಲಿ ಗುರು-ಶಿಷ್ಯರ ಜುಗಲ್​ಬಂದಿ

ಆಖ್ರೀ ಸವಾಲ್​
ಆಖ್ರೀ ಸವಾಲ್​
Published on
Aakhri Sawal -
ರಾಷ್ಟ್ರೀಯ ಸ್ವಯಂಸೇವಕ ಸಂ ನೂರು ವರ್ಷಗಳನ್ನು ಪೂರೈಸಿರುವ ಸಮಯದಲ್ಲಿ ಬಾಲಿವುಡ್​ನಲ್ಲಿ ಬ್ಯಾಕ್​ ಟು ಬ್ಯಾಕ್​ ಸಂದ ಕುರಿತ ಚಿತ್ರಗಳು ಬರುತ್ತಿವೆ. ಆಶಿಶ್​ ಮಾಲ್​ ನಿರ್ದೇಶನದ "ಶತಕ್​' ಸಾಕ್ಷ್ಯಚಿತ್ರವಾಗಿದ್ದರೂ ಸಿನಿಮಾಗಳಂತೆಯೇ ಇದೇ ಫೆ. 20ರಂದು ದೇಶಾದ್ಯಂತ ಬಿಡುಗಡೆ ಮಾಡಲಾಗಿತ್ತು. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿತ್ತು. ಅದರ ಬೆನ್ನಲ್ಲೇ ಮತ್ತೊಂದು ಚಲನಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಹೆಸರು "ಆಖ್ರೀ ಸವಾಲ್​'. ತಮ್ಮ ಕರಿಯರ್​ನ ಎರಡನೇ ಇನ್ನಿಂಗ್ಸ್​ನಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಬಾಲಿವುಡ್​ ನಟ ಸಂಜಯ್​ ದತ್​, ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಜತೆಗೆ ನಿಖಿಲ್​ ನಂದಾ ಜತೆ ಚಿತ್ರದ ನಿರ್ಮಾಣದಲ್ಲೂ ಕೈಜೋಡಿಸಿದ್ದಾರೆ. ಮರಾಠಿ ಸಿನಿಮಾ "ಪಿಕಾಸೋ' ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಅಭಿಜೀತ್​ ಮೋಹನ್​ ವಾರಂಗ್​ ಈ ಚಿತ್ರ ನಿರ್ದೇಶಿಸಿದ್ದು, ಸಂಜಯ್​ ದತ್​ ಜತೆ ಅಮಿತ್​ ಸಧ್​, ನಮಷಿ ಚಕ್ರಬೊರ್ತಿ, ಸಮೀರಾ ರೆಡ್ಡಿ, ನೀತುಚಂದ್ರ, ತ್ರಿಧಾ ಚೌಧರಿ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಇತ್ತೀಚೆಗಷ್ಟೆ ಟೀಸರ್​ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ. ಇದೇ ಮೇ.8ರಂದು "ಆಖ್ರೀ ಸವಾಲ್​' ಬಿಡುಗಡೆಯಾಗಲಿದೆ. ​

ಚಿತ್ರದಲ್ಲೇನಿದೆ?

