66 ನೇ ವಯಸ್ಸಿನಲ್ಲಿ ಗರ್ಭಿಣಿಯಾದ್ರಾ ನಟಿ ನೀನಾ ಗುಪ್ತಾ? ಈ ಬಗ್ಗೆ ಗುಪ್ತಾ ಹೇಳಿದ್ದೇನು..Neena Gupta

ಚಿತ್ರ Instagram
ಚಿತ್ರ Instagram
Published on

ಪ್ರಮುಖ ಮುಖ್ಯಾಂಶಗಳು

  • ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಯಾವಾಗಲೂ ತಮ್ಮ ನೇರ ಮಾತು ಮತ್ತು ಬಿಂದಾಸ್​ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದರು
  • ಗುಪ್ತಾ 66 ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾರೆ ಎಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಡಿದೆ
  • ಹೈದರಾಬಾದ್‌ನಲ್ಲಿ ನಡೆದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆಯಲ್ಲಿ ಗುಪ್ತಾ ಭಾಗಿ
Neena Gupta: ಬಾಲಿವುಡ್‌ನ ಹಿರಿಯ ನಟಿ ನೀನಾ ಗುಪ್ತಾ ಯಾವಾಗಲೂ ತಮ್ಮ ನೇರ ಮಾತು ಮತ್ತು ಬಿಂದಾಸ್​ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದರು. ಆದರೆ, ಇತ್ತೀಚಿಗೆ ಗುಪ್ತಾ 66 ನೇ ವಯಸ್ಸಿನಲ್ಲಿ ಗರ್ಭಿಣಿಯಾಗಿದ್ದಾರೆ ಎಂಬ ವದಂತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ಹರಡಲು ಪ್ರಾರಂಭಿಸಿತ್ತು.

ವದಂತಿ ಹುಟ್ಟಿಕೊಂಡಿದ್ದು ಹೇಗೆ?

ಫೆಬ್ರವರಿ ಕೊನೆಯಲ್ಲಿ ಹೈದರಾಬಾದ್‌ನಲ್ಲಿ ನಡೆದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆಯಲ್ಲಿ ಗುಪ್ತಾ ಭಾಗವಹಿಸಿದ್ದರು. ಈ ವೇಳೆ ಕೆಲವೊಂದು ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಆ ಚಿತ್ರಗಳಿಗೆ ಕೆಲವು ನೆಟ್ಟಿಗರು ನಟಿಯ ಹೊಟ್ಟೆ ಮೇಲೆ ಬೇಬಿ ಬಂಪ್​ ಕಾಣಿಸುತ್ತಿದೆ ಎಂದು ಕಾಮೆಂಟ್​ ಮಾಡಲು ಪ್ರಾರಂಭಿಸಿದರು. ಇದು ನೋಡು ನೋಡುತ್ತಲೇ, ನೀನಾ ಗುಪ್ತಾ ಗರ್ಭಿಣಿ ಎಂಬ ಸುದ್ದಿಯಾಗಿ ಹೊರಹೊಂಬಿತು.
ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ, ಗುಪ್ತಾ ವದಂತಿಗಳನ್ನು ತಳ್ಳಿ ಹಾಕಿದ್ದು, ನಾನು ಗರ್ಭಿಣಿಯಲ್ಲ. ಸತ್ಯವೆಂದರೆ ಸೀರೆ ದಪ್ಪವಾಗಿತ್ತು. ಆ ಕಾರಣ ನಾನು ಆ ರೀತಿ ಕಾಣಿಸಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಆದಾಗ್ಯೂ, ಈ ವದಂತಿ ಬೇಸರ ತರುವ ಬದಲಿಗೆ ತಮಾಷೆಯಾಗಿದೆ. ನನ್ನ ವಯಸ್ಸಿನಲ್ಲಿಯೂ ನಾನು ಗರ್ಭಿಣಿಯಾಗಬಹುದು ಎಂದು ಜನರು ಯೋಚಿಸುತ್ತಿದ್ದಾರೆ ಎಂದರೆ, ಅದು ನಾವು ಒಂದು ರಾಷ್ಟ್ರವಾಗಿ ಎಷ್ಟು ವಿಕಸನಗೊಳ್ಳುತ್ತಿದ್ದೇವೆ ಎಂಬುದನ್ನು ತೋರಿಸುತ್ತದೆ ಎಂದು ನಟಿ ಅಭಿಪ್ರಾಯ ಹಂಚಿಕೊಂಡರು.
ಅವಳ ವೈಯಕ್ತಿಕ ಜೀವನ ಇನ್ನೂ ಗಮನ ಸೆಳೆಯುವುದು ಏಕೆ?
ಗುಪ್ತಾ ತಮ್ಮ ವೈಯಕ್ತಿಕ ಪ್ರಯಾಣದ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಅವರು ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿದ್ದಾರೆ. 1980ರ ದಶಕದಲ್ಲಿ ಮಾಜಿ ಕ್ರಿಕೆಟಿಗ ವಿವ್ ರಿಚರ್ಡ್ಸ್ ಅವರೊಂದಿಗಿನ ಸಂಬಂಧ ಹೊಂದಿದ ನಂತರ ಅವರು ಗರ್ಭಿಣಿಯಾದರು. ನಂತರ ಮಗುವನ್ನು ಒಂಟಿ ತಾಯಿಯಾಗಿ ಬೆಳೆಸಿರುವುದರ ಬಗ್ಗೆ ಅವರು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದರು.
ಇದಾದ ಬಳಿಕ 2008 ರಲ್ಲಿ ದೆಹಲಿ ಮೂಲದ ವಿವೇಕ್ ಮೆಹ್ರಾ ಅವರನ್ನು ವಿವಾಹವಾದರು. ಜೀವನದ ಆಯ್ಕೆಗಳು, ವೃತ್ತಿ ಹೋರಾಟಗಳು ಮತ್ತು ತಾಯ್ತನದ ಬಗ್ಗೆ ಚರ್ಚಿಸುವ ಅವರ ವಿಧಾನವು ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುತ್ತದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net