Mumtaz Emotional Talks on Rajesh Khanna Bungalow: ಮುಂಬೈನ ಕಾರ್ಟರ್ ರೋಡ್ನಲ್ಲಿರುವ ರಾಜೇಶ್ ಖನ್ನಾ ಅವರ ಐಕಾನಿಕ್ ಬಂಗಲೆ 'ಆಶೀರ್ವಾದ್' ಇತಿಹಾಸದ ಪುಟ ಸೇರಿದೆ. ಈ ಕಟ್ಟಡದ ನೆಲಸಮದ ಬಗ್ಗೆ ಹಿರಿಯ ನಟಿ ಮುಮ್ತಾಜ್ ತೀವ್ರ ಅಸಮಾಧಾನ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಆ ಬಂಗಲೆ ಕೇವಲ ಒಂದು ಮನೆಯಲ್ಲ, ಅದೊಂದು ಸ್ಮಾರಕವಾಗಿತ್ತು ಎಂದು ಅವರು ಬಣ್ಣಿಸಿದ್ದಾರೆ.