ಕಣ್ಣಿಗೆ ಬ್ಯಾಂಡೇಜ್ ಧರಿಸಿ ಆಸ್ಪತ್ರೆಯಿಂದ ಹೊರಬಂದ ನಿಕ್ಕಿ ತಂಬೋಲಿ! ಈಗ ಹೇಗಿದ್ದಾರೆ ನಟಿ?.. Nikki Tamboli

 Nikki Tamboli
Nikki Tamboli
Published on
ಮುಂಬೈ: ( Nikki Tamboli ) ಬಾಲಿವುಡ್ ನಟಿ ಮತ್ತು ಹಿಂದಿ ಬಿಗ್ ಬಾಸ್ ಖ್ಯಾತಿಯ ನಿಕ್ಕಿ ತಂಬೋಲಿ ಅವರು ಇತ್ತೀಚೆಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದೀಗ ನಟಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ನಿಕ್ಕಿ ತಂಬೋಲಿ ಅವರಿಗೆ ಕಣ್ಣಿನ ರೆಪ್ಪೆಯಲ್ಲಿ 'ಚಾಲಾಜಿಯಾನ್' (Chalazion) ಎಂಬ ಸಮಸ್ಯೆಯಾಗಿತ್ತು. ಇದು ಕಣ್ಣಿನ ರೆಪ್ಪೆಯ ತೈಲ ಗ್ರಂಥಿಗಳಲ್ಲಿ (Oil Glands) ಉಂಟಾಗುವ ಅಡೆತಡೆಯಿಂದಾಗಿ ಬರುವ ಒಂದು ರೀತಿಯ ಗಂಟು ಅಥವಾ ಸಿಸ್ಟ್ (Cyst) ಆಗಿದೆ.
ಆರಂಭದಲ್ಲಿ ಇದನ್ನು ಸಣ್ಣ ಸಮಸ್ಯೆ ಎಂದು ನಿರ್ಲಕ್ಷಿಸಲಾಗಿತ್ತು. ಆದರೆ ಇನ್ಫೆಕ್ಷನ್ ಹೆಚ್ಚಾಗಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರು ತುರ್ತು ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದರು. ಹೀಗಾಗಿ ಇವರು ಕಣ್ಣೀನ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎನ್ನಲಾಗಿದೆ.
ನಾವು ಪ್ರತಿದಿನ ಕಾಡಿಗೆ, ಮಸ್ಕರಾ ಮತ್ತು ಕಣ್ಣಿನ ಮೇಕಪ್ ಬಳಸುತ್ತೇವೆ. ಸರಿಯಾಗಿ ಮೇಕಪ್ ತೆಗೆಯದಿದ್ದರೆ ಅಥವಾ ಮೈಕ್ರೋಸ್ಕೋಪಿಕ್ ಕಣಗಳು ಅಲ್ಲಿಯೇ ಉಳಿದುಕೊಂಡರೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ.
2018ರಲ್ಲೂ ನನಗೆ ಇದೇ ತೊಂದರೆಯಾಗಿತ್ತು. ಸರಿಯಾದ ಸ್ಕಿನ್ ಕೇರ್ ಬಗ್ಗೆ ಮಾಹಿತಿ ಇಲ್ಲದಿದ್ದ ಕಾರಣ ಈ ಹಿಂದೆ ತೊಂದರೆ ಅನುಭವಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಶಸ್ತ್ರಚಿಕಿತ್ಸೆಯ ನಂತರ ನಿಕ್ಕಿ ತಂಬೋಲಿ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "ಎಲ್ಲವೂ ಚೆನ್ನಾಗಿದೆ" (All is well) ಎಂದು ಬರೆದುಕೊಂಡಿದ್ದಾರೆ. ಸದ್ಯ ಅವರು ವಿಶ್ರಾಂತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಕ್ಯಾಮೆರಾ ಮುಂದೆ ಮರಳುವುದಾಗಿ ತಿಳಿಸಿದ್ದಾರೆ. ಆಸ್ಪತ್ರೆಯಿಂದ ಹೊರಬರುವಾಗ ಅವರ ಗೆಳೆಯ ಅರ್ಬಾಜ್ ಪಟೇಲ್ ಕೂಡ ಅವರ ಜೊತೆಗಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net