ಜಾಮೀನು ಪಡೆದ ರಾಜ್​ಪಾಲ್​ ಯಾದವ್ ಭರ್ಜರಿ ಡಾನ್ಸ್!ಸಲ್ಮಾನ್ ಖಾನ್ ಹಾಡಿಗೆ ಸ್ಟೆಪ್ ಹಾಕಿದ ಹಾಸ್ಯನಟ; ವಿಡಿಯೋ ವೈರಲ್ | Rajpal Yadav

ಸೊಸೆ ಮದುವೆಯಲ್ಲಿ ಕುಣಿಯುತ್ತಿರುವ ರಾಜ್​ಪಾಲ್​ ಯಾದವ್​​
ಸೊಸೆ ಮದುವೆಯಲ್ಲಿ ಕುಣಿಯುತ್ತಿರುವ ರಾಜ್​ಪಾಲ್​ ಯಾದವ್​​
Published on

ಪ್ರಮುಖ ಮುಖ್ಯಾಂಶಗಳು

  • ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ರಾಜ್​ಪಾಲ್​ ಯಾದವ್​
  • ಸೋಮವಾರ ಜಾಮೀನಿನ ಮೇಲೆ ಆಚೆ ಬಂದಿರುವ ನಟ
  • ಸೊಸೆ ಮದುವೆಯಲ್ಲಿ ಕುಣಿಯುತ್ತಿರುವ ಹಾಸ್ಯನಟ
ಬಾಲಿವುಡ್​: ಆರ್ಥಿಕ ವಂಚನೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಖ್ಯಾತ ಹಾಸ್ಯನಟ ರಾಜ್​ಪಾಲ್​ ಯಾದವ್​​ (Rajpal Yadav) ಗೆ ಜಾಮೀನು ದೊರೆತ ನಂತರ ತನ್ನ ತಂಗಿ ಮಗಳ ಮದುವೆಯಲ್ಲಿ ಕುಣಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.
ಸೋಮವಾರ (ಫೆ.16) ದೆಹಲಿ ಹೈಕೋರ್ಟ್​ನಿಂದ ಜಾಮೀನು ಪಡೆದ ರಾಜ್​ಪಾಲ್​ ಯಾದವ್​, ಶಹಜಹಾನ್ಪುರದಲ್ಲಿ ನಡೆಯಲಿರುವ ತಂಗಿ ಮಗಳ ಮದುವೆಗೆ ಆಗಮಿಸಿದ್ದಾರೆ.
ವೈರಲ್​ ಆಗುತ್ತಿರುವ ವಿಡಿಯೋನಲ್ಲಿ ರಾಜ್​ಪಾಲ್​, ಸಲ್ಮಾನ್​ ಖಾನ್​ ನಟನೆಯ ಹೆಲೋ ಬ್ರದರ್​ ಸಿನಿಮಾದ ತೇರಿ ಚುನರಿಯಾ ಹಾಡಿಗೆ ಹೆಜ್ಜೆ ಹಾಕುತ್ತಿರುವುದನ್ನು ನೋಡಬಹುದಾಗಿದೆ. ಇಂದು ರಾಜ್​ಪಾಲ್​ ಅವರ ಸಹೋದರ ಸೊಸೆಯ ಮೆಹೆಂದಿ ಕಾರ್ಯಕ್ರಮವಾಗಿದ್ದು, ಈ ಸಂದರ್ಭದಲ್ಲಿ ರಾಜ್​ಪಾಲ್ ಬೀಜ್​ ಬಣ್ಣದ ಕುರ್ತಾ ಮತ್ತು ಲುಂಗಿಯನ್ನು ಧರಿಸಿ ಹಾಡಿಗೆ ತಕ್ಕಂತೆ ಸ್ಟೆಪ್​ ಹಾಕಿದ್ದಾರೆ.

