ವಯಸ್ಕ ಚಿತ್ರಗಳ ಬಗ್ಗೆ ಕಮೆಂಟ್ ಮಾಡಿದ ವ್ಯಕ್ತಿಗೆ ನೀರಿಳಿಸಿದ ರಾಜ್​ ಕುಂದ್ರಾ! Raj Kundra

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮುಂಬೈ: ನಟಿ ಶಿಲ್ಪಾ ಶೆಟ್ಟಿಯವರ ಪತಿ, ಉದ್ಯಮಿ ರಾಜ್ ಕುಂದ್ರಾ (Raj Kundra) ಅವರು ತಮ್ಮ ಇತ್ತೀಚಿನ ಎಕ್ಸ್ ಪೋಸ್ಟ್‌ನಲ್ಲಿ 'ವಯಸ್ಕ ಚಲನಚಿತ್ರಗಳ' ಬಗ್ಗೆ ಟ್ರೋಲ್​​ ಮಾಡಿದ ಬಳಕೆದಾರನಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ದಂಪತಿಗಳ ವಿರುದ್ಧ ದಾಖಲಾಗಿರುವ 60 ಕೋಟಿ ರೂ. ವಂಚನೆ ಪ್ರಕರಣದ ಮಧ್ಯೆ, ರಾಜ್ ಗುರುವಾರ ತಮ್ಮ ಅಧೀಕೃತ ಎಕ್ಸ್‌ ಖಾತೆಯಲ್ಲಿ ಒಂದು ದೀರ್ಘ ಟಿಪ್ಪಣಿ ಬರೆದು, ನಾನು ಬಗ್ಗಲಿಲ್ಲ, ಹಾಗೇ ಲಂಚ ನೀಡಲಿಲ್ಲ. ಮತ್ತು ಆಗ ಮುಖವಾಡಗಳು ಕಳಚಿಬಿದ್ದಿವೆ ಎಂದು ಬರೆದಿದ್ದಾರೆ.
ಕೆಲವರು ನನ್ನನ್ನು ಸೋಲಿಸಬಹುದೆಂದು ಭಾವಿಸಿ ತಮ್ಮ ಸ್ಥಾನಮಾನಗಳನ್ನು ದುರುಪಯೋಗಪಡಿಸಿಕೊಂಡಿದ್ದರು. ಆದರೆ, ವಾಹೆಗುರು ದೇವರ ಶಕ್ತಿಯು ಪ್ರತಿಯೊಂದು ಲೌಕಿಕ ಶಕ್ತಿಗಿಂತ ಮೇಲಿದೆ ಎಂಬುದನ್ನು ಅವರು ಮರೆತುಬಿಟ್ಟಿದ್ದಾರೆ. ನಾನು ಸತ್ಯದಲ್ಲಿ ಬೇರೂರಿದ್ದೇನೆ. ಈಗ ನಿಮ್ಮನ್ನು ನೀವು ಕೇಳಿಕೊಳ್ಳಿ ನೀವು ಎಲ್ಲಿದ್ದೀರಿ? ಎಂದು ಬರೆದು ಪೋಸ್ಟ್​ ಮಾಡಿದ್ದರು.
ಸ್ವಲ್ಪ ಸಮಯದ ನಂತರ, ಒಬ್ಬ ಬಳಕೆದಾರರು ಅವರ ಪೋಸ್ಟ್‌ಗೆ ಸಹೋದರ, ದಯವಿಟ್ಟು ಹೋಗಿ ಹೊಸ ವಯಸ್ಕರ ಚಲನಚಿತ್ರಗಳು, ಸರಣಿಗಳನ್ನು ಮಾಡಿ ಎಂದು ಕಾಮೆಂಟ್​ ಮಾಡಿದ್ದರು. ಇದು ವಯಸ್ಕರ ವಿಷಯ ನಿರ್ಮಾಣಕ್ಕೆ ಸಂಬಂಧಿಸಿದ ಕುಂದ್ರಾ ಅವರ ಹಿಂದಿನ ವಿವಾದಗಳನ್ನು ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ.
ಕುಂದ್ರಾ ಆ ಹೇಳಿಕೆಯನ್ನು ನಿರ್ಲಕ್ಷಿಸಲಿಲ್ಲ. ಬದಲಾಗಿ ತಕ್ಷಣ ಪ್ರತಿಕ್ರಿಯಿಸಿ, ರೋಲ್ ಬೇಕೇ? ನಿಮ್ಮ ಮಾತುಗಳು ನಿಮ್ಮ ಚಿತ್ರಗಳಂತೆಯೇ ಖಾಲಿ ಮತ್ತು ಅರ್ಥರಹಿತ ಎಂದು ಹೇಳಿದ್ದಾರೆ.
ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ವಯಸ್ಕ ವಿಷಯವನ್ನು ನಿರ್ಮಿಸಿ ವಿತರಿಸಿದ ಆರೋಪದ ಹಿನ್ನಲೆ ರಾಜ್ ಕುಂದ್ರಾ ಅವರನ್ನು 2021 ರಲ್ಲಿ ಬಂಧಿಸಲಾಯಿತು. ನಂತರ 2 ತಿಂಗಳುಗಳ ಕಾಲ ಜೈಲಿನಲ್ಲಿ ಶಿಕ್ಷೆಯನ್ನು ಅನುಭವಿಸಿದ್ದರು. ಇದಾದ ಬಳಿಕ ಡಿಸೆಂಬರ್ 2022 ರಲ್ಲಿ, ಜಾರಿ ನಿರ್ದೇಶನಾಲಯ (ED) ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಹೆಸರಿಸಿದ ನಂತರ ಸುಪ್ರೀಂ ಕೋರ್ಟ್ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತು.
ಪ್ರಸ್ತುತ, ರಾಜ್ ಕುಂದ್ರಾ ಮತ್ತು ಅವರ ಪತ್ನಿ ನಟಿ ಶಿಲ್ಪಾ ಶೆಟ್ಟಿ ಮತ್ತೊಂದು ಕಾನೂನು ಪ್ರಕರಣಕ್ಕೆ ಸಿಲುಕಿದ್ದಾರೆ. ಲೋಟಸ್ ಕ್ಯಾಪಿಟಲ್ ಫೈನಾನ್ಷಿಯಲ್ ಸರ್ವೀಸಸ್‌ನ ನಿರ್ದೇಶಕ ಉದ್ಯಮಿ ದೀಪಕ್ ಕೊಠಾರಿ ಅವರು ಸಲ್ಲಿಸಿದ 60 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿಲುಕಿದ್ದು, ದೂರಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ ದಂಪತಿಗಳ ವಿರುದ್ಧ ತನಿಖೆ ನಡೆಸುತ್ತಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net