ಧುರಂಧರ್ ಸಿನಿಮಾದ ನಿರ್ಮಾಪಕ ರಾಹುಲ್​ ಗಾಂಧಿ! ಇದರ ಹಿಂದಿರುವ ಅಸಲಿ ಸತ್ಯವೇನು? Rahul Gandhi

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಧುರಂಧರ್​ ಸಿನಿಮಾ
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಧುರಂಧರ್​ ಸಿನಿಮಾ
Published on

ಪ್ರಮುಖ ಮುಖ್ಯಾಂಶಗಳು

  • ಓಟಿಟಿಯಲ್ಲಿ ಬಿಡುಗಡೆ ಆಗಿರುವ ರಣವೀರ್​ ಸಿಂಗ್​ ಅಭಿನಯದ ಧುರಂಧರ್​
  • ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕ ರಾಹುಲ್​ ಗಾಂಧಿ ಹೆಸರು
  • ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯೇ ಈ ಸಿನಿಮಾದ ನಿರ್ಮಾಪಕರೆ?
ಬಾಲಿವುಡ್​: ರಣವೀರ್ ಸಿಂಗ್​ ಅಭಿನಯದ ಮತ್ತು ಆದಿತ್ಯ ಧರ್​ ನಿರ್ದೇಶನದ ಧುರಂಧರ್​ ಸಿನಿಮಾ ಬಿಡುಗಡೆಯಾಗಿ ಎರಡು ತಿಂಗಳು ಕಳೆದರೂ ಈ ಚಿತ್ರದ ಹಾವಳಿ ಕಡಿಮೆಯಾಗುತ್ತಿಲ್ಲ. ಕೇವಲ ಚಿತ್ರ ಮಂದಿರವಷ್ಟೇ ಅಲ್ಲದೇ ಈಗ ಓಟಿಟಿಯಲ್ಲಿ ಸಹ ಈ ಸಿನಿಮಾ ಅಬ್ಬರಿಸುತ್ತಿದೆ.
ಓಟಿಟಿಯಲ್ಲಿ ಬಿಡುಗಡೆಯಾದ ನಂತರ ಈ ಸಿನಿಮಾ ನಿರ್ಮಾಣಕ್ಕೆ ಸಹಾಯ ಮಾಡಿದವರ ಹೆಸರಿನಲ್ಲಿ 'ರಾಹುಲ್​ ಗಾಂಧಿ' (Rahul Gandhi) ಎಂಬ ಹೆಸರನ್ನು ಗಮನಿಸಿರುವ ವೀಕ್ಷಕರು ಧುರಂಧರ್​ ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕೆಲಸ ಮಾಡಿದ್ದಾರೆ ಎಂದು ಭಾವಿಸಿದ್ದಾರೆ ಮತ್ತು ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಈಗ ಚರ್ಚೆಗೆ ಗ್ರಾಸವಾಗಿದೆ.
ಎಕ್ಸ್​ (ಟ್ವಿಟರ್​) ಪೋಸ್ಟ್​ವೊಂದನ್ನು ಹಂಚಿಕೊಂಡಿರುವ ವ್ಯಕ್ತಿ, ರಾಹುಲ್ ಗಾಂಧಿ ಈ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕರು ಎಂದು ತಿಳಿಯಲು ಮತ್ತೊಮ್ಮೆ ನೆಟ್‌ಫ್ಲಿಕ್ಸ್‌ನಲ್ಲಿ ಧುರಂಧರ್ ವೀಕ್ಷಿಸಿದೆ. ರಾಹುಲ್ ಗಾಂಧಿ ಅತಿದೊಡ್ಡ ರಾಷ್ಟ್ರೀಯವಾದಿ ನಾಯಕ ಎಂದು ನನಗೆ ಯಾವಾಗಲೂ ತಿಳಿದಿತ್ತು, ಅವರು ಮೌನವಾಗಿ ಕೆಲಸ ಮಾಡುವ ಜಾಯಮಾನಕ್ಕೆ ಸೇರಿದವರು ಎಂದು ಬರೆದುಕೊಂಡಿದ್ದಾರೆ.​

ನೈಜ ಸಂಗತಿ ಏನು?

