ಇದಕ್ಕೆಲ್ಲಾ ಅರ್ಥವಿಲ್ಲ: ಟ್ರೋಲರ್ಸ್​ಗಳಿಗೆ ತಮ್ಮದೇ ಆದ ಸ್ಟೈಲ್​ನಲ್ಲಿ ಬಾಯಿ ಮುಚ್ಚಿಸಿದ ಸಲ್ಮಾನ್ ಖಾನ್! Salman Khan

ಚಿತ್ರ Instagram
ಚಿತ್ರ Instagram
Published on
Salman Khan: ಸಲ್ಮಾನ್ ಖಾನ್ ಅವರ 'ಬ್ಯಾಟಲ್ ಆಫ್ ಗಾಲ್ವಾನ್'  ಚಿತ್ರದ ಟೀಸರ್ ಬಿಡುಗಡೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಅವರ  'ಲುಕ್' ಮತ್ತು ಅಭಿನಯದ ಬಗ್ಗೆ ಕೇಳಿಬಂದ ಟ್ರೋಲ್‌ಗಳಿಗೆ ಸಲ್ಮಾನ್ ಖಾನ್ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ.

ಟೀಸರ್ ಟ್ರೋಲ್ ಮಾಡಿದವರಿಗೆ ಪ್ರತಿಕ್ರಿಯೆ ನೀಡಿದ ಸಲ್ಮಾನ್ 

ಸಾಮಾಜಿಕ  ಜಾಲತಾಣದಲ್ಲಿ ಚರ್ಚೆ ಆಗುತ್ತಿರುವ ಮಧ್ಯ,  ಸೂರತ್‌ನಲ್ಲಿ ನಡೆದ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ISPL) ಕ್ರಿಕೆಟ್ ಕಾರ್ಯಕ್ರಮದಲ್ಲಿ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರೊಂದಿಗೆ ಮಾತನಾಡಿದ ಸಲ್ಮಾನ್​, ಟ್ರೋಲಿಂಗ್​ಗಳಿಗೆ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಲುಕ್​ನ ಹಿಂದಿನ ಸಂದರ್ಭವನ್ನು ವಿವರಿಸಿದ್ದಾರೆ.
 ಟೀಸರ್‌ನಲ್ಲಿ ಸಲ್ಮಾನ್ ಅವರ ಮುಖದ ಹಾವಭಾವಗಳು ಸ್ವಲ್ಪ ವಿಚಿತ್ರವಾಗಿವೆ ಎಂದು ನೆಟ್ಟಿಗರು ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಟ, ಆ ಅಭಿವ್ಯಕ್ತಿಯು ಕೇವಲ ನಟನೆಯಲ್ಲ, ಅದು ಯುದ್ಧ ಭೂಮಿಯಲ್ಲಿ ಒಬ್ಬ ಸೈನಿಕ ಅನುಭವಿಸುವ ಮಾನಸಿಕ ಸಂಘರ್ಷ, ನೋವು ಮತ್ತು ದೇಶಪ್ರೇಮದ ತೀವ್ರತೆಯನ್ನು ಬಿಂಬಿಸುವ ಪ್ರಯತ್ನವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸಲ್ಮಾನ್ ಅವರ ಪ್ರತಿಕ್ರಿಯೆಗೆ ಇಂಟರ್ನೆಟ್ ಪ್ರತಿಕ್ರಿಯೆ

