ರಾಮಾಯಣ ಹವಾ: ಹನುಮಾನ್ ಜಯಂತಿಯಂದೇ ಶ್ರೀರಾಮನಾಗಿ ರಣಬೀರ್ ಕಪೂರ್ ದರ್ಶನ, ಟೀಸರ್ ಔಟ್! Ramayana teaser

RamayanaTeaser (ಚಿತ್ರ X)
RamayanaTeaser (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ನಿತೇಶ್​ ತಿವಾರಿ ನಿರ್ದೆಶನದ ರಾಮಾಯಣ ಚಿತ್ರವು ಕಳೆದ ವರ್ಷ ಜುಲೈ 3 ರಂದು ಮೊದಲ ಪರಿಚಯಾತ್ಮಕ ವಿಡಿಯೋ ಬಿಡುಗಡೆ
  • ಇಂದು ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣಬೀರ್ ಕಪೂರ್
  • ಏಪ್ರಿಲ್ 2 ರಂದು ರಣಬೀರ್ ಕಪೂರ್ ಅವರ ರಾಮನ ಪಾತ್ರದ ಮೊದಲ ನೋಟವನ್ನು ಪರಿಚಯಿಸಿದೆ
  • ಅಮೇರಿಕಾದ ಲಾಸ್ ಏಂಜಲೀಸ್ ಮತ್ತು ನ್ಯೂಯಾರ್ಕ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮ
Ramayana Teaser: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ನಿತೇಶ್​ ತಿವಾರಿ ನಿರ್ದೆಶನದ ರಾಮಾಯಣ ಚಿತ್ರವು ಕಳೆದ ವರ್ಷ ಜುಲೈ 3 ರಂದು ಮೊದಲ ಪರಿಚಯಾತ್ಮಕ ವಿಡಿಯೋ ಬಿಡುಗಡೆಯಾದಾಗಿನಿಂದ ಈ ದೃಶ್ಯಕಾವ್ಯವನ್ನು ಬೆಳ್ಳಿತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 
ಇಂದು ಹನುಮಾನ್ ಜಯಂತಿಯ ಶುಭ ಸಂದರ್ಭದಲ್ಲಿ ಚಿತ್ರತಂಡವು ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣಬೀರ್ ಕಪೂರ್ ಅವರ ಮೊದಲ ಅಧಿಕೃತ ನೋಟವನ್ನು ಅನಾವರಣಗೊಳಿಸಿದ್ದು, ಸಧ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ.

ರಾಮಾಯಣದ ಟೀಸರ್​ ಔಟ್​?

ಏಪ್ರಿಲ್ 2 ರಂದು ರಣಬೀರ್ ಕಪೂರ್ ಅವರ ರಾಮನ ಪಾತ್ರದ ಮೊದಲ ನೋಟವನ್ನು ಚಿತ್ರತಂಡ ಪರಿಚಯಿಸಿದೆ. ಆದಾಗ್ಯೂ, ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಹಿಂದೆ ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗುತ್ತದೆ ಎಂದು ಘೋಷಿಸಿದ್ದರು. ಅದರಂತೆ ಟೀಸರ್ ಇಂದು ಬೆಳಿಗ್ಗೆ 9.30 ರಿಂದ 10 ರ ನಡುವೆ ಬಿಡುಗಡೆಯಾಗಿದ್ದು, ಇದನ್ನು ಸಾಮಾಜಿಕ ಮಾಧ್ಯಮ ವೇದಿಕೆ ಮತ್ತು ಯೂಟ್ಯೂಬ್​ನಲ್ಲಿ ವೀಕ್ಷಿಸಬಹುದು.

ರಣಬೀರ್ ಕಪೂರ್ ರಾಮನ ಬಗ್ಗೆ ಹೇಳಿದ್ದೇನು?

ಅಮೇರಿಕಾದ ಲಾಸ್ ಏಂಜಲೀಸ್ ಮತ್ತು ನ್ಯೂಯಾರ್ಕ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮವೊಂದರಲ್ಲಿ, ಆಯ್ದ ಕೆಲವೇ ಜನರಿಗೆ ರಣಬೀರ್ ಕಪೂರ್ ಅವರ 'ಶ್ರೀರಾಮ'ನ ಅವತಾರದ ಮೊದಲ ನೋಟವನ್ನು ತೋರಿಸಲಾಗಿದೆ. ಈ ಸಂದರ್ಭದಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರೊಂದಿಗೆ ನಡೆದ ಸಂವಾದದಲ್ಲಿ ರಣಬೀರ್ ಕಪೂರ್ ಶ್ರೀರಾಮನ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದು, "ಭಗವಾನ್ ರಾಮನು ಕೇವಲ ಒಂದು ಪಾತ್ರವಲ್ಲ; ಅವರು ಶತಮಾನಗಳಿಂದಲೂ ವಿಶ್ವದಾದ್ಯಂತ ಇರುವ ಶತಕೋಟಿ ಜನರ ಆತ್ಮಸಾಕ್ಷಿಯ ಪಾಲಕರಾಗಿದ್ದಾರೆ. ನಾವು ಈ ಭೂಮಿಯ ಮೇಲೆ ಇಲ್ಲದಿದ್ದರೂ ಸಹ, ಅವರ ಆದರ್ಶಗಳು ಮತ್ತು ಅಸ್ತಿತ್ವವು ಶಾಶ್ವತವಾಗಿ ಉಳಿಯುತ್ತದೆ ಎಂದರು. 
ಎಂತಹ ಕಠಿಣ ಪರಿಸ್ಥಿತಿಯಲ್ಲೂ ಮಾನವ ಚೇತನವು ಹೇಗೆ ವಿಜಯ ಸಾಧಿಸಬಹುದು ಎಂಬುದನ್ನು ರಾಮನ ಜೀವನ ನಮಗೆ ಕಲಿಸುತ್ತದೆ. ಅವರು ಕರುಣೆ, ಧೈರ್ಯ, ಸದಾಚಾರ ಮತ್ತು ಕ್ಷಮಾಗುಣದ ಸಂಕೇತವಾಗಿ ನಿಲ್ಲುತ್ತಾರೆ ಎಂದು ಹೇಳಿದ್ದಾರೆ.

ರಾಮಾಯಣ: ಪಾತ್ರವರ್ಗ, ತಂಡ ಮತ್ತು ಬಿಡುಗಡೆ ದಿನಾಂಕ

ಈ ಚಿತ್ರದಲ್ಲಿ ರಾಮನ ಪಾತ್ರದಲ್ಲಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ , ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ , ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ನಟಿಸಿದ್ದಾರೆ. ಈ ರಾಮಾಯಣವು ಪ್ರಪಂಚದಾದ್ಯಂತ ದೊಡ್ಡ ಮಟ್ಟದ ಆಕರ್ಷಣೆಯೊಂದಿಗೆ ತೆರೆ ಮೇಲೆ ಬರಲು ಸಜ್ಜಾಗಿದೆ. 
ನಿತೇಶ್ ತಿವಾರಿ ನಿರ್ದೇಶಿಸಿದ ರಾಮಾಯಣವು 2 ಭಾಗಗಳ ಮಹಾಕಾವ್ಯವಾಗಿದ್ದು, ವಿಶ್ವಾದಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ. ಆದಾಗ್ಯೂ, ಭಾಗ 1 2026 ರ ದೀಪಾವಳಿಯಲ್ಲಿ ಮತ್ತು ಭಾಗ 2 2027 ರ ದೀಪಾವಳಿಯಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹಂಚಿಕೊಂಡಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net