ಯಾಮಿ ಗೌತಮ್ ಸೌಂದರ್ಯದ ರಹಸ್ಯ ದುಬಾರಿ ಕ್ರೀಮ್‌ಗಳಲ್ಲ, ಕಿಚನ್‌ನಲ್ಲಿರೋ ಈ ಒಂದು ವಸ್ತು! Yami Gautam

Yami Gautam ಚಿತ್ರ Instagram
Yami Gautam ಚಿತ್ರ Instagram
Published on
Yami Gautam: ಬಾಲಿವುಡ್​ ನಟಿ ಯಾಮಿ ಗೌತಮ್ ತನ್ನ ನೈಸರ್ಗಿಕ ಹೊಳೆಯುವ ಚರ್ಮಕ್ಕೆ ಹೆಸರುವಾಸಿಯಾದ ನಟಿ. ತನ್ನ ಸುಂದರವಾದ ಚರ್ಮದ ರಹಸ್ಯಕ್ಕೆ ದುಬಾರಿ ಉತ್ಪನ್ನಗಳನ್ನು ಬಳಸುವುದಿಲ್ಲ. ಬದಲಾಗಿ ಸರಳವಾದ ನೈಸರ್ಗಿಕ ಪುಡಿಗಳನ್ನು ಬಳಸುವುದಾಗಿ ಬಹಿರಂಗಪಡಿಸಿದ್ದಾರೆ.
ಈ ನಟಿ ಇತ್ತೀಚೆಗೆ ನಡೆದ ಪಾಡ್​ಕ್ಯಾಸ್ಟ್​ನಲ್ಲಿ ತನ್ನ ಚರ್ಮದ ಆರೈಕೆಯ ಬಗ್ಗೆ ಮಾತಮಾಡುತ್ತಾ, ನನ್ನ ಹೊಳೆಯುವ ಚರ್ಮಕ್ಕಾಗಿ ಅರಿಶಿನವನ್ನು ಮಾತ್ರ ಬಳಸುವುದಾಗಿ ತಿಳಿಸಿದ್ದಾರೆ.
ಯಾಮಿ ಹೇಳುವಂತೆ ಆಕೆಯ ಚರ್ಮವು ಬಹಳ ಸೂಕ್ಷ್ಮವಾಗಿದೆ. ಹಾಗಾಗಿ ಆಕೆ ಮುಖಕ್ಕೆ ಏನಾದರೂ ಹಚ್ಚಿಕೊಳ್ಳುವ ಮೊದಲು ಯೋಚನೆ ಮಾಡುವುದಾಗಿ ತಿಳಿಸಿದ್ದಾರೆ. ಆದಾಗ್ಯೂ, ಚಿತ್ರೀಕರಣ ಸಂದರ್ಭದಲ್ಲಿ ಅರಿಶಿನ ಮತ್ತು ಮುಲ್ತಾನಿ ಮಿಟ್ಟಿ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡಾಗ ಚರ್ಮದಲ್ಲಿ ವ್ಯತ್ಯಾಸವಾಗಿದ್ದನ್ನು ಗಮನಿಸಿರುವುದಾಗಿ ತಿಳಿಸಿದ್ದಾರೆ.

ಅರಿಶಿನವು ಚರ್ಮಕ್ಕೆ ಹೇಗೆ ಪ್ರಯೋಜನಕಾರಿಯಾಗಿದೆ?

ಅರಿಶಿನವು ಚರ್ಮಕ್ಕೆ ಅತ್ಯುತ್ತಮ ಪ್ರಯೋಜನಕಾರಿಯಾಗಿದ್ದು, ಇದು ಕರ್ಕ್ಯುಮಿನ್ ಸಂಯುಕ್ತದಿಂದ ಕೂಡಿದ್ದು, ಆಂಟಿ-ಇನ್‌ಫ್ಲಮೇಟರಿ ಗುಣಗಳನ್ನು ಹೊಂದಿದೆ. ಇದು ಮುಖದಲ್ಲಿರುವ ಮೊಡವೆಗಳು, ಎಣ್ಣೆಯುಕ್ತ ತೇವಾಂಶವನ್ನು ತೆಗೆಯಲು ಸಹಾಯ ಮಾಡುತ್ತದೆ.
ಹಾಗೆಯೇ ಅರಿಶಿನವು ಚರ್ಮದ ವಿನ್ಯಾಸವನ್ನು ಸುಧಾರಿಸುವುದರ ಜೊತೆಗೆ ಸೂರ್ಯನಿಂದ ಉಂಟಾಗುವ ಕಲೆಗಳನ್ನು ಕಡಿಮೆ ಮಾಡುತ್ತದೆ. ಕಾಲಾಜನ್​ ಉತ್ಪಾದಿಸಿ ಬಿಸಿಲಿನಿಂದ ಚರ್ಮವನ್ನು ರಕ್ಷಿಸುತ್ತದೆ.
ಅರಿಶಿನಕ್ಕೆ ಸ್ವಲ್ಪ ಮೊಸರು ಅಥವಾ ಕೆನೆಯನ್ನು ಸೇರಿಸಿ ಹಚ್ಚುವುದರಿಂದ ಚರ್ಮದಲ್ಲಾಗುವ ಕಪ್ಪು ಕಲೆಗಳು, ಕಣ್ಣಿನ ವರ್ತುಲಗಳಲ್ಲಾಗುವ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಚರ್ಮದಲ್ಲಿರುವ ಸತ್ತ ಕೋಶಗಳನ್ನು ತೆಗೆದುಹಾಕಿ, ಸೋಂಕನ್ನು ಕಡಿಮೆ ಮಾಡುತ್ತದೆ.

ಅರಿಶಿನ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್

ಅರಿಶಿನ ಮತ್ತು ಮುಲ್ತಾನಿ ಮಿಟ್ಟಿ ಫೇಸ್ ಪ್ಯಾಕ್ ಮಾಡಲು, ಮೊದಲು ಒಂದು ಬೌಲ್​ಗೆ ಟೀ ಚಮಚ ಮುಲ್ತಾನಿ ಮಿಟ್ಟಿ , 1 ಟೀ ಚಮಚ ಅರಿಶಿನ ಪುಡಿ ಹಾಗೂ ಸ್ವಲ್ಪ ರೋಸ್​ ವಾಟರ್​ ಸೇರಿಸಿ ಪೇಸ್ಟ್​ ಮಾಡಿ ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದು ಮುಖದಲ್ಲಿ ತೇವಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಮುಲ್ತಾನಿ ಮಿಟ್ಟಿ ಚರ್ಮದಿಂದ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕುವುದರ ಜೊತೆಗೆ ರಂಧ್ರಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಹಾಗೂ ಅರಿಶಿನವು ಮೊಡವೆಗಳನ್ನು ನಿವಾರಿಸುತ್ತದೆ ಮತ್ತು ಚರ್ಮದಲ್ಲಾದ ಕಲೆಗಳನ್ನು ತೆಗೆದುಹಾಕುತ್ತದೆ. ಒಟ್ಟಿಗೆ ಹಚ್ಚಿದಾಗ, ಮುಖದ ಮಂದತೆ ಮಾಯವಾಗಿ ನೈಸರ್ಗಿಕ ಹೊಳಪನ್ನು ನೀಡುತ್ತದೆ (ಏಜೆನ್ಸೀಸ್​).
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net