‘ಗಲ್ವಾನ್’ ಅಲ್ಲ ‘ಮಾತೃಭೂಮಿ’ : ಸಲ್ಮಾನ್ ಖಾನ್ ಚಿತ್ರಕ್ಕೆ ಹೊಸ ನಾಮಕರಣ ಮಾಡಿದ ಚಿತ್ರತಂಡ

ಮಾತೃಭೂಮಿ ಪೋಸ್ಟರ್​
ಮಾತೃಭೂಮಿ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಸಲ್ಮಾನ್ ನಟನೆಯ ಮುಂದಿನ ಚಿತ್ರದ ಶೀರ್ಷಿಕೆಯಲ್ಲಿ ದಿಢೀರ್ ಬದಲಾವಣೆ
  • ಮಾತೃಭೂಮಿ ಎಂದು ಹೊಸ ಟೈಟಲ್ ನಿಗದಿ
  • ಸೈನಿಕನ ಜೀವನಗಾಥೆ, ಹೋರಾಟದ ನಿರೂಪಣೆಗೆ ಇದೇ ಟೈಟಲ್ ಸೂಕ್ತ ಎಂದ ತಂಡ
‘ಸಿಕಂದರ್’ ಬಳಿಕ ಬಾಲಿವುಡ್ ನಟ ಸಲ್ಮಾನ್ ಖಾನ್, ಅಪೂರ್ವ ಲಾಖಿಯಾ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರಕ್ಕೆ ‘ಬ್ಯಾಟಲ್ ಆಫ್​ ಗಲ್ವಾನ್’ ಎಂದು ಶೀರ್ಷಿಕೆಯಿಡಲಾಗಿತ್ತು. ಈಗಾಗಲೇ ಚಿತ್ರತಂಡ ಚಿತ್ರೀಕರಣ ಪೂರ್ಣಗೊಳಿಸಿ, ಏಪ್ರಿಲ್ ಅಥವಾ ಮೇನಲ್ಲಿ ಸಿನಿಮಾ ತೆರೆಗೆ ತರುವ ನಿಟ್ಟಿನಲ್ಲಿ ಕಾರ್ಯನಿರತವಾಗಿತ್ತು. ಏತನ್ಮಧ್ಯೆ, ದಿಢೀರನೆ ಚಿತ್ರತಂಡ ಟೈಟಲ್ ಬದಲಿಸಿ, ಅಚ್ಚರಿ ನೀಡಿದೆ. ಹೌದು, ಸಲ್ಮಾನ್ ಖಾನ್ ಅಭಿನಯದ ‘ಬ್ಯಾಟಲ್ ಆ್ ಗಲ್ವಾನ್’ ಚಿತ್ರಕ್ಕೆ ಇದೀಗ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಎಂದು ಹೊಸ ಟೈಟಲ್ ನೀಡಲಾಗಿದೆ. ಸೋಮವಾರ ಹೊಸ ಪೋಸ್ಟರ್ ರಿಲೀಸ್ ಮಾಡಿ, ಚಿತ್ರತಂಡ ಅಧಿಕೃತಗೊಳಿಸಿದೆ. ಇನ್ನೇನು ರಿಲೀಸ್‌ಗೆ ಸಿದ್ಧವಾಗಿರುವಾಗಲೇ ಚಿತ್ರತಂಡ ಟೈಟಲ್ ಬದಲಿಸಿರುವ ಬಗ್ಗೆ ಥರೇಹವಾರಿ ಚರ್ಚೆಗಳು ನಡೆಯುತ್ತಿವೆ. 2020ರ ಜೂ.15ರಂದು ಗಲ್ವಾನ್ ಕಣಿವೆಯಲ್ಲಿ ಭಾರತ ಹಾಗೂ ಚೀನಾ ಸೈನಿಕರ ನಡುವೆ ಸಂಘರ್ಷ ಉಂಟಾಗಿತ್ತು. ಅದರಲ್ಲಿ ಕಮಾಂಡಿಂಗ್ ಆಫೀಸರ್ ಸಂತೋಷ್ ಬಾಬು ಸೇರಿ 20 ಭಾರತೀಯ ಸೈನಿಕರು ವೀರಮರಣವನ್ನಪ್ಪಿದ್ದರು. ಆ ಬಳಿಕ ಚೀನಾ ಸೈನಿಕರ ಮೇಲೆ ಮುಗಿಬಿದ್ದ ಭಾರತೀಯ ಸೈನಿಕರು 40ಕ್ಕೂ ಹೆಚ್ಚು ಶತ್ರುಸೈನಿಕರನ್ನು ಸದೆಬಡಿದಿದ್ದರು. ಈ ಘಟನೆಯ ಸುತ್ತ ಸಿನಿಮಾ ಇರಲಿದೆ ಎನ್ನಲಾಗುತ್ತಿದೆ. ಇಲ್ಲಿ ಕೇವಲ ಯುದ್ಧವನ್ನು ವೈಭವಿಕರಿಸದೇ ಸೈನಿಕನ ಬದುಕು, ದೇಶಪ್ರೇಮ, ಭಾವನಾತ್ಮಕ ಸಂಬಂಧ, ಪ್ರೀತಿಯ ಅಂಶಗಳ ಮೂಲಕ ನಿರೂಪಿಸಲಾಗುತ್ತಿದೆ. ಹಾಗಾಗಿ, ಕೆಲವರು ಟೈಟಲ್ ಬದಲಾವಣೆಗೆ ಸೂಚಿಸಿರುವುದನ್ನು ಮನಗಂಡ ಸಲ್ಮಾನ್ ಅಂತಿಮವಾಗಿ ‘ಮಾತೃಭೂಮಿ’ ಎಂದು ಟೈಟಲ್ ನಿಗದಿಪಡಿಸಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕಾಗಿ ಚಿತ್ರದ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಇಲ್ಲಿ ಸಲ್ಮಾನ್‌ಗೆ ಚಿತ್ರಾಂಗದಾ ಸಿಂಗ್ ಜೋಡಿಯಾಗಿದ್ದಾರೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net