ಅವಳಿ ಮಕ್ಕಳಿಗೆ ಜನ್ಮ ನೀಡಿದ ನಟ ರಾಮ್ ಚರಣ್ ದಂಪತಿ! Ram Charan

ಚಿತ್ರ Instagram
ಚಿತ್ರ Instagram
Published on
Ram Charan: ದಕ್ಷಿಣ ಭಾರತದ ಸೂಪರ್‌ಸ್ಟಾರ್ ರಾಮ್ ಚರಣ್, ಅವರ ಪತ್ನಿ ಉಪಾಸನಾ ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ. ನಟ ಮೆಗಸ್ಟಾರ್​ ಚಿರಂಜೀವಿ ಮಗ ಮತ್ತು ಮಗಳ ಆಗಮನದ ಸಂತೋಷದ ಸುದ್ಧಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ತಾಯಿ ಮತ್ತು ಮಕ್ಕಳು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಬರೆದಿದ್ದಾರೆ.
ರಾಮ್ ಚರಣ್ ಮತ್ತು ಉಪಾಸನ ಈಗ ಮೂರು ಮಕ್ಕಳಿಗೆ ಪೋಷಕರಾಗಿರುವುದು ಗಮನಾರ್ಹವಾಗಿದೆ. ಈ ದಂಪತಿ ಪೋಷಕರಾಗುತ್ತಿರುವುದು ಎರಡನೇ ಬಾರಿಯಾಗಿದ್ದು, ಅವರ ಮೊದಲ ಮಗಳು ಕ್ಲಿನ್ ಕಾರಾ ಕೊನಿಡೇಲಾ ಜೂನ್ 20, 2023 ರಂದು ಜನಿಸಿದರು.

ಚಿರಂಜೀವಿ ಅವರ ಪೋಸ್ಟ್​ನಲ್ಲೇನಿದೆ?

ಖುದ್ದಾಗಿ ಎಕ್ಸ್ ಮೂಲಕ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿರುವ ಚಿರಂಜೀವಿ, ರಾಮ್ ಚರಣ್ ಮತ್ತು ಉಪಾಸನಾ ಅವರಿಗೆ, ಒಬ್ಬ ಮಗ ಮತ್ತು ಒಬ್ಬ ಮಗಳು ಜನಿಸಿದ್ದಾರೆ ಎಂದು ಹೇಳಲು ಬಹಳ ಸಂತೋಷವಾಗುತ್ತಿದೆ. ಈ ವೇಳೆ ಶಿಶುಗಳು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಪುಟ್ಟ ಮಕ್ಕಳನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿರುವುದು ಅಜ್ಜ-ಅಜ್ಜಿಯಾದ ನಮಗೆ ದೇವರ ಆಶೀರ್ವಾದ ಮತ್ತು ಅಪಾರ ಸಂತೋಷದ ಕ್ಷಣ. ಅವರ ಪ್ರಾರ್ಥನೆ, ಪ್ರೀತಿ, ಆಶೀರ್ವಾದ ಮತ್ತು ಶುಭ ಹಾರೈಕೆಗಳಿಗಾಗಿ ನಾವು ಎಲ್ಲರಿಗೂ ಹೃತ್ಪೂರ್ವಕವಾಗಿ ಧನ್ಯವಾದಗಳು ತಿಳಿಸುತ್ತೇನೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಏತನ್ಮಧ್ಯೆ, ರಾಮ್ ಚರಣ್ ಅವರ ಸಹೋದರಿ ಸುಶ್ಮಿತಾ ಕೊನಿಡೇಲಾ ಟ್ವೀಟ್ ಮಾಡಿದ್ದು, '2026 ನಮ್ಮ ಇಡೀ ಕುಟುಂಬಕ್ಕೆ ನಿಜವಾಗಿಯೂ ಶುಭ ಆರಂಭವಾಗಿದೆ. ಮತ್ತೊಮ್ಮೆ 'ಚಿಕ್ಕಮ್ಮ' ಆಗುವುದು, ಡಬಲ್​ ಸಂತೋಷ ನನ್ನ ಪ್ರೀತಿಯ ಚರಣ್ ಮತ್ತು ಅಪ್ಸಿ, ಅಭಿನಂದನೆಗಳು ಎಂದು ಬರೆದಿದ್ದಾರೆ.

ಉಪಾಸನಾ ತನ್ನ ಗರ್ಭಧಾರಣೆಯನ್ನು ಯಾವಾಗ ಘೋಷಿಸಿದರು?

ರಾಮ್ ಚರಣ್ ಮತ್ತು ಉಪಾಸನಾ ಅಕ್ಟೋಬರ್ 2025 ರಲ್ಲಿ ತಮ್ಮ ಎರಡನೇ ಗರ್ಭಧಾರಣೆಯನ್ನು ಘೋಷಿಸಿದರು. ಕುಟುಂಬ ಸದಸ್ಯರೊಂದಿಗೆ ಸಿಹಿ ವೀಡಿಯೊವನ್ನು ಹಂಚಿಕೊಂಡ ಇವರು, ಈ ದೀಪಾವಳಿ ದುಪ್ಪಟ್ಟು ಸಂತೋಷ, ದುಪ್ಪಟ್ಟು ಪ್ರೀತಿ ಮತ್ತು ದುಪ್ಪಟ್ಟು ಆಶೀರ್ವಾದಗಳಿಂದ ತುಂಬಿದೆ ಎಂದು X ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net