ಧುರಂಧರ್ 2 ರಿಲೀಸ್ ಬೆನ್ನಲ್ಲೇ ಪಾಕ್ ಗಾಯಕನ ಸ್ಫೋಟಕ ಹೇಳಿಕೆ: ನನಗೆ ಅವರು ಲಕ್ಷಾಂತರ ರೂಪಾಯಿ ನೀಡಿದ್ದಾರೆ ಎಂದ ಹಸನ್ ಜಹಾಂಗೀರ್! Dhurandhar 2

ತನ್ನ ಹಾಡು ಹವಾ-ಹವಾವನ್ನು ಬಳಸಿಕೊಂಡಿದ್ದಕ್ಕೆ ನನಗೆ ಹಣ ನೀಡಿದ್ದಾರೆ ಎಂದ ಪಾಕ್​ ಗಾಯಕ  ಹಸನ್ ಜಹಾಂಗೀರ್
ತನ್ನ ಹಾಡು ಹವಾ-ಹವಾವನ್ನು ಬಳಸಿಕೊಂಡಿದ್ದಕ್ಕೆ ನನಗೆ ಹಣ ನೀಡಿದ್ದಾರೆ ಎಂದ ಪಾಕ್​ ಗಾಯಕ ಹಸನ್ ಜಹಾಂಗೀರ್
Published on

ಪ್ರಮುಖ ಮುಖ್ಯಾಂಶಗಳು

  • ಮಾರ್ಚ್​ ರಂದು ಬಿಡುಗಡೆಯಾದ ಧುರಂಧರ್​ 2 ಸಿನಿಮಾ
  • ತನ್ನ ಹಾಡು ಹವಾ-ಹವಾವನ್ನು ಬಳಸಿಕೊಂಡಿದ್ದಕ್ಕೆ ನನಗೆ ಹಣ ನೀಡಿದ್ದಾರೆ ಎಂದ ಪಾಕ್​ ಗಾಯಕ ಹಸನ್ ಜಹಾಂಗೀರ್
  • ಈ ಹಾಡನ್ನು ನಾನು 1986 ರಲ್ಲಿ ಹಾಡಿದ್ದೆ ಎಂದ ಗಾಯಕ
  • ಸಿನಿಮಾದಲ್ಲಿ ಸಂಜಯ್​ ದತ್ ಎಂಟ್ರಿಗೆ ಬಳಕೆಯಾಗಿದ್ದ ಹಾಡು
ಪಾಕಿಸ್ತಾನ: ಮಾರ್ಚ್​ 19 ಭಾರತೀಯ ಸಿನಿ ಪ್ರೇಕ್ಷಕರು ತುದಿಗಾಲಿನಿಂದ ಕಾಯುತ್ತಿದ್ದ ದಿನ. ಕಾರಣ ಧುರಂಧರ್​ 2 (Dhurandhar 2) ಸಿನಿಮಾ ಇಂದು(ಮಾರ್ಚ್​ 19) ಸಿನಿಮಾ ಮಂದಿರಗಳಲ್ಲಿ ತೆರೆಕಾಣಲಿದೆ. ಇದರ ನಡುವೆ ಪಾಕಿಸ್ತಾನದ ಗಾಯಕ ನೀಡಿರುವ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

ನನಗೆ ಸುಮಾರು 46 ಲಕ್ಷ ಹಣ ನೀಡಿದ್ದಾರೆ!

ಪಾಕಿಸ್ತಾನದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಹಾಜರಾಗಿದ್ದ ಗಾಯಕ, ಹಸನ್ ಜಹಾಂಗೀರ್ ನಾನು ಹಾಡಿದ ಹಾಡ (ಹವಾ-ಹವಾ) ನ್ನು ಅವರ ಸಿನಿಮಾದಲ್ಲಿ ಬಳಸಿಕೊಳ್ಳಲು ಧುರಂಧರ್​ ತಂಡ ಸುಮಾರು ಐವತ್ತು ಸಾವಿರ ಡಾಲರ್ಸ್​ (ಸುಮಾರು 46 ಲಕ್ಷ ರೂಪಾಯಿ) ಗಳನ್ನು ನೀಡಿ, ಹಾಡಿನ ಹಕ್ಕುಸ್ವಾಮ್ಯವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ನಾನು ಈ ಹವಾ- ಹವಾ ಹಾಡನ್ನು ಸುಮಾರು ನಲವತ್ತು ವರ್ಷಗಳ ಹಿಂದೆ, ಅಂದರೆ 1986 ರಲ್ಲಿ ಹಾಡಿ 1897 ರಲ್ಲಿ ಬಿಡುಗಡೆ ಮಾಡಿದ್ದೆ. ಮೊದಲೆಲ್ಲಾ ಈ ಕಾಪಿರೈಟ್ಸ್​ ಎಲ್ಲಾ ಇರಲಿಲ್ಲ. ಆದರೆ ಈಗ ಈ ಹಾಡನ್ನು ಬಳಸುವ ಮೊದಲು ನನ್ನ ಅನುಮತಿ ಕೇಳುತ್ತಾರೆ ಹಾಗೆಯೇ ಹಣವನ್ನು ನೀಡುತ್ತಾರೆ ಎಂದು ಪಾಕ್​ ಗಾಯಕ ಹಸನ್ ಜಹಾಂಗೀರ್ ಹೇಳಿದ್ದಾರೆ.

