ಮನೀಷಾ ಕೊಯ್ರಾಲಾ ಅವರು 90ರ ದಶಕದಲ್ಲಿ ಬಾಂಬೆ (1995), ಇಂಡಿಯನ್ (1996), ಮುದಲ್ವನ್ (1999), ಆಳವಂದನ್ ಮುಂತಾದ ತಮಿಳು ಹಾಗೂ ದಕ್ಷಿಣ ಚಿತ್ರಗಳಲ್ಲಿ ನಟಿಸಿ ಭಾರೀ ಜನಪ್ರಿಯತೆ ಗಳಿಸಿದ್ದರು. ರಜನಿಕಾಂತ್ ಅವರೇ ನಿರ್ಮಾಪಕರಾಗಿ, ಕಥೆ-ಚಿತ್ರಕಥೆ ಬರೆದು ನಟಿಸಿದ 'ಬಾಬಾ' ಚಿತ್ರದಲ್ಲಿ ಹೀರೋಯಿನ್ ಆಗಿ ಅವರು ನಟಿಸಿದ್ದರು. ಆದರೆ, ಚಿತ್ರವು ದೊಡ್ಡ ವೈಫಲ್ಯವಾದ ನಂತರ ದಕ್ಷಿಣದಿಂದ ಆಫರ್‌ಗಳು ಸಂಪೂರ್ಣ ಬಂದ್ ಆಯಿತು. "ಬಾಬಾ ನನ್ನ ಕೊನೆಯ ದೊಡ್ಡ ತಮಿಳು ಚಿತ್ರವಾಗಿತ್ತು. ಅದು ಭಾರೀ ವೈಫಲ್ಯವಾಯಿತು. ನಂತರ ದಕ್ಷಿಣದಲ್ಲಿ ನನ್ನ ವೃತ್ತಿಜೀವನ ಸಂಪೂರ್ಣ ಕೊನೆಯಾಯಿತು" ಎಂದು ಮನೀಷಾ ಹೇಳಿದ್ದಾರೆ.