ಪ್ರಕರಣದ ಹಿನ್ನಲೆ

2010 ರಲ್ಲಿ ರಾಜ್​ಪಾಲ್​ ಯಾದವ್​ ಅತಾ ಪತಾ ಲಾಪತಾ ಎಂಬ ಸಿನಿಮಾವನ್ನು ನಿರ್ಮಾಣ ಮತ್ತು ನಿರ್ದೇಶಿಸಲು, ಮುರಳಿ ಪ್ರಾಜೆಕ್ಟ್​ ಎಂಬ ಸಂಸ್ಥೆಯಿಂದ 5 ಕೋಟಿ ಹಣವನ್ನು ಸಾಲದ ರೂಪದಲ್ಲಿ ಪಡೆದಿದ್ದರು.
ಆದರೆ ಬಿಡುಗಡೆಯಾದ ಈ ಸಿನಿಮಾ ನೆಲಕಚ್ಚಿದ ಪರಿಣಾಮ, ಹಣವನ್ನು ಹಿಂದಿರುಗಿಸಲು ಸಾಧ್ಯವಾಗಲಿಲ್ಲ. ಸಾಕಷ್ಟು ಸಮಯವಕಾಶ ನೀಡಿದ ಬಳಿಕವು ರಾಜ್​ಪಾಲ್​ ಹಣವನ್ನು ಮರಳಿ ನೀಡದಿದ್ದಾಗ, ಮುರಳಿ ಪ್ರಾಜೆಕ್ಟ್​ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿತು. ನ್ಯಾಯಾದಲ್ಲಿ ಸಹ ರಾಜ್​ಪಾಲ್​ ಹಣವನ್ನು ಖಂಡಿತವಾಗಿ ಹಿಂದಿರುಗಿಸುತ್ತೇನೆ ಎಂದು ಹೇಳಿದ ಮೇಲೂ, ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಫಲರಾದರು.
ಕೊನೆಗೆ ಪ್ರಕರಣ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದಾಗ ರಾಜ್​ಪಾಲ್​, ನನ್ನ ಬಳಿ ಹಣವಿಲ್ಲ, ಇದ್ದರೆ ಖಂಡಿತವಾಗಿ ಇವರ ಹಣವನ್ನು ಹಿಂದಿರುಗಿಸುತ್ತೇನೆ ಎಂಬ ಹೇಳಿಕೆಯನ್ನು ನೀಡಿದಾಗ, ನ್ಯಾಯಾಲಯ ನೀವು ಹಣವನ್ನು ಮರು ಪಾವತಿ ಮಾಡುವವರೆಗೆ ಜೈಲಿನಲ್ಲಿ ಇರಿ ಎಂದು ಹೇಳಿ, ರಾಜ್​ಪಾಲ್​ನನ್ನು ತಿಹಾರ್​ ಜೈಲಿಗೆ ಶರಣಾಗುವಂತೆ ಆದೇಶಿಸಿತು.

ಹಾಸ್ಯನಟನ ಬೆಂಬಲಕ್ಕೆ ನಿಂತ ಬಾಲಿವುಡ್

ರಾಜ್​ಪಾಲ್​ನನ್ನು ತಿಹಾರ್ ಜೈಲಿಗೆ ಕಳುಹಿಸಿದ ನಂತರ, ಹಲವಾರು ನಟರು ಯಾದವ್‌ಗೆ ಆರ್ಥಿಕ ನೆರವು ನೀಡಲು ನಿರ್ಧರಿಸಿದರು. ಮತ್ತು ಈ ಕಠಿಣ ಸಮಯದಲ್ಲಿ ಅವರಿಗೆ ಸಹಾಯ ಮಾಡುವಂತೆ ಉದ್ಯಮದ ಸಹ ಸದಸ್ಯರಿಗೆ ಸಾರ್ವಜನಿಕವಾಗಿ ಮನವಿ ಮಾಡಿದರು. ಸೋನು ಸೂದ್, ಅಜಯ್ ದೇವಗನ್ ಮತ್ತು ಸಲ್ಮಾನ್ ಖಾನ್‌ನಿಂದ ಹಿಡಿದು ಗುರ್ಮೀತ್ ಚೌಧರಿಯವರೆಗೆ ಅನೇಕರು ಅವರಿಗೆ ಬೆಂಬಲ ನೀಡಿದರು. ಈ ಮಧ್ಯೆ, ಅನೇಕ ಗಾಯಕರು ಮತ್ತು ಚಲನಚಿತ್ರ ನಿರ್ಮಾಪಕರು ಅವರಿಗೆ ಮುಂಗಡ ಹಣ ನೀಡಿ ತಮ್ಮ ಮುಂಬರುವ ಸಿನಿಮಾಗಳಲ್ಲಿ ಅವಕಾಶವನ್ನು ಸಹ ನೀಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net