ರಣವೀರ್ ಸಿಂಗ್‌ಗೆ ಬಿಷ್ಣೋಯ್ ಗ್ಯಾಂಗ್ ದಮ್ಕಿ: 10 ಕೋಟಿ ರೂ. ಸುಲಿಗೆಗೆ ಹೈಟೆಕ್ ಸ್ಕೆಚ್! Ranveer Singh

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಸಲ್ಮಾನ್ ಖಾನ್ ಅವರನ್ನು ದೀರ್ಘಕಾಲದಿಂದ ಟಾರ್ಗೆಟ್ ಮಾಡುತ್ತಾ ಬಂದಿರುವ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್
  • ಆರೋಪಿ ಹ್ಯಾರಿ ಬಾಕ್ಸರ್, ಸಿಂಗ್​ನಿಂದ ಬರೋಬ್ಬರಿ 10 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನ
  • ರಣವೀರ್​ ಸಿಂಗ್​ ಅವರ ಮ್ಯಾನೇಜರ್​ ವಾಟ್ಸಾಪ್ ಖಾತೆಗೆ ಕರೆ ಮತ್ತು ಧ್ವನಿ ಸಂದೇಶಗಳು ಬಂದಿವೆ
  • ರಣವೀರ್ ಸಿಂಗ್​ ಈ ಕೂಡಲೇ 10 ಕೋಟಿ ರೂಪಾಯಿಗಳನ್ನು ನೀಡಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ
ಮುಂಬೈ: ಬಾಲಿವುಡ್‌ನ 'ಸುಲ್ತಾನ್' ಸಲ್ಮಾನ್ ಖಾನ್ ಅವರನ್ನು ದೀರ್ಘಕಾಲದಿಂದ ಟಾರ್ಗೆಟ್ ಮಾಡುತ್ತಾ ಬಂದಿರುವ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್, ಈಗ ತನ್ನ ವಕ್ರ ದೃಷ್ಟಿಯನ್ನು ನಟ ರಣವೀರ್​ ಸಿಂಗ್​ (Ranveer Singh) ಮೇಲೆ ಹರಿಸಿದೆ. ಗ್ಯಾಂಗ್‌ನ ಪ್ರಮುಖ ಆರೋಪಿ ಎನ್ನಲಾದ ಹ್ಯಾರಿ ಬಾಕ್ಸರ್, ಸಿಂಗ್​ನಿಂದ ಬರೋಬ್ಬರಿ 10 ಕೋಟಿ ರೂಪಾಯಿ ಸುಲಿಗೆ ಮಾಡಲು ಯತ್ನಿಸಿರುವುದು ಸಧ್ಯ ಚಿತ್ರರಂಗದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಮಾಹಿತಿಗಳ ಪ್ರಕಾರ, ಘಟನೆಯು ಇಂದು ಬೆಳಿಗ್ಗೆ ನಡೆದಿದ್ದು, ರಣವೀರ್​ ಸಿಂಗ್​ ಅವರ ಮ್ಯಾನೇಜರ್​ ವಾಟ್ಸಾಪ್ ಖಾತೆಗೆ ಅಮೆರಿಕದ ಫೋನ್ ಸಂಖ್ಯೆಯಿಂದ ಕರೆ ಮತ್ತು ಧ್ವನಿ ಸಂದೇಶಗಳು ಬಂದಿವೆ. ಈ ಸಂದೇಶದಲ್ಲಿ ತನ್ನನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ 'ಹ್ಯಾರಿ ಬಾಕ್ಸರ್' ಎಂದು ಪರಿಚಯಿಸಿಕೊಂಡಿದ್ದು, ರಣವೀರ್ ಸಿಂಗ್​ ಈ ಕೂಡಲೇ 10 ಕೋಟಿ ರೂಪಾಯಿಗಳನ್ನು ನೀಡಬೇಕು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ.
ಪ್ರಾಥಮಿಕ ತನಿಖೆಯಲ್ಲಿ, ಸಂದೇಶ ಬಂದ ಧ್ವನಿಯು ಹ್ಯಾರಿ ಬಾಕ್ಸರ್​ ಧ್ವನಿಗೆ ಹೊಂದಿಕೆಯಾಗುತ್ತಿದೆ ಎಂದು ಕಂಡುಬಂದಿದೆ. ಹಾಗಾಗಿ ಪ್ರಕರಣವನ್ನು ಇನ್ನಷ್ಟು ಬಲ ಪಡಿಸುವ ಸಲುವಾಗಿ ಅಧಿಕಾರಿಗಳು ಹೆಚ್ಚಿನ ಸಾಕ್ಷಿಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ.
ರೋಹಿತ್ ಶೆಟ್ಟಿ ಮನೆಯಲ್ಲಿ ಗುಂಡಿನ ದಾಳಿ ನಡೆದ ನಂತರ ಈ ಧ್ವನಿ ಸಂದೇಶ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಯ ನಂತರ ರಣವೀರ್​ ಸಿಂಗ್​ ಅವರ ಮ್ಯಾನೇಜರ್​ ಪೋನ್ ಮೂಲಕ ಬೆದರಿಕೆ ಸಂದೇಶ ತಲುಪಿದೆ.
ಬೆದರಿಕೆ ಬಂದ ನಂತರ, ನಟನ ಸುತ್ತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ಮ್ಯಾನೇಜರ್​ ಹೇಳಿಕೆಯನ್ನು ದಾಖಲಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಸದ್ಯಕ್ಕೆ ಸಂದೇಶದ ಕುರಿತು ಯಾವುದೇ ಪ್ರಕರಣಗಳು ದಾಖಲಾಗಿಲ್ಲ. 
ಏತನ್ಮಧ್ಯೆ, ಕೆಲಸದ ವಿಷಯಕ್ಕೆ ಬಂದರೆ, ನಟ ರಣವೀರ್ ಅವರ ಧುರಂಧರ್ ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ರೂ. ಗಳಿಸಿತು. ಈ ಚಿತ್ರವು ಜಾಗತಿಕವಾಗಿ 1300 ಕೋಟಿಗಳಿಗೂ ಹೆಚ್ಚು ಲೂಟಿ ಮಾಡಿತು.
ಅದರ ಮುಂದುವರಿದ ಭಾಗ ಧುರಂಧರ್: ದಿ ರಿವೆಂಜ್ ಮಾರ್ಚ್ 19 ರಂದು ಹಿಂದಿ, ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಆರ್ ಮಾಧವನ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net