ಪ್ರಿಯಾಂಕಾ ಚೋಪ್ರಾ ಸ್ಟಾರ್‌ಡಮ್‌ಗೆ ಬಲಿಯಾದರೇ ಸಹೋದರ ಸಿದ್ಧಾರ್ಥ್? ತಾಯಿ ನೀಡಿದ ಅಚ್ಚರಿಯ ಹೇಳಿಕೆ! Priyanka Chopra

ಚಿತ್ರ Instagram
ಚಿತ್ರ Instagram
Published on
Priyanka Chopra: ನಟಿ ಪ್ರಿಯಾಂಕ ಚೋಪ್ರಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇವರು ತಮ್ಮ ನಟನೆಯೊಂದಿಗೆ ಸಾವಿರಾರು ಜನರನ್ನು ಆಕರ್ಷಿಸಿದಂತಹ ನಟಿ. ಅಂದಹಾಗೇ, ಅವರ ತಾಯಿ ಮಧು ಚೋಪ್ರಾ ಅವರು ಇತ್ತೀಚಿಗೆ ಸಂದರ್ಶನವೊಂದರಲ್ಲಿ ತಮ್ಮ ಕುಟುಂಬದ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ಈ ವೇಳೆ ಮಗಳ ಯಶಸ್ಸಿನ ಪಯಣದಲ್ಲಿ ಮಗ ಸಿದ್ಧಾರ್ಥ್ ಚೋಪ್ರಾ ಅನುಭವಿಸಿದ ಏಕಾಂಗಿತನ ಮತ್ತು ಅವರು ಎದುರಿಸಿದ ಸವಾಲುಗಳ ಬಗ್ಗೆ ಬಹಿರಂಗಪಡಿಸಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

'ಮೇಲಾಧಾರ ಹಾನಿ' ಎಂದಿದ್ದೇಕೆ?

'ಸಮ್‌ಥಿಂಗ್ ಬಿಗ್ಗರ್' ಕಾರ್ಯಕ್ರಮದಲ್ಲಿ ಮಾತನಾಡಿದ ಮಧು, ಮಗಳ ಈ ಏಳಿಗೆಗೆ ಸಿದ್ಧಾರ್ಥ್ ಚೋಪ್ರಾ ಯಾವ ರೀತಿಯಲ್ಲಿ ಬಲಿಪಶು (Collateral Damage) ಆದರು ಎಂಬುದನ್ನು ವಿವರಿಸಿದ್ದಾರೆ. ನಟಿ ಪ್ರಿಯಾಂಕಾ ವಿಶ್ವಮಟ್ಟದ ತಾರೆಯಾಗಿ ಬೆಳೆಯುವ ಪ್ರಕ್ರಿಯೆಯಲ್ಲಿ ಕುಟುಂಬದ ಸಂಪೂರ್ಣ ಗಮನ ಅವರ ಮೇಲೆಯೇ ಇತ್ತು. ಮಗಳ ವೃತ್ತಿಜೀವನವನ್ನು ರೂಪಿಸಲು ಮಧು ಚೋಪ್ರಾ ಮತ್ತು ಅವರ ಪತಿ ಅಶೋಕ್ ಚೋಪ್ರಾ ಸದಾ ಪ್ರಿಯಾಂಕಾ ಜೊತೆ ಇರಬೇಕಾಯಿತು. ಈ ಸಮಯದಲ್ಲಿ ಮಗ ಸಿದ್ಧಾರ್ಥ್ ಅವರ ಬಾಲ್ಯವು ಕಡೆಗಣಿಸಲ್ಪಟ್ಟಿತು ಎಂದು ಮಧು ವಿಷಾದಿಸಿದ್ದಾರೆ.
ಸಿದ್ಧಾರ್ಥ್ ಪ್ರತಿದಿನ ಪಡುತ್ತಿರುವ ಪರಿಶ್ರಮವನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಆದರೆ ದೇವರು ಅವನಿಗೆ ಆಶೀರ್ವದಿಸಿದ್ದಾನೆ ಎಂಬ ನಂಬಿಕೆ ನನಗಿದೆ. ಜೀವನದಲ್ಲಿ ಎಂತಹ ಸವಾಲುಗಳಿದ್ದರೂ, ಸಿಕ್ಕಿರುವ ಆಶೀರ್ವಾದಗಳನ್ನು ಗುರುತಿಸುವುದು ಮುಖ್ಯ ಎಂದು ಅಭಿಪ್ರಾಯ ಪಟ್ಟರು.
ಪ್ರಿಯಾಂಕಾ ಮತ್ತು ಅವಳ ಸಹೋದರ ಹೇಗೆ ಭಿನ್ನರು ಎಂಬುದರ ಕುರಿತು ಮಾತನಾಡಿದ ಮಧು, ನನ್ನ ಮಗಳು ನನ್ನಿಂದ ಕೆಲಸದ ನೀತಿಯನ್ನು ಅಳವಡಿಸಿಕೊಂಡಿದ್ದಾಳೆ. ಪ್ರತಿದಿನ ನಾನು ಬೆಳಿಗ್ಗೆ ಬೇಗ ಎದ್ದು ದಿನವನ್ನು ಪ್ರಾರಂಭಿಸುತ್ತೇನೆ. ಆದರೆ, ಸಿದ್ದಾರ್ಥ್ ಅಷ್ಟು ಬೇಗನೆ ಏಳುವವನಲ್ಲ. ಅಗತ್ಯವಿದ್ದಾಗ 4 ಗಂಟೆಗೂ ಏಳುತ್ತಾನೆ ಎಂದು ಹೇಳಿದ್ದಾರೆ.

ಹಿನ್ನಲೆ

ಮಧು ಚೋಪ್ರಾ ಅವರು ಭಾರತೀಯ ಸೇನೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದವರು. ಅವರು ಇಎನ್‌ಟಿ ತಜ್ಞರಾಗಿದ್ದು, ಮಿಲಿಟರಿಯಲ್ಲಿ ಮೇಜರ್ ಪದವಿಯನ್ನು ಹೊಂದಿದ್ದಾರೆ. ಮೂಲತಃ ಇವರು ಜಾರ್ಖಂಡ್‌ನ ಜಮ್‌ಶೆಡ್‌ಪುರದವರಾಗಿದ್ದು, ಭಾರತೀಯ ಸೇನೆಯಲ್ಲಿ ವೈದ್ಯರಾಗಿದ್ದ ಡಾ. ಅಶೋಕ್ ಚೋಪ್ರಾ ಅವರನ್ನು ವಿವಾಹವಾದರು. ಇವರಿಗೆ ಪ್ರಿಯಾಂಕಾ ಚೋಪ್ರಾ ಮತ್ತು ಸಿದ್ಧಾರ್ಥ್ ಚೋಪ್ರಾ ಎಂಬ ಇಬ್ಬರು ಮಕ್ಕಳಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net