ಟಾಲಿವುಡ್ ನಟ ಪ್ರಭಾಸ್ ನಾಯಕರಾಗಿ ನಟಿಸಿರುವ 'ಸ್ಪಿರಿಟ್' ಚಿತ್ರವನ್ನು ಸಂದೀಪ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಆರಂಭದಲ್ಲಿ ದೀಪಿಕಾ ಪಡುಕೋಣೆ ಸಿನಿಮಾದ ನಾಯಕಿ ಎಂದು ಹೇಳಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರನ್ನು ಕೈಬಿಟ್ಟು, ಯುವನಟಿ ತ್ರಿಪ್ತಿ ದಿಮ್ರಿ ಅವರಿಗೆ ನಾಯಕಿ ಸ್ಥಾನಕ್ಕೆ ಕರೆತರಲಾಯಿತು. ದೀಪಿಕಾ ಹಾಕಿದ್ದ 8 ಗಂಟೆಗಳ ಶಿಫ್ಟ್, ಕೆಲವು ಡಿಮಾಂಡ್ ಮತ್ತು ಷರತ್ತುಗಳು ನಿರ್ದೇಶಕರ ಬೇಸರಕ್ಕೆ ಕಾರಣವಾಗಿ, ಅವರನ್ನು ಈ ಬಿಗ್ ಪ್ರಾಜೆಕ್ಟ್ನಿಂದ ಕೈಬಿಡುವಂತಾಯಿತು ಎಂಬುದು ವರದಿ,(ಏಜೆನ್ಸೀಸ್).