ಪ್ರೊೆಸರ್​ ಗೋಪಾಲ್​ ನಾಡಕರ್ಣಿ ಪಾತ್ರದಲ್ಲಿ ಸಂಜಯ್​ ದತ್​ ನಟಿಸಿದ್ದು, ಅವರ ಶಿಷ್ಯ ವಿಕ್ಕಿಯಾಗಿ ನಮಷಿ ಚಕ್ರಬೊರ್ತಿ ಕಾಣಿಸಿಕೊಳ್ಳಲಿದ್ದಾರೆ. ಆರ್​ಎಸ್​ಎಸ್​ 100 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಒಂದು ಥೀಸೀಸ್​ ಬರೆಯಬೇಕೆಂದುಕೊಂಡಿದ್ದೇನೆ ಎಂದು ವಿಕ್ಕಿ, ತನ್ನ ಗುರು ಪ್ರೊ. ಗೋಪಾಲ್​ ಬಳಿ ಕೇಳುತ್ತಾನೆ. ಅದಕ್ಕೆ ಗುರು ಒಪು$್ಪತ್ತಾರೆ. ಆದರೆ, ವಿಕ್ಕಿ ಬರೆದ ಪ್ರಬಂಧವು ಸತ್ಯಕ್ಕೆ ದೂರವಾಗಿದ್ದು, ಹಲವು ವಿವಾದಾತ್ಮಕ ಅಂಶಗಳಿರುವುದನ್ನು ಮನಗಂಡು, ಪ್ರೊಫೆಸರ್​ ಆತನ ಪ್ರಬಂಧವನ್ನು ತಿರಸ್ಕರಿಸುತ್ತಾರೆ. ಮತ್ತೊಂದೆಡೆ ತನ್ನ ಪ್ರಬಂಧವೇ ಸತ್ಯವೆಂದು ಶಿಷ್ಯ, ಗುರುವಿನ ವಿರುದ್ಧ ತಿರುಗಿಬೀಳುತ್ತಾನೆ. ಕ್ರಮೇಣ ಈ ವಿಷಯ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆದು, ಕೆಲವರು ಗುರು ಬೆಂಬಲಕ್ಕೆ ನಿಂತರೆ, ಕೆಲವರು ಶಿಷ್ಯನೇ ಸರಿ ಎನ್ನುತ್ತಾರೆ. 1948ರಲ್ಲಿ ಆರ್​ಎಸ್​ಎಸ್​ಅನ್ನು ಏಕೆ ಬ್ಯಾನ್​ ಮಾಡಲಾಗಿತ್ತು? ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸಂದ ಪಾತ್ರವೇನು? ಇದೊಂದು ರಾಷ್ಟ್ರವಿರೋಧಿ ಸಂಟನೆ ಅಲ್ಲವೇ? ಎಂಬೆಲ್ಲ ಪ್ರಶ್ನೆಗಳನ್ನು ಶಿಷ್ಯ, ಗುರು ಬಳಿ ಕೇಳುತ್ತಾನೆ. ಹಾಗಾದರೆ, ತನಗೇ ತಿರುಮಂತ್ರ ಹೇಳಿದ ಶಿಷ್ಯನಿಗೆ ಈ ಗುರು ಸರಿಯಾದ ಉತ್ತರ ನೀಡುತ್ತಾನಾ? ಎಂಬುದರ ಸುತ್ತ "ಆಖ್ರೀ ಸವಾಲ್​' ಸಾಗುತ್ತದೆ.

ಸಮೀರಾ, ನೀತು ಕಮ್​ಬ್ಯಾಕ್​

ಕನ್ನಡದ ಜತೆಗೆ ತಮಿಳು, ತೆಲುಗು, ಹಿಂದಿಯಲ್ಲಿ 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಬಾಲಿವುಡ್​ ನಟಿ ಸಮೀರಾ ರೆಡ್ಡಿ, ಇದೀಗ "ಆಖ್ರೀ ಸವಾಲ್​' ಮೂಲಕ ಸೆಕೆಂಡ್​ ಇನ್ನಿಂಗ್ಸ್​ ಆರಂಭಿಸಿದ್ದಾರೆ. 2013ರಲ್ಲಿ ಬಿಡುಗಡೆಯಾಗಿದ್ದ "ವರದನಾಯಕ' ಬಳಿಕ ಅವರು 2024ರಲ್ಲಿ "ನಾಮ್​' ಎಂಬ ಚಿತ್ರದಲ್ಲಿ ನಟಿಸಿದ್ದರೂ, ಅದು ರಿಲೀಸ್​ ಆಗಿರಲಿಲ್ಲ. ಹೀಗಾಗಿ 47 ವರ್ಷದ ಸಮೀರಾ 13 ವರ್ಷಗಳ ಬಳಿಕ ಮತ್ತೆ ಬೆಳ್ಳಿತೆರೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಹಾಗೇ ಕನ್ನಡದ "ಪವರ್​' ಚಿತ್ರದಲ್ಲಿ "ವೈ ವೈ' ಹಾಡಿಗೆ ಕುಣಿದು ಕುಪ್ಪಳಿಸಿದ್ದ ಮತ್ತೊಬ್ಬ ಬಹುಭಾಷಾ ನಟಿ ನೀತು ಚಂದ್ರು ಸಹ "ಆಖ್ರೀ ಸವಾಲ್​' ಮೂಲಕ ಐದು ವರ್ಷಗಳ ನಂತರ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. 2017ರಲ್ಲಿ ತೆರೆಗೆ ಬಂದ ತಮಿಳಿನ "ಬ್ರಹ್ಮ.ಕಾಂ' ಬಳಿಕ ಹಾಲಿವುಡ್​ಗೆ ಹಾರಿದ್ದ ನೀತು 2021ರಲ್ಲಿ "ನೆವರ್​ ಬ್ಯಾಕ್​ ಡೌನ್​- ರಿವೋಲ್ಟ್​'ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಐದು ವರ್ಷಗಳ ನಂತರ ಮತ್ತೆ ಬಾಲಿವುಡ್​ಗೆ ಕಮ್​ಬ್ಯಾಕ್​ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net