ಸಂಜಯ್​ ದತ್ ಎಂಟ್ರಿಗೆ ಹವಾ-ಹವಾ ಬಳಕೆ

ಹಸನ್ ಜಹಾಂಗೀರ್ ಅವರು ಹಾಡಿರುವ ಈ ಹವಾ-ಹವಾ ಹಾಡನ್ನು ಧುರಂಧರ್​ ಸಿನಿಮಾದ ಮೊದಲ ಭಾಗದಲ್ಲಿ, ಎಸ್ಪಿ ಚೌಧರಿ ಅಸ್ಲಂ ಪಾತ್ರದಲ್ಲಿ ನಟಿಸಿರುವ ಸಂಜಯ್ ದತ್ ಅವರು ಕಾರಿನಲ್ಲಿ ಎಂಟ್ರಿ ಕೊಡುವಾಗ ಬಳಸಲಾಗಿದೆ. ಈ ಹಾಡನ್ನು ಆನಂದಿಸುತ್ತಾ ಸಂಜಯ್​ ದತ್ ಇಬ್ಬರು ಡ್ರಗ್​ ಪೆಡ್ಲರ್​ಗಳನ್ನು ಗುಂಡಿಕ್ಕಿ ಕೊಲ್ಲುವುದನ್ನು ಸಿನಿಮಾದಲ್ಲಿ ನೋಡಬಹುದಾಗಿದೆ.

ಹವಾ-ಹವಾ ಹಾಡಿನ ಇತಿಹಾಸ

ಹವಾ ಹವಾ ಏ ಹವಾ ಖುಷಬೂ ಲೂಟಾದೆ ಈ ಹಾಡು ಮೂಲತಃ ಪಾಕಿಸ್ತಾನಿ ಗಾಯಕ ಹಸನ್ ಜಹಾಂಗೀರ್ ಅವರ ಕಂಠಸಿರಿಯಲ್ಲಿ ಮೂಡಿಬಂದ ಅದ್ಭುತ ಗೀತೆಯಾಗಿದೆ. 1980ರ ದಶಕದ ಉತ್ತರಾರ್ಧದಲ್ಲಿ ಬಿಡುಗಡೆಯಾದ ಈ ಹಾಡು ಇಡೀ ಏಷ್ಯಾ ಖಂಡದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಆದರೆ ಈ ಹಾಡಿನ ಮೂಲ 1970 ರ ಸುಮಾರಿಗೆ ಇರಾನಿನಲ್ಲಿ ಬಿಡುಗಡೆಯಾದ 'ಹವಾರ್ ಹವಾರ್' ಎಂಬ ಪರ್ಶಿಯನ್​ ಜಾನಪದ ಗೀತೆಯಿಂದ ಪ್ರೇರಿತವಾದ ಹಾಡು ಎನ್ನಲಾಗುತ್ತದೆ.
ಮುಂದೆ 2017ರಲ್ಲಿ ಬಿಡುಗಡೆಯಾದ ಅರ್ಜುನ್ ಕಪೂರ್ ನಟನೆಯ ಮುಬಾರಕನ್ (Mubarakan) ಚಿತ್ರಕ್ಕಾಗಿ ಈ ಹಾಡನ್ನು ಮರುಸೃಷ್ಟಿ (Remake) ಮಾಡಲಾಯಿತು. ಮಿಕಾ ಸಿಂಗ್ ಮತ್ತು ಪ್ರಕೃತಿ ಕಕ್ಕರ್ ಹಾಡಿರುವ ಈ ಹೊಸ ಆವೃತ್ತಿಯು ಇಂದಿನ ಯುವಜನತೆಗೆ ತಕ್ಕಂತೆ ಮಾರ್ಪಾಡು ಮಾಡಿ ಹಾಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net