ವಿಚ್ಛೇದನದ ಬಳಿಕ ಮತ್ತೆ ಹಸೆಮಣೆ ಏರಿದ ರ‍್ಯಾಪರ್: ಪಂಜಾಬಿ ಬೆಡಗಿ ಇಶಾ ರಿಖಿ ಕೈಹಿಡಿದ ಬಾದ್​ಶಾ! Badshah

ಪಂಜಾಬಿ ನಟಿ ಇಶಾ ರಾಖಿಯನ್ನು ಮದುವೆಯಾದ ಬಾದ್​ಶಾ
ಪಂಜಾಬಿ ನಟಿ ಇಶಾ ರಾಖಿಯನ್ನು ಮದುವೆಯಾದ ಬಾದ್​ಶಾ
Published on

ಪ್ರಮುಖ ಮುಖ್ಯಾಂಶಗಳು

  • ವಿಚ್ಛೇದನದ ನಂತರ ಮತ್ತೆ ಹಸೆಮಣೆ ಏರಿದ ರ‍್ಯಾಪರ್
  • ಪಂಜಾಬಿ ನಟಿ ಇಶಾ ರಾಖಿಯನ್ನು ಮದುವೆಯಾದ ಬಾದ್​ಶಾ
  • 2020 ರಲ್ಲಿ ಮೊದಲ ಪತ್ನಿ ಜಾಸ್ಮಿನ್ ಮಸಿಹ್ ರಿಂದ ದೂರವಾಗಿದ್ದ ಸಿಂಗರ್​
ಪಂಜಾಬ್​: ಸದಾ ತನ್ನ ತೂಕಡಿಸುವ ಹಾಡುಗಳ ಮೂಲಕ ಯುವಕರ ಮನಸ್ಸನ್ನು ಗೆದ್ದಿರುವ ರ್ಯಾವರ್​ ಬಾದ್​ಶಾ(Badshah), ಈದೀಗ ದಿಢೀರ್​ ಆಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಸದ್ಯ ತನ್ನ ತಟೀರಿ ಹಾಡಿನ ವಿವಾದಕ್ಕೆ ಸಿಲುಕಿದ್ದ ಬಾದ್​ಶಾ ಈಗ ತನ್ನ ಬಹುಕಾಲದ ಗೆಳತಿ ಹಾಗೂ ಪಂಜಾಬಿ ಚಿತ್ರರಂಗದ ನಟಿ ಇಶಾ ರಿಖಿರನ್ನು ಸೈಲಂಟಾಗಿ ಮದುವೆಯಾಗಿದ್ದಾರೆ.

ಅತ್ತೆ ಮೂಲಕ ಜಗಜ್ಜಾಹಿರಾದ ಮದುವೆ

ಬಾದ್​ಷಾ ಅವರ ಮದುವೆ ಕುರಿತು ವದಂತಿಗಳಾಗಲಿ ಅಥವಾ ಅವರಿಂದ ಯಾವುದೇ ಹೇಳಿಕೆಯಾಗಲಿ ಇಲ್ಲಿವರೆಗೆ ಬಂದಿರಲಿಲ್ಲ. ಹಾಗೆಯೇ ಬಾದ್​ಶಾ, ಇಶಾ ರಿಖಿ ಅವರನ್ನು ಖಾಸಗಿಯಾಗಿಯೇ ವಿವಾಹವಾದ ಕಾರಣ, ಈ ಬಗ್ಗೆ ಯಾರಿಗೂ ಸಹ ಯಾವುದೇ ಮಾಹಿತಿ ಇರಲಿಲ್ಲ. ಆದರೆ ಇಶಾ ರಿಖಿ ಅವರ ತಾಯಿ ಅಂದರೆ ಬಾದ್​ಶಾ ಅವರ ಅತ್ತೆ ಪೂನಂ ರಿಖಿ ತಮ್ಮ ಇನ್​ಸ್ಟಾಗ್ರಾಮ್​​ನಲ್ಲಿ ನವ ಜೋಡಿಗಳ ಫೋಟೊಗಳನ್ನು ಹಂಚಿಕೊಂಡ ನಂತರ ಗಾಯಕ ಮದುವೆ ನಡೆದಿದೆ ಎಂದು ಜನರಿಗೆ ತಿಳಿದಿದೆ.

ವಿಚ್ಛೇದನ ನಂತರ ಮತ್ತೆ ಹಸೆಮಣೆ ಏರಿದ ಗಾಯಕ!

ಹೌದು, ಬಾದ್​ಶಾ ಈಗಾಗಲೇ ವಿವಾಹವಾಗಿ ವಿಚ್ಛೇದನನ್ನು ಸಹ ಪಡೆದಿದ್ದಾರೆ. ಬಾದ್​ಶಾ 2012 ರಲ್ಲಿ ಜಾಸ್ಮಿನ್ ಮಸಿಹ್ ಅವರನ್ನು ಮದುವೆಯಾಗಿ ಜೆಸ್ಸಿಮಿ ಗ್ರೇಸ್ ಎಂಬ ಮಗಳನ್ನು ಸಹ ಈ ದಂಪತಿ ಹೊಂದಿದೆ. ಆದರೆ ಬಾದ್​ಶಾ ತಮ್ಮ ಮೊದಲ ಪತ್ನಿತಿಂದ 2020 ರಲ್ಲಿ ಬೇರ್ಪಟ್ಟ ಬಳಿಕ ಈಗ ಇಶಾ ರಿಖಿ ಅವರನ್ನು ತಮ್ಮ ಪತ್ನಿಯಾಗಿ ಸ್ವೀಕರಿಸಿದ್ದಾರೆ.

ಇಶಾ ಮತ್ತು ಬಾದ್​ಶಾ ಪರಿಚಯ-ಸಂಬಂಧ

ವರದಿಗಳ ಪ್ರಕಾರ, ಬಾದ್​ಶಾ ಮತ್ತು ಇಶಾ ರಿಖಿ ಸುಮಾರು ನಾಲ್ಕು ವರ್ಷಗಳಿಂದ ಡೇಂಟಿಂಗ್​ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇವರು 2022 ರಲ್ಲಿ ಸ್ನೇಹಿತರೊಬ್ಬರ ಪಾರ್ಟಿಯಲ್ಲಿ ಬೇಟಿಯಾಗಿದ್ದು, ಬೇಟಿ ಪರಿಚಯವಾಗಿ, ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗಿ ಈಗ ಇವರಿಬ್ಬರು ದಂಪತಿಗಳಾಗಿ ಬದಲಾಗಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net