ಪಾಕಿಸ್ತಾನದ ರಾಜಕಾರಣಿ ನಬೀಲ್ ಗಬೋಲ್ಗೆ ಕೌಂಟರ್ ಕೊಟ್ಟ ರಾಕೇಶ್ ಬೇಡಿ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಧುರಂಧರ್2
ಜಮೀಲ್ ಜಮಾಲಿ ಪಾತ್ರ ನನ್ನನ್ನೇ ಆಧರಿಸಿ ಚಿತ್ರಿಸಿದ ಪಾತ್ರ ಎಂದಿದ್ದ ಪಾಕ್ ಸಂಸದ ನಬೀಲ್ ಗಬೋಲ್
ನನ್ನಪ್ಪ ಪಾಕಿಸ್ತಾನಕ್ಕೆ ಹೋಗಿಲ್ಲ ಎಂದು ಕೌಂಟರ್ ಕೊಟ್ಟ ಜಮೀಲ್ ಜಮಾಲಿ ಪಾತ್ರಧಾರಿ ರಾಕೇಶ್ ಬೇಡಿ
ಮುಂಬೈ: ಸದ್ಯ ಬಾಕ್ಸ್ ಆಫೀಸ್ನಲ್ಲಿ ತನ್ನ ನಾಗಾಲೋಟದ ಮೂಲಕ ಪ್ಷೇಕ್ಷಕರ ಮನವನ್ನು ಗೆದ್ದಿರುವ ಸಿನಿಮಾ ಯಾವುದೆಂದರೆ ಅದು ಧುರಂಧರ್ 2 ದಿ ರಿವೆಂಜ್ ಎಂದೇ ಹೇಳುತ್ತಾರೆ. ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮತ್ತು ಆದಿತ್ಯ ಧರ್ ನಿರ್ದೇಶಿಸಿರುವ ಈ ಸಿನಿಮಾ ಈಗಾಗಲೇ 1,800 ಕೋಟಿ ಕಲೆಕ್ಷನ್ ಮಾಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 2,000 ಕೋಟಿ ಗುರಿಯನ್ನು ತಲುಪಲಿದೆ ಎಂದು ಹೇಳಲಾಗುತ್ತಿದೆ.
ನನ್ನಪ್ಪ ಪಾಕಿಸ್ತಾನಕ್ಕೆ ಹೋಗಿಲ್ಲ!
ಈ ಸಿನಿಮಾದಲ್ಲಿರುವ ಬಹುಮುಖ್ಯ ಪಾತ್ರಗಳಲ್ಲಿ ಹಿರಿಯ ನಟ ರಾಕೇಶ್ ಬೇಡಿ (Rakesh Bedi on Nabil Gabol) ನಟಿಸಿರುವ ಜಮೀಲ್ ಜಮಾಲಿ ಪಾತ್ರ ಪ್ರಮುಖವಾಗಿದೆ. ಪಾಕಿಸ್ತಾನದ ರಾಜಕಾರಣಿಯ ಪಾತ್ರದಲ್ಲಿ ರಾಕೇಶ್ ಬೇಡಿ ಜನರ ಮೆಚ್ಚುಗೆಯನ್ನು ಪಡೆದಿದ್ದಾರೆ.
ಆದರೆ ಈ ಪಾತ್ರವು ಪಾಕಿಸ್ತಾನದ ರಾಜಕಾರಣಿ ನಬೀಲ್ ಗಬೋಲ್ ಅವರನ್ನು ಹೋಲುತ್ತಿದೆ ಎಂದು ಕೆಲವರು ಹೇಳಿದ್ದರು. ಹಾಗೆಯೇ ಸ್ವತಃ ನಬೀಲ್ ಗಬೋಲ್ ಅವರೇ ಈ ಪಾತ್ರ ನನ್ನನ್ನು ನೋಡಿಯೇ ಚಿತ್ರಿಸಿದ್ದಾರೆ ಎಂದು ಹೇಳಿದ್ದರು.