ಈ ವಿಷಯದ ಕುರಿತಂತೆ ಸತ್ಯ ಶೋಧನೆ ನಡೆಸಿದಾಗ ತಿಳಿದ ಮಾಹಿತಿ ಏನೆಂದರೆ, ಧುರಂಧರ್​ ಸಿನಿಮಾದ ಕಾರ್ಯನಿರ್ವಾಹಕ ನಿರ್ಮಾಪಕನ ಹೆಸರು ರಾಹುಲ್​ ಗಾಂಧಿಯೇ? ಆದರೆ ಈ ರಾಹುಲ್​ ಗಾಂಧಿಗೂ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.
ಧುರಂಧರ್​ ಸಿನಿಮಾದ ರಾಹುಲ್​ ಗಾಂಧಿ ಬಾಲಿವುಡ್​ನಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಧುರಂಧರ್​ಗೂ ಮುನ್ನ ಅಕ್ಷಯ್​ ಕುಮಾರ್​ ನಟನೆಯ ರುಸ್ತುಂ, ಮನೋಜ್​ ಬಾಜಪೇಯಿ ಮುಖ್ಯ ಭೂಮಿಕೆಯಲ್ಲಿರುವ ವೆಬ್​ ಸರಣಿ ದಿ ಪ್ಯಾಮಿಲಿ ಮ್ಯಾನ್​ ಮತ್ತು ದುಲ್ಖರ್​​ ಸಲ್ಮಾನ್​ ನಟನೆಯ ಲಕ್ಕಿ ಭಾಸ್ಕರ್​ ಸಿನಿಮಾದಲ್ಲಿ ಸಹ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
ನಿಜಕ್ಕೂ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯೇ ಧುರಂಧರ್​ ಸಿನಿಮಾದ ನಿರ್ಮಾಪಕರೇ? ಎಂದ ಒಬ್ಬ ವ್ಯಕ್ತಿ ಗ್ರೋಕ್​ ಎಐ ಬಳಿ ಪ್ರಶ್ನೆಯನ್ನು ಸಹ ಕೇಳಿದ್ದಾನೆ. ಆಗ ಗ್ರೋಕ್​ ಸಹ ಭಾರತೀಯ ರಾಜಕೀಯದಲ್ಲಿ ಸಕ್ರೀಯವಾಗಿರುವ ರಾಹುಲ್​ ಗಾಂಧಿಗೂ, ಧುರಂಧರ್​ ಸಿನಿಮಾದ ರಾಹುಲ್​ ಗಾಂಧಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.
ಮಾರ್ಚ್​ 19 ರಂದು ಎರಡನೇ ಭಾಗ ಬಿಡುಗಡೆ
ಧುರಂಧರ್​ ಸಿನಿಮಾದ ಮೊದಲ ಭಾಗದ ಯಶಸ್ಸಿನ ನಂತರ ಎರಡನೇ ಭಾಗವು ಮಾರ್ಚ್​ ತಿಂಗಳ 19 ನೇ ತಾರೀಖಿನಂದು ತೆರೆ ಕಾಣಲಿದೆ. ಈ ಸಿನಿಮಾವು 2025 ರಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತ್ಯಂತ ಹೆಚ್ಚನ ಹಣ (ಹೆಚ್ಚು ಕಡಿಮೆ 1000 ಕೋಟಿ) ವನ್ನು ಗಳಿಸಿದ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪ್ರಾತ್ರವಾಗಿತ್ತು.
ಈ ಸಿನಿಮಾವು ನೈಜ ಘಟನೆಗಳ ಆಧಾರದಲ್ಲಿ ನಿರ್ಮಿಸಲಾಗಿದ್ದು, ಪಾಕಿಸ್ತಾನದಲ್ಲಿರುವ ಭಾರತೀಯ ಗೂಢಾಚಾರನ ಸುತ್ತ ಕಥೆಯನ್ನು ಹೆಣೆಯಲಾಗಿದೆ. ರಣವೀರ್​ ಸಿಂಗ್​, ಅಕ್ಷಯ್​ ಖನ್ನಾ, ಸಂಜಯ್​ ದತ್ತ್, ಅರ್ಜುನ್​ ರಾಂಪಾಲ್​, ಆರ್​. ಮಾಧವನ್​ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net