ಮುಂಬೈ: ಭಾರತೀಯ ಚಿತ್ರರಂಗದ ದಂತಕಥೆ, ಶೋಲೆ, ಜಂಜೀರ್ ನಂತಹ ಸಾರ್ವಕಾಲಿಕ ಶ್ರೇಷ್ಠ ಸಿನಿಮಾಗಳಿಗೆ ಕಥೆ ಬರೆದ ಸಲೀಂ ಖಾನ್ (Salim Khan) ಅವರ ಆರೋಗ್ಯದ ಬಗ್ಗೆ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ತರಹೇವಾರಿ ಸುದ್ದಿಗಳು ಬಿತ್ತರವಾಗುತ್ತಿದ್ದವು. ಈ ಬೆಳವಣಿಗೆಯಿಂದ ಅಸಾಮಾಧನಗೊಂಡಿರುವ ಖಾನ್ ಕುಟುಂಬ, ಹೆಚ್ಚಿನ ಆರೋಗ್ಯ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು ಎಂದು ವೈದ್ಯರಿಗೆ ಸ್ಪಷ್ಟನೆ ನೀಡಿದ್ದಾರೆ.