ಆದರೆ ಈಗ ಈ ಪ್ರಶ್ನೆಗೆ ಉತ್ತರಿಸಿರುವ ರಾಕೇಶ್ ಬೇಡಿ, ನನ್ನಪ್ಪ ಯಾವುತ್ತೂ ಪಾಕಿಸ್ತಾನಕ್ಕೆ ಹೋಗಿಲ್ಲ, ಗಬೋಲ್ ಅವರ ಅಪ್ಪ ಭಾರತಕ್ಕೆ ಬಂದಿಲ್ಲ. ಆದ್ದರಿಂದ ಈ ಜಮೀಲ್ ಜಮಾಲಿ ಪಾತ್ರ ಕೇಲವ ಕಾಲ್ಪನಿಕವಾಗಿದ್ದು, ಪಾಕಿಸ್ತಾನದಲ್ಲಿರುವ ಹಲವಾರು ರಾಜಕಾರಣಿಗಳನ್ನು ಅಭ್ಯಸಿಸಿ ತಯಾರಿಸಿದ ಪಾತ್ರ ಇದಾಗಿದೆ ಎಂದು ಬೇಡಿ ಹೇಳಿದ್ದಾರೆ.
ನೈಜತೆ ಮತ್ತು ಕಲ್ಪನೆಗೆ ವ್ಯತ್ಯಾಸವಿದೆ
ಈ ಸಿನಿಮಾ ನೈಜ ಘಟನೆಗಳನ್ನು ಆಧರಿಸಿ ಕಾಲ್ಪನಿಕವಾಗಿ ತಯಾರಿಸಿದ ಸಿನಿಮಾವಾಗಿದೆ. ಇದೇನು ಡಾಕ್ಯುಮೆಂಟರಿ ಅಲ್ಲ, ಮತ್ತು ಈ ಸಿನಿಮಾದಲ್ಲಿ ತೋರಿಸಿರುವುದೆಲ್ಲ ಸತ್ಯವಲ್ಲ ಎಂದು ರಾಕೇಶ್ ಬೇಡಿ ಹೇಳಿದ್ದಾರೆ. ನಾನು ನಬೀಲ್ ಗಬೋಲ್ ಅವರ ಅಭಿಪ್ರಾಯವನ್ನು ಗೌರವಿಸುತ್ತೆನೆ, ಆದರೆ ನಾನು ನಿರ್ವಹಿಸಿದ ಪಾತ್ರ ಅವರದ್ದೆ ಎಂದರೆ ಅದನ್ನು ನಾನು ಒಪ್ಪುವುದಿಲ್ಲ ಎಂದು ರಾಕೇಶ್ ಬೇಡಿ ತಿಳಿಸಿದ್ದಾರೆ.
ಧುರಂಧರ್ 2 ಇದು ಧುರಂಧರ್ ಸಿನಿಮಾದ ಎರಡನೇ ಭಾಗವಾಗಿದೆ. ಈ ಸಿನಿಮಾವು ಕರಾಚಿಯ ಲಿಯಾರಿಗೆ ತೆರಳಿರುವ ಭಾರತದ ಗುಪ್ತಚರನ ಕುರಿತು ನಿರ್ಮಿಸಲಾಗಿರುವ ಒಂದು ಕಾಲ್ಪನಿಕ ಕಥೆಯಾಗಿದೆ. ಅದರೆ ಈ ಸಿನಿಮಾದಲ್ಲಿ ಹಲವು ನೈಜ ಘಟನೆಗಳ ಸನ್ನಿವೇಶಗಳನ್ನು ಸೇರಿಸಿಕೊಂಡಿರುವ ಕಾರಣ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಸಿನಿಮಾದಲ್ಲಿ ರಣವೀರ್ ಸಿಂಗ್, ರಾಕೇಶ್ ಬೇಡಿ, ಆರ್.ಮಾಧವನ್, ಅರ್ಜುನ್ ರಾಂಪಾಲ್, ಡ್ಯಾನಿಶ್ ಇಕ್ಬಾಲ್, ಸಾರಾ ಅರ್ಜುನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾದ ನಿರ್ದೇಶಕ ಆದಿತ್ಯ ಧರ್ ಈ ಸಿನಿಮಾದ ನಿರ್ದೇಶಕರಾಗಿದ್ದಾರೆ,(ಏಜನ್ಸೀಸ್).