ಗಂಡನಿಗೆ ಹಜ್ಮೋಲಾ ತಿನ್ನಿಸಿದ ಪ್ರಿಯಾಂಕಾ ಚೋಪ್ರಾ.. ತಿಂದು ನಿಕ್​ ಹೇಳಿದ್ದೇನು? Priyanka Chopra

 Priyanka Chopra
Priyanka Chopra
Published on

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ಪತಿಗೆ ಹಾಜ್ಮೋಲಾ ತಿನ್ನಿಸಿದ ಪ್ರಿಯಾಂಕಾ ಚೋಪ್ರಾ
  • ಹಾಜ್ಮೋಲಾ ತಿಂದು ನಿಕ್​ ಹೇಳಿದ್ದೇನು?
  • ಜನಪ್ರಿಯ ಭಾರತೀಯ ಡೈಜೆಸ್ಟಿವ್ ಟ್ಯಾಬ್ಲೆಟ್ ಎಂದೇ ಖ್ಯಾತಿ ಗಳಿಸಿರುವ ಹಜ್ಮೋಲಾ
ಬಾಲಿವುಡ್​: ಬಾಲಿವುಡ್​ ಮತ್ತು ಹಾಲಿವುಡ್​ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra)ಇತ್ತೀಚೆಗೆ ತಮ್ಮ ಪತಿ, ಗಾಯಕ ನಿಕ್ ಜೋನಾಸ್ ಮತ್ತು ಜನಪ್ರಿಯ ಭಾರತೀಯ ಡೈಜೆಸ್ಟಿವ್ ಟ್ಯಾಬ್ಲೆಟ್ ಎಂದೇ ಖ್ಯಾತಿ ಗಳಿಸಿರುವ ಹಜ್ಮೋಲಾ ಜತೆಗಿನ ಅನಿರೀಕ್ಷಿತ ಘಟನೆಯೊಂದನ್ನು ಹಂಚಿಕೊಂಡಿದ್ದು ಫುಲ್​ ವೈರಲ್​ ಆಗುತ್ತಿದೆ.
ಪ್ರಿಯಾಂಕಾ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಸೀಸನ್ 4 ರ ಪ್ರಥಮ ಅತಿಥಿಯಾಗಿ ಕಾಣಿಸಿಕೊಂಡಿದ್ದು, ಅಲ್ಲಿ ಅವರು ನಿರೂಪಕ ಕಪಿಲ್ ಶರ್ಮಾ ಅವರೊಂದಿಗೆ ಉತ್ಸಾಹಭರಿತ ಮತ್ತು ಪ್ರಾಮಾಣಿಕವಾಗಿ ಮಾತುಕತೆ ನಡೆಸಿದರು. ಕಪಿಲ್ ಜತೆ ಮಾತನಾಡುತ್ತಾ ಪ್ರಿಯಾಂಕಾ, ಅಮೆರಿಕಾದವನಿಗೆ ಹಜ್ಮೋಲಾವನ್ನು ನೀಡುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ(ಆಪ್ ಸೋಚೋ ಕಿಸಿ ಅಮೇರಿಕನ್ ಕೋ ಆಪ್ ಹಜ್ಮೋಲಾ ಖಿಲಾವೋ) ಎಂದು ನಕ್ಕರು.
ನೀವು ನಿಕ್​ಗೆ ಹಜ್ಮೋಲಾವನ್ನು ತಿನ್ನಿಸಿದ್ದಿರಾ?(ಹಜ್ಮೋಲಾ ಖಿಲಾಯಿ ಹೈ ಆಪ್ನೆ?) ಎಂದು ನಿರುಪಕ ಕಪಿಲ್ ಶರ್ಮಾ ಕೇಳಿದಾಗ ಪ್ರಿಯಾಂಕಾ ಚೋಪ್ರಾ ನಡೆದ ಘಟನೆಯನ್ನು ವಿವರಿಸಿದರು.
ಚೋಪ್ರಾ ಅವರು ಮನೆಯಲ್ಲಿರುವ ಒಂದು ಡ್ರಾಯರ್‌ನಲ್ಲಿ ಹಜ್ಮೋಲಾ, ಮಾವಿನ ಹಪ್ಪಳ ಮೊದಲಾದವನ್ನು ಇಡುತ್ತಾರಂತೆ. ಒಮ್ಮೆ ಈ ಡ್ರಾಯರ್‌ನಲ್ಲಿ ಏನು ಇಟ್ಟಿದ್ದೀಯಾ ? ಎಂದು ಕೇಳಿದಾಗ ನೀನು ಈ ಡ್ರಾಯರ್‌ನಿಂದ ದೂರವೇ ಇರು ಎಂದು ಎಚ್ಚರಿಸಿದ್ದರಂತೆ. ಆದರೆ ಅಲ್ಲಿರುವ ವಸ್ತುಗಳ ಕುರಿತು ಅತೀವ ಆಸಕ್ತಿಯನ್ನು ಜೋನಾಸ್‌ ತೋರಿಸಿದಾಗ ಪ್ರಿಯಾಂಕಾ ನಿಕ್​ಗೆ ಹಜ್ಮೋಲಾದ ಒಂದು ಗುಳಿಗೆಯನ್ನು ನೀಡಿದರಂತೆ. ಅದನ್ನು ಬಾಯಿಗೆ ಇಟ್ಟುಕೊಂಡ ಜೋನಾಸ್​ ತು..ತು.. ಎಂದು ಉಗಿದು ಈ ಗುಳಿಗೆ ಏಕೆ ಹೂಸಿನ ವಾಸನೆಯಂತಿದೆ ಎಂದು ಹೇಳಿದ ಸನ್ನಿವೇಶವನ್ನು ಪ್ರಿಯಾಂಕಾ ಕಪಿಲ್​ ಶರ್ಮಾರ ಮುಂದೆ ಹಂಚಿಕೊಂಡರು,(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net