ನನಗೆ ಸಲಹೆ ಬೇಕಾದಾಗ ನಿಮ್ಮನ್ನು ಕೇಳುತ್ತೇನೆ: ಟ್ರೋಲರ್ಸ್​ಗೆ ಕ್ಲಾಸ್​ ತೆಗೆದುಕೊಂಡ ನಟಿ ಸಮಂತಾ! Samantha Ruth Prabhu

ಸಮಂತಾ ಪ್ರಭು
ಸಮಂತಾ ಪ್ರಭು
Published on
Samantha Ruth Prabhu : ಬಾಲಿವುಡ್​ ನಟಿ ಸಮಂತಾ ರುತ್​ ಪ್ರಭು ಅವರು 2022 ರಲ್ಲಿ ಸ್ವಯಂ ನಿರೋಧಕ ಸ್ಥಿತಿಯಾದ ಮಯೋಸಿಟಿಸ್‌ನಿಂದ ಬಳಲುತ್ತಿದ್ದಾರೆ ಎಂದು ಹಂಚಿಕೊಂಡ ನಂತರ, ಅಂದಿನಿಂದ ಅನೇಕ ಸಾಮಾಜಿಕ ಬಳಕೆದಾರರು ಅವರ ನೋಟಕ್ಕಾಗಿ ಟ್ರೋಲ್​ ಮಾಡಿದ್ದಾರೆ. ಕೆಲವರು ಅವರನ್ನು ತೆಳ್ಳಗೆ ಎಂದು ಕರೆದರೆ, ಇನ್ನು ಕೆಲವರು ಅವರಿಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಅಭಿಪ್ರಾಯ ಸೂಚಿಸಿದ್ದಾರೆ.
ಆದಾಗ್ಯೂ, ಹನಿ ಬನ್ನಿ ನಟಿ ತಾನು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಯನ್ನು ತನ್ನ ಹೆಜ್ಜೆಯಾಗಿ ಸ್ವೀಕರಿಸಿದರು. ಆಕೆಯ ಪ್ರಯಾಣದುದ್ದಕ್ಕೂ ಅವಳ ಜೊತೆಯಲ್ಲಿ ಪ್ರೀತಿಪಾತ್ರರು, ಸ್ನೇಹಿತರು ಮತ್ತು ಹಿತೈಷಿಗಳು ಇದ್ದರು. ಇದರಿಂದ ಆಕೆಯು ಶಕ್ತಿ ತರಬೇತಿಯನ್ನು ಪ್ರಾರಂಭಿಸಿದ್ದು, ತನ್ನ ಬೆನ್ನಿನ ಸ್ನಾಯುಗಳನ್ನು ತೋರಿಸುವ ಚಿತ್ರವನ್ನು ಆಕೆಯ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ಇವರ ಈ ಪೋಸ್ಟ್​ಗೆ ಅರ್ಬಾಜ್ ಎಂದು ಗುರುತಿಸಲ್ಪಟ್ಟ ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ತೆಳ್ಳಗೆ ಕಾಣುವಷ್ಟು ವ್ಯಾಯಾಮ ಮಾಡಬಾರದು ಎಂದು ಕಮೆಂಟ್​ ಮಾಡಿದ್ದಾರೆ. ಅದಕ್ಕೆ ನನಗೆ ಬೇಕಾದಾಗ ನಿಮ್ಮ ಸಲಹೆ ಕೇಳುತ್ತೇನೆ ಎಂದು ಸಮಂತಾ ಉತ್ತರಿಸಿ, ಆತನ ಬಾಯಿ ಮುಚ್ಚಿಸಿದ್ದಾರೆ.

ಸಮಂತಾ ರುತ್ ಪ್ರಭು ಅವರ ಶಕ್ತಿ ತರಬೇತಿ ಅನುಭವ

ಕೆಲವು ವರ್ಷಗಳಿಂದ, ನಾನು ಬೆನ್ನಿನ ಸಮಸ್ಯೆಯನ್ನು ಹೊಂದಿದ್ದೇನೆ. ಅದು ನನ್ನ ಜೀನ್‌ಗಳಲ್ಲಿ ಇಲ್ಲ ಎಂದು ನಾನು ನಿಜವಾಗಿಯೂ ಭಾವಿಸಿದೆ. ಉತ್ತಮ ಬೆನ್ನನ್ನು ಹೊಂದಿರುವ ಇತರ ಜನರನ್ನು ನೋಡಿದಾಗ ನನಗೆ ಸ್ವಲ್ಪ ಬೇಸರವಾಗುತ್ತದೆ ಎಂದು ನಟಿ ತಿಳಿಸಿದ್ದಾರೆ.
"ಸ್ನಾಯುಗಳನ್ನು ನಿರ್ಮಿಸುವುದು ಬಹಳ ಮುಖ್ಯ. ನೀವು ಹೇಗೆ ಕಾಣುತ್ತೀರಿ ಎಂಬುದಕ್ಕೆ ಮಾತ್ರವಲ್ಲ, ನೀವು ಹೇಗೆ ಬದುಕುತ್ತೀರಿ, ಹೇಗೆ ಚಲಿಸುತ್ತೀರಿ, ಹೇಗೆ ವಯಸ್ಸಾಗುತ್ತೀರಿ ಎಂಬುದಕ್ಕೆ ತರಬೇತಿ ಮುಖ್ಯವಾಗಿದೆ. ನೀವು ವಯಸ್ಸಾದಂತೆ, ಶಕ್ತಿ ತರಬೇತಿಯು ನಿಮ್ಮ ಉತ್ತಮ ಸ್ನೇಹಿತನಾಗಬೇಕು" ಎಂದು ನಟಿ ಯಶೋದ ಹಂಚಿಕೊಂಡಿದ್ದಾರೆ.
ಶಕ್ತಿ ತರಬೇತಿ ನನಗೆ ಬೇರೇನಕ್ಕಿಂತಲೂ ಹೆಚ್ಚಿನದನ್ನು ಮಾಡಿದೆ. ಅದು ನನಗೆ ಶಿಸ್ತು, ತಾಳ್ಮೆಯನ್ನು ಕಲಿಸಿದೆ. ಇದು ನನ್ನ ಜೀನ್​ಗಳಲ್ಲಿ ಇಲ್ಲ ಎಂಬುದನ್ನು ಸಾಬೀತು ಪಡಿಸಿತು ಎಂದು ಸಮಂತಾ ಬರೆದು ಪೋಸ್ಟ್ ಮಾಡಿದ್ದಾರೆ.
ಇನ್ನು ಸಮಂತಾ ಅವರ ಅಭಿಂಆನಿಗಳು ಎಂದಿಗೂ ನಿಮ್ಮನ್ನು ಬಿಟ್ಟುಕೊಡುವುದಿಲ್ಲ. ಛಲ ಬಿಡದೇ ಮುಂದುವರೆಯುತ್ತೀರಿ ನಿಮ್ಮ ಭವಿಷ್ಯ ಚನ್ನಾಗಿರಲಿ ಎಂದು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ.
(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net