'ನನ್ನ ಮಕ್ಕಳ ಫೋಟೋ ಅನುಮತಿಯಿಲ್ಲದೆ ತೆಗೆದ್ರೆ ಸಹಿಸೋಕೆ ಆಗೋದಿಲ್ಲ': ಪಾಪರಾಜಿಗಳ ವರ್ತನೆ ಬಗ್ಗೆ ಪ್ರೀತಿ ಜಿಂಟಾ ಹೇಳಿದ್ದಿಷ್ಟು..Preity Zinta
Preity Zinta
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವೈಯಕ್ತಿಕ ವಿಚಾರಗಳು ಗೌಪ್ಯವಾಗಿಡೋದು ನನ್ನ ಸ್ವಭಾವ ಎಂದ ಪ್ರೀತಿ ಜಿಂಟಾ
ಪಾಪಾರಾಜಿಗಳ ಅತಿಯಾದ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟಿ ಪ್ರೀತಿ ಜಿಂಟಾ
ನನ್ನ ಮನೆಯ ಹೊರಗೆ, ಜಿಮ್ ಬಳಿ ಪಾಪರಾಜಿಗಳು ಕಾಣಿಸಿಕೊಳ್ಳೋದು ಇಷ್ಟವಿಲ್ಲ ಎಂದು ಬೇಸರ
Preity Zinta: 'ಪಾಪರಾಜಿಗಳು (paparazzi) ನನ್ನನ್ನು ಹಿಂಬಾಲಿಸುವುದು ಮತ್ತು ಎಲ್ಲಿಂದಲೋ ದಿಢೀರನೆ ನನ್ನ ಮುಂದೆ ಬಂದು ನಿಂತು ನನ್ನ ಪಟ ತೆಗೆಯುವುದು ಅಥವಾ ವಿಡಿಯೋ ಮಾಡುವುದು. ನನ್ನ ಮಕ್ಕಳ ಫೋಟೊ ಅನುಮತಿ ಇಲ್ಲದೆ ತೆಗೆಯುವುದು ನನಗೆ ಇಷ್ಟವಿಲ್ಲ. ಕೆಲವೊಮ್ಮೆ ಇದು ಭಯ ಹುಟ್ಟಿಸುತ್ತದೆ', ಹೀಗೆಂದು ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ನಟಿ ಪ್ರೀತಿ ಜಿಂಟಾ.
ಹೌದು, ಇನ್ಸ್ಟಾಗ್ರಾಮ್ನಲ್ಲಿ ಆಸ್ಕ್ ಮಿ ಎನಿತಿಂಗ್ ಸೆಷನ್ ಇಟ್ಟುಕೊಂಡಿದ್ದರು. ಅದರಲ್ಲಿ ಸೌರಭ್ ಸಿಂಗ್ ಎಂಬುವವರು ಏಕಾಂತತೆ, ಮನಸ್ಸಿಗೆ ಶಾಂತಿ, ಗೌಪ್ಯತೆ ಆಗಾಗಾ ಬೇಕೆನಿಸುವ ಶಾಂತಿ ಯಾವುದನ್ನು ತ್ಯಾಗ ಮಾಡಬೇಕೆನಿಸುತ್ತದೆ ಎಂದು ಕೇಳಿದ ಪ್ರಶ್ನೆಗೆ, ಅವರು ಉತ್ತರಿಸಿದ್ದು ಹೀಗೆ..
ಎಕ್ಸ್ ಪೋಸ್ಟ್ನಲ್ಲಿ ಏನಿದೆ?
'ಇಲ್ಲಿ ಯಾವುದು ತ್ಯಾಗವಲ್ಲ. ವಿಚಾರಗಳು ಹೇಗಿಬವೆಯೋ ಹಾಗೆ ಸ್ವೀಕರಿಸೋದನ್ನು ಕಲಿಯಬೇಕು. ನಾನು ನನ್ನ ವೈಯಕ್ತಿಕ ವಿಚಾರಗಳನ್ನು ಗೌಪ್ಯವಾಗಿ ಇಡಲು ಬಯಸುತ್ತೇನೆ. ನನ್ನ ಅಭಿಮಾನಿಗಳೊಂದಿಗೆ ಸಂವಹನ ನಡೆಸುವುದು ಮತ್ತು ಅವರಿಗೆ ಫೋಟೋಗಳನ್ನು ನೀಡುವ ಮೂಲಕ ಯಾರನ್ನೂ ನಿರಾಸೆಗೊಳಿಸದಿರುವುದು ನನಗಿಷ್ಟ, ಆದರೆ ಅದೇ ಸಮಯದಲ್ಲಿ ಜನರು ಮತ್ತು ಮಾಧ್ಯಮಗಳೊಂದಿಗೆ ಕೆಲವು ಬೌಂಡರಿ ಹಾಕಿಕೊಳ್ಳೋಕೆ ಬಯಸುತ್ತೇನೆ' ಎಂದು ಪೋಸ್ಟ್ನಲ್ಲಿ ಉಲ್ಲೇಖಿಸಿದ್ದಾರೆ.
'ಪಾಪರಾಜಿಗಳು ಸಿನಿಮಾ ಅಥವಾ ಯಾವುದೇ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲಿ. ಅದಕ್ಕೆ ನನ್ನ ಯಾವ ಅಭ್ಯಂತರವಿಲ್ಲ. ಅದು ಅವರ ಕೆಲಸ. ಆದರೆ ಜಿಮ್ ಹೊರಗೆ ಕಾಣಿಸಿಕೊಳ್ಳುವುದು ಅಥವಾ ನನ್ನ ಫ್ಲ್ಯಾಟ್ ಬಳಿ ಕಾಣಿಸಿಕೊಳ್ಳೊದು ಇದೆಲ್ಲ ಸ್ವಲ್ಪ ಅತಿಯಾಯಿತು ಎನಿಸುತ್ತದೆ' ಎಂದು ಅವರು ಬೇಸತ ವ್ಯಕ್ತಪಡಿಸಿದ್ದಾರೆ.
'ನಾನೂ ಕೂಡ ಮನುಷ್ಯಳೇ, ನನಗೂ ಕೂಡ ಸಾಮಾನ್ಯ ಜೀವನ ಮತ್ತು ವಿಶ್ರಾಂತಿಯ ಅಗತ್ಯವಿದೆ. ಹೀಗೆ ಹೇಳಿದ ಮಾತ್ರಕ್ಕೆ ನನಗೆ ಸಿಕ್ಕಿರುವ ಎಲ್ಲಾ ಅವಕಾಶಗಳ ಬಗ್ಗೆ ಮತ್ತು ಜನರು ನನ್ನ ಮೇಲೆ ತೋರಿಸುವ ಪ್ರೀತಿಯ ಬಗ್ಗೆ ನನಗೆ ಅಪಾರ ಕೃತಜ್ಞತೆಯಿದೆ. ನಾನು ದೂರು ನೀಡುತ್ತಿಲ್ಲ, ಕೇವಲ ನನ್ನ ಮನಸ್ಸಿನ ಭಾವನೆಗಳನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳುತ್ತಿದ್ದೇನೆ ಅಷ್ಟೆ' ಎಂದು ಬರೆದುಕೊಂಡಿದ್ದಾರೆ, (ಏಜೆನ್ಸೀಸ್).