ಕ್ಷಮಿಸಿ ಯಾಮಿ...ಧುರಂಧರ್ ಚಿತ್ರ ನೋಡಿದ ಬಳಿಕ ರವೀನಾ ಟಂಡನ್ ಹೀಗೆ ಹೇಳಿದ್ದೇಕೆ? Raveena Tandon

ರವೀನಾ ಟಂಡನ್ (ಚಿತ್ರ Instagram)
ರವೀನಾ ಟಂಡನ್ (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಧುರಂಧರ್​ ಸಿನಿಮಾ ಸದ್ಯ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲೂ ತನ್ನ ಓಟವನ್ನು ಮುಂದುವರಿಸಿದೆ
  • ಈಸಿನಿಮಾವನ್ನು ಲಕ್ಷಾಂತರ ಅಭಿಮಾನಿಗಳು ಮನೆಯಲ್ಲಿಯೇ ಕೂತು ಚಿತ್ರವನ್ನು ವೀಕ್ಷಿಸಿದ್ದಾರೆ
  • ಆ ಸಾಲಿಗೆ ರವೀನಾ ಟಂಡನ್ ಕೂಡಾ ಸೇರ್ಪಡೆಗೊಂಡಿದ್ದು, ಯಾಮಿ ಗೌತಮ್‌ಗೆ ಕ್ಷಮೆ ಕೇಳಿದ್ದಾರಂತೆ
ಮುಂಬೈ: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಧುರಂಧರ್​ ಸಿನಿಮಾ ಸದ್ಯ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲೂ ತನ್ನ ಓಟವನ್ನು ಮುಂದುವರಿಸಿದ್ದು, ಲಕ್ಷಾಂತರ ಅಭಿಮಾನಿಗಳು ಮನೆಯಲ್ಲಿಯೇ ಕೂತು ಚಿತ್ರವನ್ನು ವೀಕ್ಷಿಸಿದ್ದಾರೆ. ಇದೀಗ ಆ ಸಾಲಿಗೆ ರವೀನಾ ಟಂಡನ್ ಕೂಡಾ ಸೇರ್ಪಡೆಗೊಂಡಿದ್ದು, ಸಿನಿಮಾ ನೋಡಿದ ಬಳಿಕ ಯಾಮಿ ಗೌತಮ್​ ಗೆ ಕ್ಷಮಿಸಿ ಎಂದು ರವೀನಾ ಕೇಳಿದ್ದಾರೆನ್ನುವುದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಯಾಮಿ ಗೌತಮ್‌ಗೆ ರವೀನಾ ಕ್ಷಮೆ ಕೇಳಿದ್ದೇಕೆ?

ಜೂಮ್ ಸ್ಪಾಟ್‌ಲೈಟ್ ಸಂದರ್ಶನವೊಂದರಲ್ಲಿ ಮಾತನಾಡಿದ ರವೀನಾ ಟಂಡನ್, 'ಧುರಂಧರ್' ಚಿತ್ರವನ್ನು ನೋಡಿದ ತಕ್ಷಣ ಯಾಮಿ ಗೌತಮ್‌ಗೆ ಕರೆ ಮಾಡಿ ಕ್ಷಮಿಸಿ ನಾನು ನಿಮ್ಮ ಗಂಡನ ದೊಡ್ಡ ಅಭಿಮಾನಿ. ನೀವು ನನ್ನ ಗಮನವನ್ನು ನಿಮ್ಮ ಪತಿಯೊಂದಿಗೆ ಹಂಚಿಕೊಳ್ಳಲೇಬೇಕು. ಏಕೆಂದರೆ ಅವರು ಸಿನಿಮಾದಲ್ಲಿ ಕಾಣೆಯಾಗಿದ್ದನ್ನು ಮತ್ತೆ ಮರಳಿ ತಂದಿದ್ದಾರೆ ಎಂದು ಹೇಳಿದೆ ಎಂಬುದನ್ನು ಬಹಿರಂಗಪಡಿಸಿದರು.
ಪುಷ್ಪ , ಕೆಜಿಎಫ್ , ಧುರಂಧರ್​​ನಂತಹ ಸಿನಿಮಾಗಳನ್ನು ನೋಡಿದ ನಂತರ ಪ್ರೇಕ್ಷಕರಿಗೆ ಒಂದು ರೀತಿಯ ತೃಪ್ತಿ ಸಿಗುತ್ತಿದೆ. ಇಲ್ಲಿ ನಾಯಕನು ನಿಜವಾದ ನಾಯಕನಂತೆ ಕಾಣುತ್ತಿದ್ದಾನೆ ಎಂದರು.
ಈ ಚಿತ್ರಗಳು ನಮ್ಮ ದೇಶದ ಸಮಸ್ಯೆಗಳನ್ನು ಎತ್ತಿ ತೋರಿಸುವುದರ ಜೊತೆಗೆ ಅವುಗಳನ್ನು ನಿಭಾಯಿಸುವ ಗಟ್ಟಿತನವನ್ನು ಪ್ರದರ್ಶಿಸುತ್ತವೆ. ಒಬ್ಬ ಜನನಾಯಕ ಕಷ್ಟಗಳನ್ನು ಎದುರಿಸಿ ನಾಯಕನಾಗಿ ಹೊರಹೊಮ್ಮುವುದರಿಂದ ಪ್ರೇಕ್ಷಕರಿಗೆ ಇಂತಹ ಸಿನಿಮಾಗಳು ಇಷ್ಟವಾಗುತ್ತವೆ ಎಂದು ತಿಳಿಸಿದರು.

ಧುರಂಧರ ಬಗ್ಗೆ

'ಧುರಂಧರ್' ಸಿನಿಮಾ ಒಂದು ಹೈ-ವೋಲ್ಟೇಜ್ ಆಕ್ಷನ್-ಥ್ರಿಲ್ಲರ್ ಆಗಿದ್ದು, ಇದು ಭಾರತದ ಆಂತರಿಕ ಭದ್ರತೆ, ಗುಪ್ತಚರ ಇಲಾಖೆಯ ಕಾರ್ಯಾಚರಣೆ ಮತ್ತು ದೇಶದ ಸಾರ್ವಭೌಮತ್ವದ ಮೇಲೆ ನಡೆಯುವ ದಾಳಿಗಳನ್ನು ಹೇಗೆ ಸಮರ್ಥವಾಗಿ ಎದುರಿಸಲಾಗುತ್ತದೆ ಎಂಬ ಕಥೆಯನ್ನು ಎತ್ತಿ ತೋರಿಸಿದೆ. ಆದಾಗ್ಯೂ, ನೈಜ ಘಟನೆಗಳಿಂದ ಪ್ರೇರಿತವಾದ ಈ ಚಿತ್ರವು ಪ್ರೇಕ್ಷಕರಲ್ಲಿ ದೇಶಪ್ರೇಮದ ಕಿಚ್ಚು ಹಚ್ಚುವಲ್ಲಿ ಯಶಸ್ವಿಯಾಗಿದೆ.
ಈ ಚಿತ್ರದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್ ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಸೇರಿದಂತೆ ತಾರಾಗಣವಿದೆ. ಈ ಚಿತ್ರವು ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರಗಳಲ್ಲಿ ಒಂದಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ 1,000 ಕೋಟಿ ಗಳಿಸಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net