ಟೀಸರ್​ನಲ್ಲಿ ಸಲ್ಮಾನ್​ ಖಾನ್​ ಅವರ ಅಭಿವ್ಯಕ್ತಿಯನ್ನು ರಾಜಕೀಯ ವಿಶ್ಲೇಷಕ ತೆಹ್ಸೀನ್ ಪೂನಾವಲ್ಲ ಸೇರಿದಂತೆ ಇನ್ನಿತರರು ಸಮರ್ಥಿಸಿಕೊಂಡಿದ್ದಾರೆ.
ಆದಾಗ್ಯೂ, ತಮ್ಮ ಎಕ್ಸ್​ ಪೋಸ್ಟ್​ನ​ಲ್ಲಿ ಪೂನವಾಲಾ, ಯುದ್ಧಭೂಮಿಯಲ್ಲಿ ಕಿರುಚಾಡುವುದು ಅಥವಾ ಅತಿಯಾದ ಆವೇಶ ತೋರುವುದು ಧೈರ್ಯವಲ್ಲ. ಸಾವಿನ ಮುಖಾ- ಮುಖಿಯಾದಾಗಲೂ ತನ್ನ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳುವುದು ನಿಜವಾದ ಶೌರ್ಯ. ಸಲ್ಮಾನ್ ಅವರ ಮುಖದ ಮೇಲಿನ ಆ ಸಣ್ಣ ಸ್ಮಿತವು "ನಗು" ಅಲ್ಲ, ಬದಲಿಗೆ ಅದು ಎದುರಾಳಿಗೆ ನೀಡುವ 'ಸವಾಲು' ಮತ್ತು ತನ್ನ ಗುರಿಯ ಬಗ್ಗೆ ಇರುವ ಆತ್ಮವಿಶ್ವಾಸವಾಗಿದೆ. ಬಹಿರಂಗವಾಗಿ ಕೋಪ ತೋರಿಸುವುದಕ್ಕಿಂತ, ಶಾಂತವಾಗಿದ್ದುಕೊಂಡು ಅಪಾಯವನ್ನು ಎದುರಿಸುವುದು ಸೈನಿಕನಿಗೆ ಅಗತ್ಯವಿರುವ ಮಾನಸಿಕ ಸ್ಥಿತಿ ಎಂದು ಅವರು ಒತ್ತಿ ಹೇಳಿದ್ದಾರೆ.
ಅಭಿಮಾನಿಗಳು ಕೂಡಾ ತಮ್ಮ ನೆಚ್ಚಿನ ನಟನ  ಬಗ್ಗೆ ಬೆಂಬಲ ಸೂಚಿಸಿದ್ದಾರೆ. ಒಬ್ಬ ಬಳಕೆದಾರ ಹಹಾ ಸಲ್ಮಾನ್ ಸಲ್ಮಾನ್ ಭಾಯ್ ಆಗಿದ್ದಾರೆ! ಶಬ್ದಕ್ಕಿಂತ ಘನತೆ ಹೆಚ್ಚಿದೆ. ಇನ್ನು ಸೈನಿಕನ ಶಕ್ತಿ ಕೋಪದಲ್ಲಿ ಅಲ್ಲ, ಸಂಯಮದಲ್ಲಿ ತೋರಿಸುತ್ತದೆ ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ ಸಲ್ಮಾನ್ ಖಾನ್ ಅವರ ಪ್ರಭಾವ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಈಜಿಪ್ಟ್‌ನಂತಹ ದೇಶಗಳಿಂದಲೂ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿರುವುದು ಅವರ ಅಂತರಾಷ್ಟ್ರೀಯ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಚಿತ್ರದ ಬಗ್ಗೆ

ಬ್ಯಾಟಲ್ ಆಫ್ ಗಾಲ್ವಾನ್ ಚಿತ್ರವನ್ನು ಅಪೂರ್ವ ಲಖಿಯಾ ನಿರ್ದೇಶಿಸಿದ್ದು, ಚಿತ್ರಾಂಗದಾ ಸಿಂಗ್ ಸೇರಿದಂತೆ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಏಪ್ರಿಲ್ 17, 2026 ರಂದು ಥಿಯೇಟ್ರಿಕಲ್ ಬಿಡುಗಡೆಗೆ ಸಿದ್ಧವಾಗಿದೆ.
2020ರ ಗಾಲ್ವಾನ್ ಕಣಿವೆ ಘರ್ಷಣೆಯು ಭಾರತೀಯ ಸೇನೆಯ ಇತಿಹಾಸದಲ್ಲಿ ಅತ್ಯಂತ ಧೈರ್ಯದ ಮತ್ತು ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿದೆ. ಈ ವೇಳೆ ಕರ್ನಲ್ ಬಿಕ್ಕುಮಲ್ಲ ಸಂತೋಷ್ ಬಾಬು ಅವರು ತೋರಿದ ಅಪ್ರತಿಮ ಶೌರ್ಯ ಮತ್ತು ನಾಯಕತ್ವವು ಇಡೀ ದೇಶಕ್ಕೆ ಸ್ಫೂರ್ತಿಯಾಗಿದೆ. ಅವರ ಬಲಿದಾನಕ್ಕಾಗಿ ಅವರಿಗೆ ಮರಣೋತ್ತರವಾಗಿ ಮಹಾ ವೀರ ಚಕ್ರ (MVC) ನೀಡಿ ಗೌರವಿಸಲಾಯಿತು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net