ಅದು ಅತ್ಯಂತ ಭಯಾನಕ ಕ್ಷಣಗಳಲ್ಲಿ ಒಂದು...ಕೊನೆಗೂ ಮೌನ ಮುರಿದ ನೋರಾ ಫತೇಹಿ! Nora Fatehi

ಚಿತ್ರ Instagram
ಚಿತ್ರ Instagram
Published on
Nora Fatehi: ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ನಟಿ ನೋರಾ ಫತೇಹಿ, ಕೆಲವೇ ಗಂಟೆಗಳಲ್ಲಿ ಮುಂಬೈನಲ್ಲಿ ಡಿಜೆ ಡೇವಿಡ್​ ಗುಲ್ಟಾ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು, ಈ ವೇಳೆ ಮಾತನಾಡಿದ ಅವರು ಸಂಭವಿಸಿದ ಅಪಘಾತದ ಬಗ್ಗೆ ಮಾತನಾಡುತ್ತಾ, ಇದು ನನ್ನ ಜೀವನದ ಅತ್ಯಂತ ಭಯಾನಕ ಕ್ಷಣಗಳಲ್ಲಿ ಒಂದು ಎಂದು ಹೇಳಿಕೊಂಡಿದ್ದಾರೆ.
ಅಪಘಾತದ ಸಮಯದಲ್ಲಿ ನನ್ನ ತಲೆ ಕಾರಿನ ಕಿಟಿಕಿಗೆ ಡಿಕ್ಕಿ ಹೊಡೆದ ನಂತರ ಸ್ವಲ್ಪ ನೋವನ್ನು ಅನುಭವಿಸುತ್ತಿದ್ದೇನೆ. ಆದರೆ, ಅಪಘಾತದಲ್ಲಿ ಬದುಕುಳಿದಿರುವುದಕ್ಕೆ ಕೃತಜ್ಞರಾಗಿದ್ದೇನೆ ಎಂದು ಹೇಳಿದರು.
ಶನಿವಾರ ಮಧ್ಯಾಹ್ನ ಮುಂಬೈನಲ್ಲಿ ನೋರಾ ಅವರ ಕಾರು ಅಪಘಾತಕ್ಕೀಡಾಯಿತು. ನಂತರ ಅಪಘಾತದ ಘಟನೆಯನ್ನು ವಿವರಿಸುವ ಕೆಲವು ಸಣ್ಣ ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡ ನೋರಾ, ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ತನ್ನ ಕಾರನ್ನು ನನ್ನ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಹೇಳಿದ್ದಾರೆ.
ಹೇ ಹುಡುಗರೇ, ನಾನು ಚೆನ್ನಾಗಿದ್ದೇನೆ ಎಂದು ನಿಮಗೆ ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ. ಹೌದು, ಇಂದು ಮಧ್ಯಾಹ್ನ ನಾನು ನಿಜವಾಗಿಯೂ ಗಂಭೀರವಾದ ಕಾರು ಅಪಘಾತಕ್ಕೆ ಒಳಗಾಗಿದ್ದೆ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ನನ್ನ ಕಾರನ್ನು ಪುಡಿಪುಡಿಗೊಳಿಸಿದನು. ಆದರೆ, ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ನಾನು ಬದುಕುಳಿದೆ ಎಂದು ಅವರು ತಿಳಿಸಿದ್ದಾರೆ.
ನಾನು ಜೀವಂತವಾಗಿದ್ದೇನೆ ಮತ್ತು ಆರೋಗ್ಯವು ಉತ್ತಮವಾಗಿದೆ. ಕೆಲವು ಸಣ್ಣಪುಟ್ಟ ಗಾಯಗಳು, ಊತ ಮತ್ತು ಸ್ವಲ್ಪ ಆಘಾತವನ್ನು ಹೊರತುಪಡಿಸಿ ಆರೋಗ್ಯವಾಗಿದ್ದೇನೆ ಎಂದರು. ದಯವಿಟ್ಟು ಯಾರು ಮದ್ಯಪಾನ ಮಾಡಿ ವಾಹವವನ್ನು ಚಲಾಯಿಸಬೇಡಿ ಎಂದು ಹೇಳಿದರು.

ಕುಡಿದು ವಾಹನ ಚಲಾಯಿಸುವುದನ್ನು ಖಂಡಿಸಿದ ನೋರಾ!

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ನೋರಾ, ಮದ್ಯ ಮತ್ತು ಮಾದಕ ದ್ರವ್ಯ ಸೇವನೆಯ ಬಗ್ಗೆ ತನ್ನ ಅಭಿಪ್ರಾಯಗಳ ಬಗ್ಗೆ ಮಾತನಾಡಿದರು. ಮದ್ಯ, ಮಾದಕ ದ್ರವ್ಯಗಳು ಅಥವಾ ವ್ಯಕ್ತಿಯ ಮನಸ್ಥಿತಿ ಅಥವಾ ಜಾಗರೂಕತೆಯನ್ನು ಬದಲಾಯಿಸುವ ಯಾವುದರ ಕಲ್ಪನೆಯೂ ನನಗೆ ಇಷ್ಟವಿಲ್ಲ ಎಂದು ತಿಳಿಸಿದರು.
ಇದು ಮಧ್ಯಾಹ್ನ 3 ಗಂಟೆಗೆ ಸಂಭವಿಸಿದ ಸನ್ನಿವೇಶವನ್ನು ಇಲ್ಲಿಯವರೆಗೂ ನಂಬಲು ಸಾಧ್ಯವಾಗುತ್ತಿಲ್ಲ. ಯಾರಾದರೂ ಕುಡಿದು ವಾಹನ ಚಲಾಯಿಸಿ ಜನರನ್ನು ಅಪಾಯಕ್ಕೆ ಸಿಲುಕಿಸುತ್ತಾರೆ ಎಂಬುದಕ್ಕೆ ಊಹಿಸಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ಸಮಯದವರೆಗೆ ನೋವಿನಿಂದ ಬಳಲುತ್ತೇನೆ. ಆದರೆ, ದೇವರಿಗೆ ಧನ್ಯವಾದಗಳು ನಾನು ಜೀವಂತವಾಗಿದ್ದೇನೆ ಎಂದು ನೋರಾ ವಿಷಾದಿಸಿದರು.

ಅಪಘಾತದ ಹಿನ್ನಲೆ

ಮುಂಬೈನಲ್ಲಿ ಡಿಜೆ ಡೇವಿಡ್ ಗುಟ್ಟಾ ಅವರ ಸಂಗೀತ ಕಚೇರಿಯಲ್ಲಿ ಭಾಗವಹಿಸಲು ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯೊಬ್ಬ ನೋರಾಳ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಆಕೆಯನ್ನು ಚಿಕಿತ್ಸೆಗಾಗಿ ಹತ್ತಿರ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net