ಜೇ ಶೆಟ್ಟಿ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಪ್ರಿಯಾಂಕಾ, "ಮಗಳು 27 ವಾರಗಳಲ್ಲೇ ಭೂಮಿಗೆ ಬರಲಿದ್ದಾಳೆ ಎಂದು ತಿಳಿದಾಗ ನಾನು ಸಂಪೂರ್ಣವಾಗಿ ಜರ್ಝರಿತಳಾದೆ. ಸುಮಾರು 9 ಗಂಟೆಗಳ ಕಾಲ ಮನೆಯ ಅಗ್ಗಿಷ್ಟಿಕೆಯ ಮುಂದೆ ಸುಮ್ಮನೆ ಕುಳಿತಿದ್ದೆ, ನನ್ನ ಮೆದುಳು ಕೆಲಸ ಮಾಡುವುದನ್ನೇ ನಿಲ್ಲಿಸಿತ್ತು. ನಾನು ಯಾವಾಗಲೂ ಪರಿಹಾರಗಳ ಬಗ್ಗೆ ಯೋಚಿಸುವವಳು, ಆದರೆ ಆ ಕ್ಷಣದಲ್ಲಿ ನಾನು ಶೂನ್ಯವಾಗಿದ್ದೆ. ನಿಕ್ ಮನೆಗೆ ಬಂದು ನನ್ನನ್ನು ಕರೆದುಕೊಂಡು ಆಸ್ಪತ್ರೆಗೆ ಧಾವಿಸಿದರು," ಎಂದು ಆ ಕ್ಷಣವನ್ನು ಸ್ಮರಿಸಿದ್ದಾರೆ.